More

    ಸುಶಾಂತ್​ ಪ್ರಕರಣ ಸಿಬಿಐಗೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್​

    ನವದೆಹಲಿ: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡುತ್ತಿದ್ದಂತೆ, ಬಾಲಿವುಡ್​ ಸೆಲೆಬ್ರಿಟಿಗಳು ಸುಪ್ರೀಂ ತೀರ್ಪಿಗೆ ಜೈ ಎಂದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರಿಗೆ ಕೊಲೆ ಬೆದರಿಕೆ; ಫೋನ್​ ಮೂಲಕ ಕಿರುಕುಳ ಕೊಟ್ಟಿದ್ಯಾರು?

    ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​, ಕೃತಿ ಸನೂನ್​, ಶ್ರದ್ಧಾ ಕಪೂರ್​, ಶಕ್ತಿ ಕಪೂರ್​, ಶೇಖರ್​ ಸುಮನ್​, ಮುಖೇಶ್ ಛಾಬ್ರಾ ಸೇರಿ ಸಾಕಷ್ಟು ಮಂದಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.

    ಈ ಸಂಬಂಧ ಟ್ವಿಟ್​ ಮಾಡಿದ ಅಕ್ಷಯ್​ ಕುಮಾರ್​, ಸುಶಾಂತ್ ಸಿಂಗ್​ ರಜಪೂತ್​ ಸಾವಿನ ಹಿಂದಿನ ಅಸಲಿಯತ್ತು ಗೊತ್ತಾಗಲಿದೆ ಎಂದಿದ್ದಾರೆ. ಇತ್ತ ಕೃತಿ ಸನೂನ್​ ಸಹ, ‘ಕಳೆದ ಎರಡು ತಿಂಗಳಿಂದ ಎಲ್ಲವೂ ಅಸ್ಪಷ್ಟವಾಗಿತ್ತು. ಇದೀಗ ಸುಪ್ರೀಂ ಕೋರ್ಟ್​ ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಿದ್ದು ಹೊಸ ಭರವಸೆ ಮೂಡಿದೆ. ಸತ್ಯ ಯಾವತ್ತಿದ್ದರೂ ಆಚೆ ಬರಲಿದೆ’ ಎಂದಿದ್ದಾರೆ.

    ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್​’ ಎಂದು ಹೆಸರಿಟ್ಟ ದರ್ಶನ್​ ಅಭಿಮಾನಿ

    ಕಂಗನಾ ರಣಾವತ್​ ಸಹ ಪ್ರತಿಕ್ರಿಯಿಸಿದ್ದು, ‘ಮಾನವೀಯತೆಗೆ ಸಿಕ್ಕ ಜಯವಿದು. ಅಭಿನಂದನೆಗಳು ಎಸ್​ಎಸ್​ಆರ್ ವಾರಿಯರ್ಸ್​’ ಎಂದರೆ, ‘ಇದೊಂದು ಧನಾತ್ಮಕ ಹೆಜ್ಜೆ. ಈ ಸಮಯವನ್ನು ಗೌರವಿಸಿ. ಸಿಬಿಐಗೆ ಅವರ ಕೆಲಸ ಮಾಡಲು ಬಿಡಿ. ಸುಳ್ಳನ್ನು ಎತ್ತಿತೋರಿಸುವುದು ಬೇಡ ಎಂದು ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ.

    ಪ್ರಕರಣದ ವಿಚಾರಣೆಯನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಪಿಟಿಷನ್ ನಲ್ಲಿ ಇದ್ದ ಅಂಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್​, ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಎಲ್ಲ ಅಧಿಕಾರವೂ ಬಿಹಾರ ಸರ್ಕಾರಕ್ಕೆ ಇದೆ. ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ಸಹಕಾರ ನೀಡಬೇಕು ಎಂದು ಆದೇಶಿಸಿದೆ.

    ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಏಕ ಸದಸ್ಯ ಪೀಠ ಈ ಪಿಟಿಷನ್ ಅನ್ನು ವಿಚಾರಣೆಗೆ ಎತ್ತಿಕೊಂಡಿದೆ. ಮುಂಬೈ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದರೂ, ಪಟನಾ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ದೂರಿನಲ್ಲಿವ ಅಂಶಗಳು ಬಹಿರಂಗಪಡಿಸಿವೆ ಎಂದು ಹೇಳಿದ ನ್ಯಾಯಪೀಠ, ರಿಯಾ ಸಲ್ಲಿಸಿದ್ದ ಪಿಟಿಷನ್ ಅನ್ನು ತಿರಸ್ಕರಿಸಿತು. ಇದಕ್ಕೂ ಮುನ್ನ ಆಗಸ್ಟ್ 11ರ ವಿಚಾರಣೆ ವೇಳೆ ಪಿಟಿಷನ್ ಕುರಿತ ತೀರ್ಪನ್ನು ಕಾಯ್ದಿರಿಸಿದ್ದಾಗಿ ಹೇಳಿತ್ತು. (ಏಜೆನ್ಸೀಸ್​)

    ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts