More

    ಬಳಸದ 8 ಕೋಟಿ ರೂ. ಕಾರನ್ನು ಬೆಂಗಳೂರಿನ ಉದ್ಯಮಿಗೆ ಮಾರಿದ ನಟಿ ಪ್ರಿಯಾಂಕಾ ಚೋಪ್ರಾ!

    ನಟಿ ಪ್ರಿಯಾಂಕಾ ಚೋಪ್ರಾ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ, ನಟಿ ಪ್ರಿಯಾಂಕಾ ಚೋಪ್ರಾ ಅವರು ಒಂದು ಕಾರು ಮಾರಿದ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಳಿ ಹಲವು ಐಷಾರಾಮಿ ಕಾರುಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೌದು, ಕೋಟಿ ಕೋಟಿ ಬೆಲೆ ಬಾಳುವ ಹಲವು ಐಷಾರಾಮಿ ಬ್ರ್ಯಾಂಡೆಡ್ ಕಾರುಗಳು ಅವರ ಬಳಿ ಇವೆ. ಇನ್ನು, ಅವರ ಬಳಿ ಇರುವ ಹಲವು ಕಾರುಗಳ ಪೈಕಿ ಹೆಚ್ಚು ಕಡಿಮೆ 8 ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬೆಂಗಳೂರು ಮೂಲದ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ.
    ಹೌದು, ಹಲವು ಮೂಲಗಳ ಪ್ರಕಾರ, ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಿದ್ದಾರೆ. ಆದರೆ, ಕಾರು ಖರೀದಿಸಿದ ಆ ವ್ಯಕ್ತಿ ಯಾರು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ ನಟಿ ಪ್ರಿಯಾಂಕಾ. ಇದೆಲ್ಲದರ ನಡುವೆ, ಪ್ರಿಯಾಂಕಾ ಅವರು ಆ ಕಾರನ್ನು ಮಾರಿದ್ದು ಯಾಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಂದಹಾಗೆ, ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ನಟಿ ಪ್ರಿಯಾಂಕಾ ಅವರು ತುಂಬಾ ಹೆಚ್ಚಾಗಿ ಬಳಸುತ್ತಿಲ್ಲ ಎನ್ನಲಾಗಿದೆ. ನಟಿ ಪ್ರಿಯಾಂಕಾ ಚೋಪ್ರಾ ಅವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದು ಭಾರತದಲ್ಲಿ.
    ಆದರೆ, ಪ್ರಿಯಾಂಕಾ ಮದುವೆ ಆದ ಬಳಿಕ ಗಾಯಕ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ನಟಿಯ ತಾಯಿ ಮಧು ಚೋಪ್ರಾ ಅವರು ಕೂಡಾ ಈ ಕಾರನ್ನು ಬಳಸುತ್ತಿಲ್ಲ. ಹಾಗಾಗಿ, ಮಾರಾಟ ಮಾಡುವುದು ಸೂಕ್ತ ಎಂದು ನಟಿ ನಿರ್ಧರಿಸಿದ್ದು, ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಸದ್ಯ, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿಯ ಕಾರು ಖರೀದಿಸಿದ ಆ ಬೆಂಗಳೂರು ಮೂಲದ ವ್ಯಕ್ತಿ ಯಾರು ಎಂಬ ಕುತೂಹಲ ಹಲವರಲ್ಲಿ ಇದೆ.

    ಜೇಮ್ಸ್ ಜಾತ್ರೆ: ಅಭಿಮಾನಿಗಳ ನಿದ್ದೆ ಕದ್ದ ಅಪ್ಪು, ಹೇಗಿತ್ತು ಮೊದಲ ದಿನದ ಭೋರ್ಗರೆತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts