More

    ಡಿಸಿ ಆದೇಶ ಮೀರಿ ಕೋಲಾರ ಪ್ರವೇಶಿಸಿದ ಪ್ರಮೋದ್​ ಮುತಾಲಿಕ್​… ವಶಕ್ಕೆ ಪಡೆದ ಪೊಲೀಸರು

    ಕೋಲಾರ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಹಮ್ಮಿಕೊಂಡಿರುವ ಕೋಲಾರ ಬಂದ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮುತಾಲಿಕ್​ ಅವರು ಕೋಮು ಸೌಹಾರ್ದತೆ ಕದಡಬಲ್ಲ ಪ್ರಚೋದನಾಕಾರಿ ಭಾಷಣ ಮಾಡಿದ ಉದಾಹರಣೆಗಳಿವೆ ಎಂದು ಹೇಳಿ ಅವರ ಕೋಲಾರ‌ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೂ ಈ ಆದೇಶವನ್ನು ಉಲ್ಲಂಘಿಸಿ ಕೋಲಾರಕ್ಕೆ ಅವರು ಆಗಮಿಸಬಹುದೆಂಬ ಶಂಕೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ವಾಹನಗಳ ತಪಾಸಣೆ ಕೈಗೊಳ್ಳಲಾಗಿತ್ತು. ಕೋಲಾರದ ಗಡಿ ರಾಮಸಂದ್ರದಲ್ಲಿ ಜಿಲ್ಲೆಯನ್ನು ಪ್ರವೇಶಿಸಲು ಯತ್ನಿಸಿದ ಮುತಾಲಿಕ್, ಕೋಲಾರದಲ್ಲಿ ಆಯೋಜಿಸಿದ್ದ ವೇದಿಕೆ‌ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಹೀಗೆ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಪ್ರವೇಶಿಸುತ್ತಿದ್ದ ಅವರನ್ನು ​ಮತ್ತು ಶ್ರೀರಾಮ್‌ ಸೇನೆ‌ಯ ಕಾರ್ಯಕರ್ತರನ್ನು ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ ಪ್ರಕರಣ: ಇಂದು ಕೋಲಾರ ಬಂದ್​

    ಬಿಜೆಪಿ ಸರ್ಕಾರದ ರೀತಿ ಸರಿಯಿಲ್ಲ: ಪೊಲೀಸರು ವಶಕ್ಕೆ ಪಡೆದ ಮೇಲೆ ಮಾತನಾಡಿದ ಪ್ರಮೋದ್ ಮುತಾಲಿಕ್, ನ.13 ರಂದು ನಡೆದ ಕೃತ್ಯ ಅತ್ಯಂತ‌ ಘೋರ ಮತ್ತು ಹೇಯ ಘಟನೆ, ಪೊಲೀಸರು ಸ್ವಲ್ಪ ತಡಮಾಡಿದ್ದರೂ ಅಂದು ದತ್ತಮಾಲಾಧಾರಿಗಳು ಭಸ್ಮವಾಗುತ್ತಿದ್ದರು. ಅದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುವೆ. ಆದ್ರೆ ಬಿಜೆಪಿ ಸರ್ಕಾರ ಇಂದು ನಡೆದುಕೊಳ್ಳುತ್ತಿರುವ ಕ್ರಮ ಸರಿಯಿಲ್ಲ, ಹಿಂದು‌ ಸಮಾಜದವರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಪ್ರತಿಭಟನೆ ಮಾಡಲು ಸಹ ಸರ್ಕಾರ ಅವಕಾಶ ಮಾಡಿಕೊಡದ ಬಗ್ಗೆ ನೋವು, ಸಿಟ್ಟು ಆಗುತ್ತಿದೆ ಎಂದರು.

    ಹಿಂದುಗಳಿಗೆ ಧೈರ್ಯ ತುಂಬಬೇಕಾಗಿದೆ,‌ ಅದೇ ರೀತಿ ಮುಸ್ಲಿಂ ಕೀಡಿಗೇಡಿಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ. ಸಂವಿಧಾನ ಮತ್ತು ಕಾನೂನುಬದ್ಧವಾಗಿ ಹೋರಾಟ ಮಾಡಲಾಗುತ್ತಿದೆ. ಇಡೀ ಹಿಂದು‌ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮುತಾಲಿಕ್​ ಹೇಳಿದರು.

    ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ? ಸಚಿವ ಬೈರತಿ ಬಸವರಾಜ ವ್ಯಂಗ್ಯ

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts