More

    ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ; ದಿಢೀರ್ ಕುಸಿದ ಈರುಳ್ಳಿ ಬೆಲೆ ಕೆಜಿಗೆ 20 ರೂ.

    ಬೆಂಗಳೂರು:  ದಿನದಿಂದ ದಿನಕ್ಕೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ದರಕ್ಕೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ.‌

    ಭಾರತದಲ್ಲಿ ಈರುಳ್ಳಿಯಂತೆಯೇ ಬೆಳ್ಳುಳ್ಳಿಯೂ ಇಲ್ಲದ ಊಟವೇ ಇಲ್ಲ. ಈರುಳ್ಳಿಯಷ್ಟು ಬಳಕೆ ಪ್ರಮಾಣ ಇಲ್ಲದೇ ಇದ್ದರೂ ಬೆಳ್ಳುಳ್ಳಿಯೂ ಅಡುಗೆಯಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಬಳಕೆ ಪ್ರಮಾಣವೂ ಅಧಿಕವಾಗಿರುವುದರಿಂದ ಬೆಲೆ ಕೂಡ ಕೆಲ ದಿನಗಳಿಂದ ಕರ್ನಾಟಕದಲ್ಲಿ ಏರಿಕೆಯಾಗುತ್ತಲೇ ಇದೆ.

    ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ; ದಿಢೀರ್ ಕುಸಿದ ಈರುಳ್ಳಿ ಬೆಲೆ ಕೆಜಿಗೆ 20 ರೂ.

    ಈ ಹಿಂದೆ ಕೆಜಿಗೆ 280-300 ರೂ.ಗೆ ಸಿಗುತ್ತಿದ್ದ ಬೆಳ್ಳುಳ್ಳಿ ಈ ವಾರ ಮತ್ತೆ ಏರಿಕೆ ಕಂಡಿದೆ. ಹೋಲ್ ಸೇಲ್​ನಲ್ಲಿ ಪ್ರತಿ ಕ್ವಿಂಟಾಲ್​ಗೆ 32 ರಿಂದ 33 ಸಾವಿರ ದರ ನಿಗದಿಯಾಗಿದೆ. ಸದ್ಯ ಜನ 400-500ರೂಗೆ ಕೆಜಿ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬೆಳ್ಳುಳ್ಳಿ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ.

    Garlic Price

    ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಫೆಬ್ರವರಿಯಲ್ಲಿ ಬರುವ ನಿರೀಕ್ಷೆಯಿದ್ದು, ಆನಂತರ ದರ ಇಳಿಕೆಯಾಗಬಹುದು.

    onion price hike

    ಈರುಳ್ಳಿ ಬೆಲೆ ಕುಸಿತ: ಈರುಳ್ಳಿ ದರ ಪಾತಾಳಕ್ಕೆ ಬಿದ್ದಿದೆ.  ಪ್ರತಿ ಕ್ವಿಂಟಾಲ್ ಗೆ 1500 ರೂಪಾಯಿ. ಅತ್ಯುತ್ತಮ ದರ ಈರುಳ್ಳಿ 1200 ರಿಂದ 1400, ಉತ್ತಮ ದಪ್ಪ ಈರುಳ್ಳಿ 1000 ರಿಂದ 1100 ರೂ. ಮಧ್ಯಮ‌ ಗಾತ್ರದ ಈರುಳ್ಳಿ 700ರಿಂದ 800, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ದರ ಇದೆ.

    onion

    ನಮ್ಮ ರಾಜ್ಯದ ಈರುಳ್ಳಿ ಬೇರೆ ಕಡೆ ರಫ್ತಾಗುವುದನ್ನ ಸರ್ಕಾರ ನಿಲ್ಲಿಸಿದೆ. ನಿರೀಕ್ಷೆಯಂತೆ ಖರೀದಿ ಆಗುತ್ತಿಲ್ಲ. ಹೀಗಾಗಿ ಬಂದಷ್ಟು ಬರಲಿ ಎಂದು ರೈತರು ಮಾರಾಟ ಮಾಡಿ ಹೋಗುವ ಸ್ಥಿತಿ ಬಂದಿದೆ.

    ಚಹಾ, ಕಾಫಿ, ಹಾಲು ಕುಡಿದ ನಂತ್ರ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟಬುತ್ತಿ; ಇರಲಿ ಎಚ್ಚರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts