More

    ಶಸ್ತ್ರ ಚಿಕಿತ್ಸೆಗೆಂದು ಸ್ಪೇನ್​ಗೆ ಹಾರಿದ ಡಾರ್ಲಿಂಗ್ ಪ್ರಭಾಸ್!

    ನಟ ಡಾರ್ಲಿಂಗ್ ಪ್ರಭಾಸ್ ಅವರು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆಶ್ಯಾಮ್ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಸಿನಿಮಾಗೆ ಸಿಕ್ಕ ವಿಮರ್ಶೆಗಳಿಂದ ನಟ ಪ್ರಭಾಸ್ ಬೇಸರವಾಗಿದ್ದು ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಡಾರ್ಲಿಂಗ್ ಪ್ರಭಾಸ್ ಅವರು ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳದೆ ಇರುಲು ಕಾರಣ ಬೇರೇನೇ ಇದೆ. ಹೌದು, ಪ್ರಭಾಸ್ ಅವರು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಇದೇ ಕಾರಣಕ್ಕೆ ಪ್ರಭಾಸ್ ವಿದೇಶಕ್ಕೆ ಅಂದರೆ ಸ್ಪೇನ್‌ಗೆ ಹಾರಿದ್ದಾರೆ ಎಂಬ ಮಾಹಿತಿ ಇದೆ. ಅಂದಹಾಗೆ, ಪ್ರಭಾಸ್ ಕೆಲ ದಿನಗಳ ಹಿಂದೆ ಸಲಾರ್ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಆಗ, ಬಾರ್ಸಿಲೋನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
    ಈಗ ಅದೇ ಸಮಸ್ಯೆಯಿಂದ ಪ್ರಭಾಸ್ ಮತ್ತೊಂದು ಶಸ್ತ್ರಚಿಕಿತ್ಸೆ ಪಡೆಯಬೇಕಾಗಿದೆ. ಹಾಗಾಗಿ, ಸ್ಪೇನ್‌ಗೆ ಹಾರಿದ್ದಾರಂತೆ. ಇದು ಅಷ್ಟೇನು ಗಂಭೀರವಾದ ಶಸ್ತ್ರಚಿಕಿತ್ಸೆ ಅಲ್ಲ. ಬದಲಿಗೆ ಚಿಕ್ಕದಾದ ಸರ್ಜರಿ ಎನ್ನಲಾಗಿದೆ. ಆದರೂ, ನಟ ವೇಗವಾಗಿ ಗುಣಮುಖರಾಗಲು ಹೆಚ್ಚು ಕಾಲ ವಿಶ್ರಾಂತಿಯ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಇನ್ನು, ಸ್ಪೇನ್‌ಗೆ ಭೇಟಿ ನೀಡಿರುವ ಪ್ರಭಾಸ್‌ರನ್ನು ನೋಡಲು ಅಲ್ಲಿನ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ ಎನ್ನುತ್ತಿವೆ ವರದಿಗಳು. ಪ್ರಭಾಸ್‌ಗೆ ಸರ್ಜರಿಯ ಬಳಿಕ ವಿಶ್ರಾಂತಿಯ ಅಗತ್ಯ ಇದ್ದು, ಸದ್ಯಕ್ಕೆ ಸಲಾರ್ಶೂಟಿಂಗ್‌ನಲ್ಲಿ ಭಾಗಿ ಆಗುವುದಿಲ್ಲ. ‘ಸಲಾರ್ಚಿತ್ರ ಅಲ್ಲದೇ ಪ್ರಭಾಸ್ ಕೈಯಲ್ಲಿ ಇನ್ನೂ ಹಲವು ಚಿತ್ರಗಳಾಗಿವೆ. ‘ಆದಿಪುರುಷ್‘, ‘ಪ್ರಾಜೆಕ್ಟ್ ಕೆ‘, ‘ಸ್ಪಿರಿಟ್ಮತ್ತು ನಿರ್ದೇಶಕ ಮಾರುತಿ ಅವರ ರಾಜಾ ಡಿಲಕ್ಸ್ಎಂಬ ಹಲವು ಸಿನಿಮಾಗಳಲ್ಲಿ ಪ್ರಭಾಸ್ ತೆರೆಯ ಮೇಲೆ ಮಿಂಚಲಿದ್ದಾರೆ

    ಬಳಸದ 8 ಕೋಟಿ ರೂ. ಕಾರನ್ನು ಬೆಂಗಳೂರಿನ ಉದ್ಯಮಿಗೆ ಮಾರಿದ ನಟಿ ಪ್ರಿಯಾಂಕಾ ಚೋಪ್ರಾ!

    ಜೇಮ್ಸ್ ಜಾತ್ರೆಯಲ್ಲಿ ಕುಸಿದು ಬಿದ್ದ ಅಪ್ಪು ಅಭಿಮಾನಿ ಹೃದಯಾಘಾತದಿಂದ ಸಾವು

    ನಿಯತ್ತಿಲ್ಲ, ಬೇಜವಾಬ್ದಾರಿ, ಅಹಂಕಾರಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ! ಕಾರಣ?

    ಐ ಲವ್ ರಷ್ಯಾ ಪೀಪಲ್ ಎಂದ ಅಮೆರಿಕದ ನಟ ಅರ್ನಾಲ್ಡ್ ಶ್ವಾಜ್‌ನೆಗರ್! ರಷ್ಯಾ ಸೈನಿಕರಿಗೂ ಪ್ರೀತಿಯ ಸಂದೇಶ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts