More

    ಅಂಗವಿಕಲರಿಗೆ ಪಿಂಚಣಿ ತಲುಪಿಸಲು ಡ್ರೋನ್​ ಬಳಸಿದರು!

    ಒಡಿಶಾ: ಒಡಿಶಾದ ಸರಪಂಚ, ತನ್ನ ಪಂಚಾಯಿತಿಯ ಜನರಿಗೆ ವೃದ್ಧಾಪ್ಯ ಮತ್ತು ಅಂಗವಿಕಲ ಪಿಂಚಣಿ ವಿತರಿಸಲು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ. ಇಷ್ಟೇ ಅಲ್ಲದೇ ಮಾತ್ರವಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧಿಗಳನ್ನು ತಲುಪಿಸಲು ಸಹ ಬಳಸುತ್ತಿದ್ದಾರೆ.

    ಒಡಿಶಾದ ನುವಾಪಾದ ಜಿಲ್ಲೆಯ ಬಾಲೇಶ್ವರ ಪಂಚಾಯಿತಿ ಬ್ಲಾಕ್‌ನ ಸರಪಂಚ್ ಸರೋಜ್ ಅಗರ್ವಾಲ್ ಸಾರ್ವಜನಿಕ ಸೇವೆಗಾಗಿ ಡ್ರೋನ್ ತಂತ್ರಜ್ಞಾನವನ್ನು ವಿನೂತನ ರೀತಿಯಲ್ಲಿ ಬಳಸುತ್ತಿದ್ದಾರೆ. ಭುಡುಕಪದ ಗ್ರಾಮವು ಬಾಳೇಶ್ವರ ಪಂಚಾಯತ್‌ನ ವಾರ್ಡ್ ನಂ 5 ರಲ್ಲಿದ್ದು 2 ಕಿಮೀ ದೂರದ ದಟ್ಟ ಅರಣ್ಯದಲ್ಲಿದೆ.

    ಗ್ರಾಮದ ಹೆಟ್ರಂ ಸಮನಾಮಿ ಎಂಬ 30 ವರ್ಷದ ಯುವಕ ದೈಹಿಕವಾಗಿ ಅಶಕ್ತರಾಗಿದ್ದು, ಪಿಂಚಣಿ ಪಡೆಯಲು ಪಂಚಾಯತ್ ಕಚೇರಿಗೆ ಹೋಗುವುದು ಕಷ್ಟವಾಗಿದೆ. ಅವರ ಕಷ್ಟಗಳ ಬಗ್ಗೆ ತಿಳಿದ ನಂತರ, ಅಗರ್ವಾಲ್ ಅವರ ಪಿಂಚಣಿಯನ್ನು ಅವರ ಮನೆಗೆ ಕಳುಹಿಸಲು ಡ್ರೋನ್ ಅನ್ನು ಬಳಸಿದರು.

    “ಡ್ರೋನ್ ಅನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಿರುವುದನ್ನು ನಾನು ನೋಡಿದ್ದೇನೆ. ಅಣಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಅವರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ನಾನು ಡ್ರೋನ್​ ಒಂದನ್ನು ಖರೀದಿಸಿದೆ. ಅಂಗವಿಕಲ ಫಲಾನುಭವಿಯಾಗಿರುವ ಹೆತ್ರಾಮ್ ಸಮಾನಾಮಿ ಅವರು ಡ್ರೋನ್ ಮೂಲಕ ಪಿಂಚಣಿಯನ್ನು ಅವರ ಮನೆ ಬಾಗಿಲಿಗೆ ಪಡೆದರು, ”ಎಂದು ಸರೋಜ್​ ಅಗರ್ವಾಲ್ ಹೇಳಿದರು.

    ”ಸಂಪರ್ಕ ಕೊರತೆ ಹಾಗೂ ದಟ್ಟ ಅರಣ್ಯದ ಕಾರಣದಿಂದ ನನ್ನ ಗ್ರಾಮದಿಂದ 2 ಕಿ.ಮೀ ದೂರದಲ್ಲಿದ್ದು ಪಂಚಾಯತ್ ಕಚೇರಿಗೆ ತೆರಳಲು ಸಾಧ್ಯವಾಗಲಿಲ್ಲ. ಡ್ರೋನ್ ಸಹಾಯದಿಂದ ನನ್ನ ಪಿಂಚಣಿಯನ್ನು ಮನೆ ಬಾಗಿಲಿಗೆ ಪಡೆದ ನಂತರ ನಾನು ಸಂತೋಷವಾಗಿದ್ದೇನೆ, ”ಎಂದು ಸಮನಾಮಿ ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts