More

    ಆಶ್ರಯ ತಾಣಗಳಲ್ಲಿರುವ ಬಡವರಿಗಾಗಿ ಮಾಸ್ಕ್​ ತಯಾರಿಸುತ್ತಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಪತ್ನಿ

    ನವದೆಹಲಿ: ಮಹಾಮಾರಿ ಕರೊನಾ ಸೋಂಕು ಹರಡುತ್ತಿರುವ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಕೋವಿಡ್​-19 ವಿರುದ್ಧ ಹೋರಾಡಲು ಜನರೆಲ್ಲರೂ ರಕ್ಷಣಾ ಕ್ರಮಗಳ ಮೊರೆ ಹೋಗಿದ್ದು, ಮಾಸ್ಕ್​ ಕೂಡ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಹೋರಾಟಕ್ಕೆ ಸಾಥ್​ ನೀಡಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಪತ್ನಿ ಸವಿತಾ ಕೋವಿಂದ್ ಆಶ್ರಯ ತಾಣದಲ್ಲಿರುವ ಬಡ ಜನರ ನೆರವಿಗೆ ಧಾವಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿ ಶಕ್ತಿ ಹಾತ್​ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟ್​ನಲ್ಲಿ ಸವಿತಾ ಕೋವಿಂದ್​ ಅವರು ಖುದ್ದಾಗಿ ಹೊಲಿಗೆ ಯಂತ್ರದ ಮೂಲಕ ಮಾಸ್ಕ್​ ತಯಾರಿಸುತ್ತಿದ್ದಾರೆ. ಈ ಮಾಸ್ಕ್​ಗಳನ್ನು ನಗರದ ಆಶ್ರಯ ಸುಧಾರಣಾ ಮಂಡಳಿ ಅಡಿಯಲ್ಲಿ ಬರುವ ವಿವಿಧ ಆಶ್ರಯ ಮನೆಗಳಿಗೆ ವಿತರಿಸಲಾಗುತ್ತದೆ. ಸವಿತಾ ಅವರು ಮುಖಕ್ಕೆ ಕೆಂಪು ಬಣ್ಣದ ಮಾಸ್ಕ್​ ಧರಿಸಿ, ಮಾಸ್ಕ್​ ತಯಾರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

    ಮಾಸ್ಕ್​ ತಯಾರಿಸುವುದರೊಂದಿಗೆ ಎಲ್ಲರೂ ಕೋವಿಡ್​-19 ವಿರುದ್ಧ ಹೋರಾಡಿ ಗೆಲುವು ಸಾಧಿಸೋಣ ಎಂದು ಸಂದೇಶ ಸಾರಿದ್ದಾರೆ.

    ಇನ್ನು ಪರಿಣಿತರು ಕರೊನಾ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಸೇರಿದಂತೆ ಇತರೆ ಉಪಕ್ರಮಗಳನ್ನು ನಿರ್ವಹಿಸಲು ಸಲಹೆ ನೀಡಿದ್ದು, ಹೆಚ್ಚುವರಿಯಾಗಿ ಮಾಸ್ಕ್​ ಧರಿಸಲು ಸೂಚನೆ ನೀಡಿದ್ದಾರೆ. ಕರೊನಾ ಹರಡಲು ಆರಂಭವಾದಗಿನಿಂದ ಮಾಸ್ಕ್​ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತಿದ್ದು, ಕೆಲ ರಾಜ್ಯಗಳಲ್ಲಿ ಮಾಸ್ಕ್ ಧರಿಸಿದ್ದರೆ ಭಾರಿ ದಂಡವನ್ನು ನಿಗದಿಪಡಿಸಿವೆ. (ಏಜೆನ್ಸೀಸ್​)

    ಲಾಕ್​ಡೌನ್​ ನಡುವೆ ಘೋರ ದುರಂತ: ಆಟವಾಡ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ತಿಂದ ಹಂದಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts