More

    ಈ ಮರದ ಭದ್ರತೆಗೆ ಇದುವರೆಗೂ ಖರ್ಚಾಗಿದ್ದು 64 ಲಕ್ಷ ರೂ.!

    ಮಧ್ಯಪ್ರದೇಶ: ರಾಯ್​ಸೇನ್ ಜಿಲ್ಲೆಯಲ್ಲಿರುವ ಸಾಂಚಿ ಸ್ತೂಪದ ಬಳಿ ವಿಶೇಷವಾದ ಮರವೊಂದಿದೆ. ಈ ಮರದ ಭದ್ರತೆಗಾಗಿ ಪ್ರತಿನಿತ್ಯ, ದಿನದ 24 ಗಂಟೆಯೂ ನಾಲ್ವರು ಗೃಹರಕ್ಷಕರನ್ನು ನೇಮಿಸಲಾಗಿದೆ. ಈ ಮರ ಕುತೂಹಲಕಾರಿ ಇತಿಹಾಸವನ್ನು ಹೊಂದಿದ್ದು, ಬೋಧಿ ವೃಕ್ಷ ಎಂದು ಕರೆಯಲಾಗುತ್ತದೆ.

    2500 ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಮರದ ಕೆಳಗೆ ಧ್ಯಾನ ಮಾಡುವಾಗ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ. ಈ ಮರವನ್ನು ಮುಂದೆ ಬೋಧಿ ವೃಕ್ಷ ಅಥವಾ ಜ್ಞಾನೋದಯದ ವೃಕ್ಷ ಎಂದು ಹೆಸರುವಾಸಿಯಾಯಿತು. ಮುಂದೆ ಅಶೋಕ ಚರ್ಕವರ್ತಿ ತನ್ನ ರಾಜಧಾನಿಯಾದ ಅನುರಾಧಪುರದಲ್ಲಿ ನೆಟ್ಟಿದ್ದ ಬೋಧಿ ವೃಕ್ಷದ ಕೊಂಬೆಯನ್ನು ದೇವನಂಪಿಯ ರಾಜ ತಿಸ್ಸನಿಗೆ ಉಡುಗೊರೆಯಾಗಿ ಶ್ರೀಲಂಕಾಕ್ಕೆ ಕಳುಹಿಸಿದ್ದ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!

    2012 ರಲ್ಲಿ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಆ ಮರದಿಂದ ಕೊಂಬೆಯನ್ನು ತಂದು ಅಂದಿನ ಸಂಸದ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಸಲಾಮತ್‌ಪುರ ಬಳಿಯ ಬೆಟ್ಟದ ಮೇಲೆ ನೆಟ್ಟಿದ್ದರು. ಇದೀಗ ಈ ಮರವು 6 ಮೀಟರ್ ಎತ್ತರಕ್ಕೆ ಬೆಳೆದಿದ್ದು, ಮರವು ನೀರಿಲ್ಲದೆ ಒಣಗಿ ಒಣಗುತ್ತಿದೆ. ಪ್ರತಿ ವಾರ ಮಧ್ಯಪ್ರದೇಶದ ಕೃಷಿ ಇಲಾಖೆಯ ಸಸ್ಯಶಾಸ್ತ್ರಜ್ಞರು ಭೇಟಿ ನೀಡಿ ಪರೀಕ್ಷಿಸುತ್ತಾರೆ.

    ಇದೀಗ ಈ ಮರದ ಭದ್ರತೆ ಮತ್ತು ನಿರ್ವಹಣೆಗಾಗಿ ಈವರೆಗೆ 64 ಲಕ್ಷ ರೂ. ಖರ್ಚಾಗಿದೆ ಎಂದು ವರದಿಯಾಗಿದೆ. ಸದ್ಯ ಮರಕ್ಕೆ ಲೀಫ್ ಕ್ಯಾಟರ್ಪಿಲ್ಲರ್ ಎಂಬ ಕೀಟ ಬಾಧೆಗೊಳಗಾಗಿದ್ದು, ಮರದ ಎಲೆಗಳು ಒಣಗುತ್ತಿದೆ. ಕೀಟಗಳ ದಾಳಿಗೆ ತೋಟಗಾರಿಕಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭದ್ರತಾ ಸಿಬ್ಬಂದಿ ಆರೋಪಿಸಿರುವುದು ವರದಿಯಾಗಿದೆ. (ಏಜೆನ್ಸೀಸ್) ಇದನ್ನೂ ಓದಿ: ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ IPL ಟ್ರೋಫಿ ಪ್ರದರ್ಶನ: ಎಲ್ಲೆಲ್ಲಿ? ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts