More

    ಪ್ರಣಬ್​ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ; ಶ್ವಾಸಕೋಶದ ಸೋಂಕು ಉಲ್ಬಣ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರ ಆರೋಗ್ಯ ದಿನೇದಿನೆ ಹದಗೆಡುತ್ತಿದೆ.

    ಮಿದುಳು ಸರ್ಜರಿಗೆ ಒಳಗಾಗಿರುವ ಪ್ರಣಬ್ ಮುಖರ್ಜಿ ವೆಂಟಿಲೇಟರ್​ ಸಹಾಯದಲ್ಲಿದ್ದಾರೆ. ಎಚ್ಚರವೂ ಇಲ್ಲ. ಕೊವಿಡ್​-19 ಸೋಂಕಿಗೆ ಒಳಗಾಗಿರುವ ಅವರಲ್ಲಿ ಈಗ ಶ್ವಾಸಕೋಶದ ಸೋಂಕು ಉಲ್ಬಣಗೊಂಡಿದೆ ಎಂದು ಚಿಕಿತ್ಸೆ ನೀಡುತ್ತಿರುವ ಆರ್ಮಿ ರಿಸರ್ಚ್​ ಆ್ಯಂಡ್​ ರೆಫರೆಲ್​ ಆಸ್ಪತ್ರೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆಗೆ ಚೋಟಾ ಶಕೀಲ್​ ರೂಪಿಸಿದ್ದ ಸಂಚು ವಿಫಲಗೊಳಿಸಿದ ಎಟಿಎಸ್​; ಶೂಟರ್​ ಅರೆಸ್ಟ್​

    84 ವರ್ಷದ ಪ್ರಣಬ್​ ಮುಖರ್ಜಿಯವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅದರ ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿದಾಗ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಅದನ್ನು ಸ್ವತಃ ಪ್ರಣಬ್​ ಮುಖರ್ಜಿಯವರೇ ಟ್ವೀಟ್​ ಮಾಡಿ ತಿಳಿಸಿದ್ದರು.

    ಅವರಿಗೆ ಮಾಡಲಾಗಿದ್ದ ಸರ್ಜರಿ ಯಶಸ್ವಿಯಾಗಿತ್ತು. ಆದರೆ ಅಂದಿನಿಂದಲೂ ವೆಂಟಿಲೇಟರ್​​ನಲ್ಲಿಯೇ ಇದ್ದಾರೆ. ಆದರೆ ಆರೋಗ್ಯ ಸುಧಾರಿಸುತ್ತಿಲ್ಲ. ಪ್ರತಿದಿನವೂ ಆಸ್ಪತ್ರೆ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡುತ್ತಿದೆ. (ಏಜೆನ್ಸೀಸ್​)

    ಸುಶಾಂತ್​ ಪ್ರಕರಣ ಸಿಬಿಐಗೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts