More

    ಇಟಲಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಭಾಸ್​

    ‘ಬಾಹುಬಲಿ’ ಖ್ಯಾತಿಯ ಪ್ರಭಾಸ್​ ತಮ್ಮ 41ನೇ ಹುಟ್ಟುಹಬ್ಬವನ್ನು ಶುಕ್ರವಾರ ಇಟಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಅದೇನದು ಇಟಲಿಯಲ್ಲಿ? ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, ಪ್ರಭಾಸ್​ ಸದ್ಯ ಇಟಲಿಯಲ್ಲಿ ‘ರಾಧೇ ಶ್ಯಾಮ್​’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ಬಿಡುವಿನಲ್ಲಿ ಚಿತ್ರತಂಡದವರು ತರಿಸಿದ್ದ ದೊಡ್ಡ ಕೇಕ್​ ಕತ್ತರಿಸುವ ಮೂಲಕ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಡುಗಡೆಯಾದ ಒಂದೇ ದಿನದಲ್ಲಿ ಪೈರಸಿಯಾದ ‘ಮಿರ್ಜಾಪುರ್​ – 2’

    ಪ್ರಭಾಸ್​ ಅವರು ಕೇಕ್​ ಕತ್ತರಿಸುತ್ತಿರುವ ಮತ್ತು ಚಿತ್ರತಂಡದವರ ಜತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಹಲವು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಧಾಕೃಷ್ಣ ಕುಮಾರ್​, ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್, ನಾಯಕಿ ಪೂಜಾ ಹೆಗ್ಡೆ​ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಈ ಮಧ್ಯೆ, ಪ್ರಭಾಸ್​ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಧೇ ಶ್ಯಾಮ್​’ ತಂಡದವರು ಅಭಿಮಾನಿಗಳಿಗೆ ಗಿಫ್ಟ್​ ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಇದಕ್ಕೂ ಮೊದಲು ಚಿತ್ರದ ಒಂದು ಪೋಸ್ಟರ್​ ಮತ್ತು ನಾಯಕಿಯನ್ನು ಪರಿಚಯಿಸುವ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಇದೀಗ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಕುರುನಾಡು’, ‘ಬಿಂಬ’ ಚಿತ್ರಗಳ ನಿರ್ದೇಶಕ ಜಿ.ಮೂರ್ತಿ ನಿಧನ

    ಇನ್ನು, ಇದಕ್ಕೂ ಮುನ್ನ ಪ್ರಭಾಸ್​ ಹುಟ್ಟುಹಬ್ಬಕ್ಕೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಅದ್ಯಾವದರ ಗೋಜಿಗೆ ಹೋಗದ ತಂಡ ಕೇವಲ ಮೋಷನ್ ಪೋಸ್ಟರ್ ಅಷ್ಟೇ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರದ ಆರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆಯಂತೆ. ಆ ನಂತರ, ಮುಂದಿನ ವರ್ಷ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದೆ.

    ಕೋಮಲ್​ ಸಿನಿಮಾ ಬಗ್ಗೆ ಮೋದಿ ಮಾತಾಡಿದ್ದಾರೆ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts