More

    ಹೊಸ ಕಾರಿನಿಂದ ಬಯಲಾಯ್ತು ಹೆಂಡತಿಯ ಅಕ್ರಮ ಸಂಬಂಧ; ಪ್ರಶ್ನಿಸಿದ ಗಂಡನಿಗೆ ಜೀವ ಬೆದರಿಕೆ!

    ಬೆಂಗಳೂರು: ಹೊಸದಾಗಿ ಖರೀದಿಸಿದ ಕಾರಿನಿಂದ ಪತ್ನಿಯ ಅನೈತಿಕ ಸಂಬಂಧ ಬೆಳಕಿಗೆ ಬಂದಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕದ್ದು ಮುಚ್ಚಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಪತ್ನಿಯ ಕಳ್ಳಾಟ ಹೊಸ ಕಾರಿನಿಂದ ಗಂಡನಿಗೆ ಗೊತ್ತಾಗಿದೆ.

    ವೈದ್ಯರಾಗಿರುವ ನಿಖಿಲ್ ಅಂಗಡಿ ಎಂಬುವರು ಇತ್ತೀಚೆಗೆ ಹೊಸ ಹುಂಡೈ i20 ಕಾರು ಖರೀದಿಸಿದ್ದರು. ಹೊಸ ಕಾರಿನಲ್ಲಿ ಜಿಪಿಎಸ್ ವ್ಯವಸ್ಥೆ ಲಭ್ಯವಿದ್ದು, ಎಲ್ಲಿ ಸಂಚಿರಸುತ್ತೇವೆ ಎಂಬೆಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿತ್ತು. ಇದನ್ನು ಅರಿತುಕೊಂಡಿರದ ಪತ್ನಿ ಪ್ರಿಯಾಂಕ ಕಾರು ತೆಗೆದುಕೊಂಡು ಹೋಗಿದ್ದಾಳೆ.

    ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ; ಸಿಎಂ ಬೊಮ್ಮಾಯಿ

    ಪ್ರಿಯಾಂಕ ಮೊದಲು ಏರ್​ಪೋರ್ಟ್​ಗೆ ಹೋಗಿದ್ದಾಳೆ. ಬಳಿಕ ಬಿಇಎಲ್ ಸರ್ಕಲ್ ಬಳಿ ಇರುವ ಲಾಡ್ಜ್​ಗೆ ಬಂದಿದ್ದಾಳೆ. ಕಾರು ಅಲ್ಲಿದ್ದ ಖಾಸಗಿ ಹೊಟೇಲ್​ನ ಮುಂದೆ ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಕ್ ಆಗಿತ್ತು. ಇವೆಲ್ಲವನ್ನೂ ಜಿಪಿಎಸ್ ಮುಖಾಂತರ ಪತಿ ಮೊಬೈಲ್​ನಲ್ಲಿ ನೋಡುತ್ತಿದ್ದ. ಕೊನೆಗೆ ಅನುಮಾನಗೊಂಡು ಹೊಟೇಲ್​ನಲ್ಲಿ ವಿಚಾರಿಸಿದಾಗ ಪತ್ನಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಅಶೋಕ್ ವೋಟರ್ ಐಡಿ ಬಳಸಿ ಒಂದೇ ಕೋಣೆ ಬುಕ್ ಮಾಡಿರುವುದು ಗೊತ್ತಾಗಿದೆ.

    ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನಿಗೆ ಪತ್ನಿ ಜೀವ ಬೆದರಿಕೆ ಹಾಕಿದ್ದಾಳೆ. ಇದೀಗ ಪತ್ನಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕ ಅಶೋಕ್ ವಿರುದ್ಧ ನ್ಯಾಯಕ್ಕಾಗಿ ಪತಿ ನಿಖಿಲ್ ಪೊಲೀಸ್ ಠಾಣೆ ಮೆಟ್ಟೇಲೆರಿದ್ದಾರೆ. ತನ್ನನ್ನು ಪತ್ನಿ ವಂಚಿಸಿದ್ದಾಳೆಂದು ನಿಖಿಲ್ ದೂರು ನೀಡಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏಪ್ರಿಲ್​ನಲ್ಲಿ 15 ದಿನ ಬ್ಯಾಂಕ್ ರಜೆ; ಯಾವ್ಯಾವ ದಿನಾಂಕ? ಇಲ್ಲಿದೆ ಪೂರ್ಣ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts