More

    ಯುವ ಅಭಿನಯದ ಸಿನಿಮಾದಲ್ಲಿ ಐಶ್ವರ್ಯಾ ನಟಿಸುತ್ತಿರುವುದು ಸುಳ್ಳು ಎಂದ ಪ್ರಿಯಾಂಕಾ ಉಪೇಂದ್ರ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಂಥದ್ದೊಂದು ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಅದಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ಖುದ್ದು ಐಶ್ವರ್ಯಾ ಅವರ ತಾಯಿ ಪ್ರಿಯಾಂಕಾ ಉಪೇದ್ರ, ತಮ್ಮ ಮಗಳು ಯುವ ರಾಜಕುಮಾರ್​ ಅಭಿನಯದ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಇದನ್ನೂ ಓದಿ: ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೋಗಳು ಬಹಿರಂಗ

    ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಮಗಳು ಐಶ್ವರ್ಯಾಗೆ ಅಭಿನಯ ಹೊಸದಲ್ಲ. ಈಗಾಗಲೇ ಐಶ್ವರ್ಯಾ, ‘ದೇವಕಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಪ್ರಿಯಾಂಕಾ ಮತ್ತು ಐಶ್ವರ್ಯಾ ಅಮ್ಮ-ಮಗಳಾಗಿಯೇ ಕಾಣಿಸಿಕೊಂಡಿದ್ದರು.

    ಅದಾಗಿ ಕೆಲವು ವರ್ಷಗಳೇ ಆಗಿವೆ. ಇದೀಗ ಐಶ್ವರ್ಯಾ, ಯುವ ರಾಜಕುಮಾರ್​ ನಾಯಕನಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಐಶ್ವರ್ಯಾ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಮೊದಲು ಆಕೆ ಯುವಗೆ ನಾಯಕಿಯಾಗಿ ನಟಿಸುತ್ತಾರೆ ಎಂದು ಶುರುವಾಗಿದ್ದು, ಕೊನೆಗೆ ನಾಯಕಿಯಲ್ಲವಂತೆ, ಯುವರಾಜ್​ ತಂಗಿಯಾಗಿ ಐಶ್ವರ್ಯಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಈ ವಿಷಯವಾಗಿ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್​ ಸಂಸ್ಥೆಯಿಂದಾಗಲೀ, ಉಪೇಂದ್ರ ದಂಪತಿಗಳಿಂದಾಗಲೀ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ.

    ಇದನ್ನೂ ಓದಿ: ‘ಬಾಂಡ್ ರವಿ’ ದೊಡ್ಡ ಬ್ರಾಂಡ್​ ಆಗೋದು ನಿಜ … ಪ್ರಮೋದ್​ ಭವಿಷ್ಯ

    ಇದೀಗ ಪ್ರಿಯಾಂಕಾ ಉಪೇಂದ್ರ ಈ ವಿಷಯವಾಗಿ ಮಾತನಾಡಿದ್ದಾರೆ. ತಮ್ಮ ಮಗಳು ನಟಿಸುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ‘ವಿಜಯವಾಣಿ’ಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ಅದೊಂದು ಫೇಕ್​ ಸುದ್ದಿ ಎಂದು ಹೇಳಿದ್ದಾರೆ.

    ಸಾಯಿಬಾಬ ಕುರಿತು ಕನ್ನಡದಲ್ಲಿ ಇನ್ನೊಂದು ಸಿನಿಮಾ; ಈ ಬಾರಿ ಮಕ್ಕಳೇ ಪಾತ್ರಧಾರಿಗಳು …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts