ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!

ರಾಮನಗರ: ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದ ಪ್ರೇಮಿಗಳು ರಾಮದೇವರ ಬೆಟ್ಟದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವುದು ಶುಕ್ರವಾರ ನಡೆದಿದೆ. ಬೆಂಗಳೂರಿನ ನಾಗರಬಾವಿ ನಿವಾಸಿ ಚೇತನ್​ (19) ಮತ್ತು ಕತ್ರಿಗುಪ್ಪೆಯ ಯುವತಿ (19) ಆತ್ಮಹತ್ಯೆಗೆ ಯತ್ನಿಸಿದವರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಚೇತನ್​ ಬಿಇ ವ್ಯಾಸಂಗ ಮಾಡುತ್ತಿದ್ದರೆ, ಯುವತಿಯೂ ಬಿಕಾಂ ಓದುತ್ತಿದ್ದಾಳೆ. ಇಬ್ಬರೂ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೂ ತಿಳಿದಿದೆ. ಆದರೆ, ಇವರ ಪ್ರೀತಿಯನ್ನು ನಿರಾಕರಿಸಿದ್ದ ಎರಡೂ ಕುಟುಂಬದವರು ವ್ಯಾಸಂಗ ಮುಂದುವರಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಮನನೊಂದ … Continue reading ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!