More

    6 ತಿಂಗಳಲ್ಲಿ ಜಿಪಿಎಸ್​ ಆಧಾರಿತ ಟೋಲ್​ ವ್ಯವಸ್ಥೆ; ಹೇಗೆ ಕೆಲಸ ಮಾಡಲಿದೆ? ಇಲ್ಲಿದೆ ಸಂಪೂರ್ಣ ವಿವರ…

    ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್​ ಪ್ಲಾಜಾಗಳನ್ನು ಮುಂದಿನ 6 ತಿಂಗಳಲ್ಲಿ ಬದಲಾವಣೆ ಮಾಡಲಾಗುತ್ತದೆ. ಜಿಪಿಎಸ್​ ಆಧಾರಿತ ಟೋಲ್​ ಸಂಗ್ರಹ ವ್ಯವಸ್ಥೆ ಸೇರಿ ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಪರಿಚಯಿಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ವಾಹನಗಳಿಗೆ ಶುಲ್ಕ ವಿಧಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ; ಸಿಎಂ ಬೊಮ್ಮಾಯಿ

    ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಎನ್​ಎಚ್​ಎಐಗೆ ಪ್ರಸ್ತುತ ಟೋಲ್​ ಸಂಗ್ರಹದಿಂದ 40,000 ಕೋಟಿ ರೂ. ವಾರ್ಷಿಕ ಆದಾಯ ಬರುತ್ತಿದೆ. ಇದು 2,3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ ಆಗಲಿದೆ ಎಂದರು.

    ಇದನ್ನೂ ಓದಿ: ಏಪ್ರಿಲ್​ನಲ್ಲಿ 15 ದಿನ ಬ್ಯಾಂಕ್ ರಜೆ; ಯಾವ್ಯಾವ ದಿನಾಂಕ? ಇಲ್ಲಿದೆ ಪೂರ್ಣ ವಿವರ…

    ಹೇಗೆ ಕೆಲಸ ಮಾಡಲಿದೆ?

    ದೇಶದಲ್ಲಿ ಜಿಪಿಎಸ್​ ಆಧಾರಿತ ಟೋಲ್​ ವ್ಯವಸ್ಥೆ, ಇನ್ನಿತರ ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರಲು ಸರ್ಕಾರ ಉತ್ಸುಕವಾಗಿದೆ. ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್​ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಡೆಸುತ್ತಿದೆ. ನಂಬರ್​ ಪ್ಲೇಟ್​ ರೆಕಗ್ನಿಷನ್​ ಸಿಸ್ಟಂ ಅಡಿ ಇದು ಕೆಲಸ ಮಾಡುತ್ತದೆ. ನಂಬರ್​ ಪ್ಲೇಟ್​ಗಳನ್ನು ಕ್ಯಾಮೆರಾಗಳು ರೀಡ್​ ಮಾಡಿ, ಸ್ವಯಂಚಾಲಿತವಾಗಿ ಟೋಲ್​ ಕಡಿತವಾಗುತ್ತದೆ. 2018-19ನೇ ಸಾಲಿನಲ್ಲಿ ಟೋಲ್​ ಪ್ಲಾಜಾದಲ್ಲಿ ವಾಹನಗಳಿಗೆ ಕಾಯುವ ಸರಾಸರಿ ಸಮಯ 8 ನಿಮಿಷವಾಗಿತ್ತು. 2021-22ರ ಅವಧಿಯಲ್ಲಿ ಇದು 47 ಸೆಕೆಂಡುಗಳಿಗೆ ಇಳಿದಿದೆ. ಫಾಸ್ಟ್ಯಾಗ್​ ಅಳವಟಿಕೆಯಿಂದ ಇದು ಸಾಧ್ಯವಾಗಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts