More

    ವಿವಾದಕ್ಕೆ ಕಾರಣವಾದ ಬ್ರಿಟನ್ ರಾಜಕುಮಾರಿಯ ಫೋಟೋ; ಕೊನೆಗೆ ಕ್ಷಮೆಯಾಚಿಸಿದ ಕೇಟ್ ಮಿಡಲ್ಟನ್

    ಬ್ರಿಟನ್‌: ಬ್ರಿಟನ್‌ ರಾಜಕುಮಾರಿ ಕೇಟ್ ಮಿಡಲ್ಟನ್ ಇತ್ತೀಚೆಗೆ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ಅವರ ಈ ಫೋಟೋವು ರಾಜಮನೆತನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

    ಏಕೆಂದರೆ ಕೇಟ್ ಶೇರ್ ಮಾಡಿರುವ ಫೋಟೋ ರಿಯಲ್ ಅಲ್ಲ, ಎಡಿಟ್ ಮಾಡಿರುವುದು ಎಂದು ಜನರು ನಂಬಿದ್ದರು. ಇದೀಗ ಈ ಫ್ಯಾಮಿಲಿ ಫೋಟೋಗೆ ಸಂಬಂಧಿಸಿದಂತೆ ಹರಡಿರುವ ಗೊಂದಲಕ್ಕೆ ಕೇಟ್ ಕೂಡ ಕ್ಷಮೆ ಯಾಚಿಸಿದ್ದಾರೆ. ಫೋಟೋ ಎಡಿಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ಈ ಫೋಟೋವನ್ನು ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿತ್ತು. ಇದರಲ್ಲಿ ಕೇಟ್ ತನ್ನ ಮೂವರು ಮಕ್ಕಳೊಂದಿಗೆ ಕುಳಿತಿರುವುದನ್ನು ಕಾಣಬಹುದು. ವಿವಾದವು ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಅನೇಕ ಸುದ್ದಿ ಸಂಸ್ಥೆಗಳು ತಮ್ಮ ಪ್ಲಾಟ್​​​​ಫಾರ್ಮ್​ನಿಂದ ಕೇಟ್ ಅವರ ಫೋಟೋವನ್ನು ತೆಗೆದುಹಾಕಬೇಕಾಯಿತು.

    ವಿವಾದಕ್ಕೆ ಕಾರಣವಾದ ಬ್ರಿಟನ್ ರಾಜಕುಮಾರಿಯ ಫೋಟೋ; ಕೊನೆಗೆ ಕ್ಷಮೆಯಾಚಿಸಿದ ಕೇಟ್ ಮಿಡಲ್ಟನ್

    ಶಸ್ತ್ರಚಿಕಿತ್ಸೆಯ ನಂತರದ ಫೋಟೋ
    ರಾಜಕುಮಾರಿ ಕೇಟ್ ಜನವರಿಯಲ್ಲಿ ಹೊಟ್ಟೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಆಕೆಯ ಮೊದಲ ಫೋಟೋವನ್ನು ಮಾರ್ಚ್ 10 ರಂದು ರಿವೀಲ್ ಮಾಡಲಾಯಿತು. ಈ ಫೋಟೋವನ್ನು ಅವರ ಪತಿ ತೆಗೆದಿದ್ದಾರೆ ಎಂದು ವರದಿಯಾಗಿದೆ. ಈಗ ಚಿತ್ರದ ಕ್ರಾಪಿಂಗ್ ಬಗ್ಗೆ ವಿವಾದ ಶುರುವಾಗಿದೆ.

    ಏಕೆಂದರೆ ಆಕೆಯ ಕೈಯಲ್ಲಿ ನಿಶ್ಚಿತಾರ್ಥದ ಉಂಗುರವಿಲ್ಲ ಎಂದು ಹೇಳಲಾಗುತ್ತಿದೆ. ಕೇಟ್ ಅವರ ಮಗಳ ಕಾರ್ಡಿಜನ್ ನ ತೋಳಿನ ಭಾಗವು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಹೇಳಲಾಗಿದೆ, ಅದಕ್ಕಾಗಿಯೇ ಹೆಚ್ಚಿನ ಸುದ್ದಿ ಸಂಸ್ಥೆಗಳು ಈ ಫೋಟೋವನ್ನು ತಮ್ಮ ಪ್ಲಾಟ್​​​​​ಫಾರ್ಮ್​​​​ನಿಂದ ತೆಗೆದುಹಾಕಿವೆ. ಈ ಫೋಟೋವನ್ನು ತಾಯಂದಿರ ದಿನದಂದು ಬ್ರಿಟನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

    ವಿವಾದಕ್ಕೆ ಕಾರಣವಾದ ಬ್ರಿಟನ್ ರಾಜಕುಮಾರಿಯ ಫೋಟೋ; ಕೊನೆಗೆ ಕ್ಷಮೆಯಾಚಿಸಿದ ಕೇಟ್ ಮಿಡಲ್ಟನ್

    ಕ್ಷಮೆಯಾಚಿಸಿದ ಕೇಟ್
    ಫೋಟೋದಲ್ಲಿ ಕೇಟ್ ಮಿಡಲ್ಟನ್ ತನ್ನ ಮೂವರು ಮಕ್ಕಳಾದ ಪ್ರಿನ್ಸ್ ಜಾರ್ಜ್, ಪ್ರಿನ್ಸೆಸ್ ಷಾರ್ಲೆಟ್ ಮತ್ತು ಪ್ರಿನ್ಸ್ ಲೂಯಿಸ್ ಅವರೊಂದಿಗೆ ನಗುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಅವರು “ಹಲವು ಹವ್ಯಾಸಿ ಛಾಯಾಗ್ರಾಹಕರಂತೆ, ನಾನು ಕೆಲವೊಮ್ಮೆ ಎಡಿಟ್​​ನಲ್ಲಿ ಪ್ರಯೋಗ ಮಾಡುತ್ತೇನೆ. ನಾವು ನಿನ್ನೆ ಹಂಚಿಕೊಂಡ ಕುಟುಂಬದ ಫೋಟೋಗೆ ಸಂಬಂಧಿಸಿದಂತೆ ಗೊಂದಲ ಉಂಟಾದಲ್ಲಿ ನಾನು ಕ್ಷಮೆಯಾಚಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

    ತಾಯಂದಿರ ದಿನಕ್ಕಾಗಿ ರಾಜಮನೆತನವು ಫಾರ್ಮಲ್ ಫ್ಯಾಮಿಲಿ ಫೋಟೋವನ್ನು ಪ್ರಸ್ತುತಪಡಿಸಲು ಬಯಸಿದ್ದರಿಂದ ಪ್ರಿನ್ಸ್ ವೇಲ್ಸ್ ಅವರು ಈ ಫೋಟೋವನ್ನು ಹವ್ಯಾಸಕ್ಕಾಗಿ ತೆಗೆದಿದ್ದಾರೆ ಎಂದು ಅರಮನೆ ಮೂಲಗಳು ಸೂಚಿಸಿವೆ.

    ವಿವಾದಕ್ಕೆ ಕಾರಣವಾದ ಬ್ರಿಟನ್ ರಾಜಕುಮಾರಿಯ ಫೋಟೋ; ಕೊನೆಗೆ ಕ್ಷಮೆಯಾಚಿಸಿದ ಕೇಟ್ ಮಿಡಲ್ಟನ್

    ಕೇಟ್ ಮಿಡಲ್ಟನ್ ಯಾರು?
    ಕೇಟ್ ಮಿಡಲ್ಟನ್ ರಾಜ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಹಿರಿಯ ಮಗ ಪ್ರಿನ್ಸ್ ವಿಲಿಯಮ್ಸ್ ಅವರ ಪತ್ನಿ. 2011ರಲ್ಲಿ ಇಬ್ಬರೂ ಮದುವೆಯಾದರು. ಅವರಿಗೆ ಮೂವರು ಮಕ್ಕಳಿದ್ದಾರೆ – ಪ್ರಿನ್ಸ್ ಜಾರ್ಜ್, ಪ್ರಿನ್ಸೆಸ್ ಷಾರ್ಲೆಟ್ ಮತ್ತು ಪ್ರಿನ್ಸ್ ಲೂಯಿಸ್.

    ಕೇಟ್ ಬಗ್ಗೆ ವಿವಾದ ಉಂಟಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಮಿಡಲ್ಟನ್ ಯಾವುದೇ ರಾಜಮನೆತನದಿಂದ ಬಂದಿಲ್ಲದ ಕಾರಣ ಮದುವೆಗೆ ಮೊದಲು ಫಲವತ್ತತೆ ಪರೀಕ್ಷೆಗೆ ಒಳಗಾಗಬೇಕಾಯಿತು ಎಂದು ಪುಸ್ತಕವೊಂದು ಹೇಳಿತ್ತು.

    ಭಿಕ್ಷೆ ಬೇಡುವ ಮಕ್ಕಳತ್ತ ತಿರುಗಿಯೂ ನೋಡದ ಶಾಹಿದ್ ಪತ್ನಿ… ಈ ರೀತಿ ಟ್ರೋಲ್‌ ಆಗುತ್ತೇನೆಂದು ಕನಸಿನಲ್ಲೂ ಊಹಿಸಿರಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts