More

    ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ದರು! ಪ್ರತಾಪ್ ಸಿಂಹ

    ಬೆಂಗಳೂರು: ಸಂಘಪರಿವಾರದವರು ಮೀಸಲಾತಿ ತೆಗೆದುಹಾಕುತ್ತಾರೆ ಎಂದು ಸುಳ್ಳು ಹೇಳಿಕೊಂಡು ಕಾಂಗ್ರೆಸ್​​ನವರು ಹೇಳಿದ್ದರು. ಬಿಜೆಪಿ ಹಿಂದುಳಿದ ಜನಾಂಗದ ಪರವಾಗಿದೆ. ನಾವು ಕೇವಲ ಭಾಷಣ ಮಾಡುವುದಿಲ್ಲ. ಬದಲಾಗಿ ಎಲ್ಲಾ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಎಲ್ಲಾ ಸಮುದಾಯದ ಪರವಾಗಿ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನೂ ಓದಿ: ದ್ವೇಷ ರಾಜಕಾರಣದಿಂದ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದಿದ್ದಾರೆ; ಸಿದ್ದರಾಮಯ್ಯ ಆರೋಪ

    ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಎಲ್ಲಾ ಸಮಾಜಗಳಿಗೆ ನ್ಯಾಯಕೊಡುವ ಪಕ್ಷ ಬಿಜೆಪಿ. ಇದನ್ನು ಬಸವರಾಜ್ ಬೊಮ್ಮಾಯಿ ಸಾಬೀತು ಮಾಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಂರು 4% ಮೀಸಲಾತಿ ಪಡೆದುಕೊಂಡಿದ್ರು. ಹಿಂದುಳಿದ ವರ್ಗಕ್ಕೆ ಸಲ್ಲಬೇಕಾದ ಮೀಸಲಾತಿಯನ್ನು ಅನಧಿಕೃತವಾಗಿ ಕೊಡಲಾಗಿತ್ತು. ಇದೀಗ ನ್ಯಾಯಯುತವಾಗಿ ಮುಸ್ಲಿಂರ ಮೀಸಲಾತಿ ತೆಗೆದು ಒಕ್ಕಲಿಗ, ವೀರಶೈವರಿಗೆ ಮೀಸಲಾತಿ ಕಲ್ಪಿಸಲಾಗಿದೆ‌. ಬರಿ ಭಾಷಣ‌ ಮಾಡುತ್ತಿದ್ದವರಿಗೆ ಈ ಮೀಸಲಾತಿ ನಿರ್ಧಾರ ಮೂಲ‌ಕ ಅವರ ಬಾಯಿ‌ ಮುಚ್ಚಿಸಲಾಗಿದೆ ಎಂದರು.

    ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಸಿ.ಎಂ.ಬಸವರಾಜ ಬೊಮ್ಮಾಯಿ ಸರ್ಕಾರದ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಹಿಂದುಳಿದ ಜಾತಿಮ, ಜನಾಂಗ ಹಾಗೂ ಇತರೆ ಹಿಂದುಳಿದ ವರ್ಗಗಳ ಹಿತ ದೃಷ್ಟಿಯಿಂದ ಇದು ಮೈಲಿಗಲ್ಲಾಗಿದೆ. ಬಿಜೆಪಿ ಸರ್ಕಾರ ಬಂದ್ರೆ ಮೀಸಲಾತಿ ತೆಗೆಯುತ್ತಾರೆ, ಸಂವಿಧಾನ ಬದಲಾಯಿಸುತ್ತಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ, ನಮ್ಮ ಸರ್ಕಾರ ಹಿಂದುಳಿದವರ ಪರ ಇದೆ ಎನ್ನುವುದನ್ನು ಸಾಬೀತು ಮಾಡಿದರು ಎಂದು ಪ್ರತಾಪ್ ಸಿಂಹ ಹೇಳಿದರು. ಇದನ್ನೂ ಓದಿ: ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts