More

    ರೀಲ್ಸ್ ಮತ್ತು ವಿಡಿಯೋ ಎಡಿಟಿಂಗ್​​​ ಗೊತ್ತಿದ್ದವರು ನನ್ನನ್ನು ಮದುವೆಯಾಗಬಹುದು; ಮ್ಯಾಟ್ರಿಮೋನಿಯಲ್​​ ಸೈಟ್​ನಲ್ಲಿ ಯುವತಿಯ ವಿಭಿನ್ನ ಬೇಡಿಕೆ..!

    ಇತ್ತೀಚೆಗೆ ಯಾವುದೇ ವಿಚಾರಗಲೇ ಆಗ್ಲಿ ಕ್ಷಣಾರ್ಧದಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಕಾಣ ಸಿಗುತ್ತೆ. ಅದರಲ್ಲೂ ಸೋಶಿಯಲ್​ ಮೀಡಿಯಾದಲ್ಲಿ ಜನರು ಫಾಲೋವರ್ಸ್​​​ ಪಡೆಯೋಕೆ ಏನಾದರು ವಿಭಿನ್ನವಾದುದನ್ನ ಮಾಡುತ್ತಲೇ ಇರ್ತಾರೆ.


    ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇನ್​ಫ್ಲುಯೆನ್ಸರ್​​​​​ ಆಗಿರುವ ಯುವತಿಯೊಬ್ಬಳು ಮ್ಯಾಟ್ರಿಮೋನಿಯಲ್​ ಸೈಟ್​​ನಲ್ಲಿ ಮಾಡಿರುವ ಪೋಸ್ಟ್​​​ ಒಂದು ಎಕ್ಸ್​​(ಟ್ವಿಟ್ಟರ್​​) ಖಾತೆಯಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​​ ಆಗಿದೆ.


    ರಿಯಾ ಎಂಬ ಮಹಿಳೆ ಮ್ಯಾಟ್ರಿಮೋನಿಯಲ್ ಜಾಹೀರಾತನ್ನು ಹಂಚಿಕೊಳ್ಳುವ ಮೂಲಕ ತನ್ನ ಜೀವನ ಸಂಗಾತಿಯಲ್ಲಿ ಯಾವ ಗುಣ ಅಥವಾ ಆತ ಏನೆಲ್ಲಾ ಕಲಿತಿರಬೇಕು ಎಂಬ ವಿಚಾರಗಳನ್ನ ಹಂಚಿಕೊಂಡಿದ್ದು, ಸದ್ಯ ಯುವತಿಯ ಪೋಸ್ಟ್​​​ಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.


    ಹಾಗಿದ್ರೆ ಯುವತಿಯ ಪೋಸ್ಟ್​​ನಲ್ಲಿ ಏನಿದೆ?
    ರಿಯಾ ಕೊಟ್ಟ ಮ್ಯಾಟ್ರಿಮೋನಿಯಲ್​ ಜಾಹೀರಾತಿನ ಪೋಟೋವನ್ನ ಆಯುಷಿ ಗುಪ್ತಾ ಎಂಬ ಮಹಿಳೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ನಾನು ಮದುವೆಯಾಗುಲು ಬಯಸುವ ಯುವಕ ನನ್ನ ಜತೆಯಲ್ಲಿ ರೀಲ್ಸ್​​ ಮಾಡಬೇಕು. ನಾವಿಬ್ಬರೂ ಜತೆಯಾಗಿ ಮದುವೆಯ ಬಳಿಕ ರೀಲ್ಸ್​​ ಮಾಡುವ ಇಚ್ಛೆಸುತ್ತೇನೆ. ಅಲ್ಲದೆ ಪ್ರೀಮಿಯರ್​ ಪ್ರೊ ಎಡಿಟಿಂಗ್​​ ಮಾಡೋದು ಆತನಿಗೆ ತಿಳಿದಿರಬೇಕು ಎಂದು ಜಾಹೀರಾತಿನಲ್ಲಿ ಬರೆದಿದ್ದಾಳೆ. ಜತೆಗೆ ಆಕೆಯ ಇ-ಮೇಲ್​ ಐಡಿಯನ್ನೂ ಹಾಕಿ ಆಸಕ್ತರು ಇದಕ್ಕೆ ಮೇಲ್​ ಮಾಡಿ ಎಂದು ಉಲ್ಲೇಖಿಸಿದ್ದಾರೆ.


    ಸದ್ಯ ರಿಯಾ ಜಾಹೀರಾತಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಯಿಸಿದ್ದು, ನೀನು ಜೀವನ ಸಂಗಾತಿಯನ್ನು ಹುಡುಕುವುದಕ್ಕಿಂತ ವಿಡಿಯೋ ಎಡಿಟರ್​​ ಮತ್ತು ಕ್ಯಾಂಪೇನ್​​ ಮ್ಯಾನೇಜರ್​​ ಅನ್ನೇ ಹುಡುಕಿಕೋ ಎಂದು ಕಾಮೆಂಟ್​​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts