More

    ಚೀನಾದ ಮಾಜಿ ಅಧ್ಯಕ್ಷರಿಗೆ ಅವಮಾನ?; ಪಕ್ಷದ ಉನ್ನತಮಟ್ಟದ ಸಭೆಯಿಂದ ಬಲವಂತವಾಗಿ ಹೊರಕ್ಕೆ!

    ನವದೆಹಲಿ: ಚೀನಾದ ಕಮ್ಯುನಿಸ್ಟ್ ಪಕ್ಷದ ಉನ್ನತಮಟ್ಟದ ಸಭೆಯಲ್ಲಿ ಅಲ್ಲಿನ ಮಾಜಿ ಅಧ್ಯಕ್ಷರಿಗೆ ಅವಮಾನ ಆಗುವಂಥ ಪ್ರಕರಣವೊಂದು ನಡೆದಿದ್ದು, ಜಗತ್ತಿನ ಗಮನವನ್ನು ಸೆಳೆದಿದೆ. ಪ್ರಸಕ್ತ ಅಧ್ಯಕ್ಷರ ಸಮ್ಮುಖದಲ್ಲೇ ಇಂಥದ್ದೊಂದು ಮುಜುಗರದ ಪ್ರಸಂಗ ನಡೆದಿದೆ.

    ಚೀನಾದ ಕಮ್ಯುನಿಸ್ಟ್ ಪಕ್ಷದ ಉನ್ನತಮಟ್ಟದ ಸಭೆಯ ಸಮಾರೋಪ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಹು ಜಿಂಟಾವೊ ಅವರನ್ನು ಬಲವಂತವಾಗಿ ಹೊರಹಾಕಲಾಗಿದೆ. ವಿಚಿತ್ರವೆಂದರೆ, ಪ್ರಸಕ್ತ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ಎದುರೇ ಈ ಘಟನೆ ನಡೆದಿದ್ದರೂ ಅವರು ಮುಗುಮ್ಮಾಗಿದ್ದರು.

    ಒತ್ತಾಯಪೂರ್ವಕವಾಗಿ ಹೊರಹಾಕಲು ಮುಂದಾದಾಗ ಅದಕ್ಕೆ ಅಸಹಕಾರ ತೋರಿ ಅವರು ಅಲ್ಲೇ ಉಳಿಯಲು ಯತ್ನಿಸಿದರೂ ಕೊನೆಗೆ ಅವರನ್ನು ಬಲವಂತವಾಗಿ ಹೊರಗೆ ಕರೆದೊಯ್ಯಲಾಯಿತು. ಅಲ್ಲಿನ ದಯನೀಯ ಹಾಗೂ ತೀವ್ರ ಮುಜುಗರ ಉಂಟು ಮಾಡಿದ ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಲಾರಂಭಿಸಿದೆ. ಆದರೆ ಚೀನಾದಲ್ಲಿ ಟ್ವಿಟರ್​ನಂತೆ ಇರುವ ಪ್ಲ್ಯಾಟ್​ಫಾರ್ಮ್​ ಆಗಿರುವ ವೀಬೋದಲ್ಲಿ ಈ ವಿಡಿಯೋ ಕಾಣಿಸದಂತೆ ಮಾಡಲಾಗಿದೆ ಎನ್ನಲಾಗುತ್ತಿದೆ. –ಏಜೆನ್ಸೀಸ್

    ನಟ ಚೇತನ್​ ವಿವಾದಾತ್ಮಕ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯೆ; ಬ್ರಾಹ್ಮಣತ್ವವನ್ನು ವ್ಯಾಖ್ಯಾನಿಸಿದ ಸ್ವಾಮೀಜಿ ಹೇಳಿದ್ದಿಷ್ಟು..

    ‘ಕಾಂತಾರ’ ಭರ್ಜರಿ ಯಶಸ್ಸು: ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಾರಾ ರಿಷಬ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts