More

    ಪೊಲೀಸರಿಗೆ ಸಿಗಬಾರದು ಎಂದು ಮೊಬೈಲ್​ ನುಂಗಿದ ಕೈದಿ!

    ಬಿಹಾರ: ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಖೈದಿಯೊಬ್ಬ ತಪಾಸಣೆ ವೇಳೆ ಮೊಬೈಲನ್ನು ಜೈಲು ಅಧಿಕಾರಿಗಳು ಪತ್ತೆ ಮಾಡಬಹುದು ಎಂದು ನುಂಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಶನಿವಾರ ಜೈಲು ತಪಾಸಣೆ ವೇಳೆ ಖೈಶರ್ ಅಲಿ ಎಂಬಾತ ಫೋನ್ ನುಂಗಿದ್ದ. ಆದರೆ, ಭಾನುವಾರ ಅಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

    “ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕೈದಿ ಕಡೆಗೆ ವಿಧಿ ಇಲ್ಲದೇ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿ ನಡೆದ ಘಟನೆಗಳನ್ನು ವಿವರಿಸಿದ. ಇದಾದ ಮೇಲೆ ಆತನನ್ನು ತಕ್ಷಣವೇ ಗೋಪಾಲ್​ಗಂಜ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು” ಎಂದು ಗೋಪಾಲ್​ಗಂಜ್ ಜೈಲು ಅಧೀಕ್ಷಕ ಮನೋಜ್ ಕುಮಾರ್ ಮಾಹಿತಿ ನೀಡಿದರು.

    ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಸಲಾಮ್ ಸಿದ್ದಿಕಿ ಮಾತನಾಡಿ, ‘ಕೈದಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಹೊಟ್ಟೆಯ ಎಕ್ಸ್ ರೇ ತೆಗೆಯಲಾಗಿದೆ. ತಪಾಸಣೆ ವೇಳೆ ಮೊಬೈಲ್​ ಇರುವುದು ಕಂಡುಬಂದಿದೆ” ಎಂದರು.

    ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವನ್ನು ರಚಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವ್ಯಕ್ತಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರೆಫರ್​ ಮಾಡಲಾಗಿದೆ. ಮೊಬೈಲ್ ಫೋನ್ ಅನ್ನು ಈಗ ಪಾಟ್ನಾ ವೈದ್ಯಕೀಯ ಕಾಲೇಜು ತೆಗೆದುಹಾಕಲಿದೆ.

    ಕೈದಿ ಅಲಿಯನ್ನು ಜ.17, 2020 ರಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (ಎನ್‌ಡಿಪಿಎಸ್ ಆಕ್ಟ್) ಅಡಿಯಲ್ಲಿ ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ.

    ಬಿಹಾರ ಜೈಲುಗಳ ಒಳಗೆ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು ಭದ್ರತಾ ಅಧಿಕಾರಿಗಳ ಕೆಲಸದ ಮೇಲೆ ಅನುಮಾನಗಳನ್ನು ಹೆಚ್ಚಿಸಿದೆ. ಮಾರ್ಚ್ 2021ರಲ್ಲಿ ಬಿಹಾರದಾದ್ಯಂತ ಜೈಲುಗಳಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 35 ಸೆಲ್‌ಫೋನ್‌ಗಳು, ಏಳು ಸಿಮ್ ಕಾರ್ಡ್‌ಗಳು ಮತ್ತು 17 ಸೆಲ್‌ಫೋನ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕತಿಹಾರ್, ಬಕ್ಸರ್, ಗೋಪಾಲ್‌ಗಂಜ್, ನಳಂದಾ, ಹಾಜಿಪುರ, ಆರಾ, ಜೆಹಾನಾಬಾದ್ ಮತ್ತು ರಾಜ್ಯದ ಕೆಲವು ಜೈಲುಗಳಲ್ಲಿ ದಾಳಿ ನಡೆಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts