More

    ಬೀಜೋಪಚಾರದಿಂದ ಇಳುವರಿ ಉತ್ತಮ

    ಲಕ್ಷ್ಮೇಶ್ವರ: ಕಂಪನಿ ಅಥವಾ ರೈತರೇ ಉತ್ಪಾದನೆ ಮಾಡಿದ ಬೀಜವನ್ನು ಬಿತ್ತನೆಪೂರ್ವ ಬೀಜೋಪಚಾರ ಮಾಡಬೇಕು. ಮುಂಜಾಗ್ರತಾ ಕ್ರಮದಿಂದ ರೋಗಬಾಧೆ ತಡೆಗಟ್ಟುವ ಜತೆಗೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ಕುಂಬಾರ ತಿಳಿಸಿದ್ದಾರೆ.

    ಮಂಗಳವಾರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಯ ಬೀಜೋಪಚಾರದ ಪ್ರಾತ್ಯಕ್ಷತೆ ಮೂಲಕ ಬೆಳೆಗಳಿಗೆ ಬರುವ ಕೀಟ, ರೋಗಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

    ಈ ಬೆಳೆಗಳ ಬೀಜಗಳನ್ನು ರಾಸಾಯನಿಕ ಪದ್ಧತಿಯಲ್ಲಿ ಹಾಗೂ ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡಬಹುದು. ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳು ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲೂಕಿನ ಪ್ರಮುಖ ತೋಟಗಾರಿಕೆ ಬೆಳೆಗಳಾಗಿವೆ. ಮಳೆ ತಡವಾಗಿದ್ದರೂ ರೈತರು ಮೆಣಸಿನಕಾಯಿ ಮತ್ತು ಈರುಳ್ಳಿ ಬಿತ್ತನೆಗೆ ನಿರ್ಧರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೆಣಸಿನಕಾಯಿ 3,250 ಹೆಕ್ಟೇರ್ ಕ್ಷೇತ್ರದಲ್ಲಿ ಹಾಗೂ ಈರುಳ್ಳಿಯನ್ನು 2,900 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಗುರಿಯಿದೆ ಎಂದರು.

    ಪ್ರಗತಿಪರ ರೈತರಾದ ಬಾಪುಗೌಡ ಭರಮಗೌಡರ, ಶಿವಯ್ಯ ಮಠಪತಿ, ರಾಜನಗೌಡರ ಅಜ್ಜನಗೌಡರ, ಯಲ್ಲಪ್ಪ ಹಟ್ಟಿ, ಬಿ.ಎನ್.ನೀಲಗುಂದ, ಗ್ರಾಪಂ ಸದಸ್ಯರಾದ ಶಿವಯೋಗಿ ಹೊಸಕೇರಿ, ಎಸ್‌ಎಸ್ ನಿಂಗನಗೌಡರ, ಎಚ್.ಆರ್. ದೊಡ್ಡಗೌಡರ, ಇಲಾಖೆಯ ಅಧಿಕಾರಿಗಳಾದ ಎಂ. ನದಾಫ್, ಫಕೀರಗೌಡ ಸಾತಪ್ಪನವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts