More

    ಮತ್ತೊಮ್ಮೆ ಜತೆಯಾಗಿ ನಟಿಸಲಿದ್ದಾರಂತೆ ಪ್ರಭಾಸ್ ಮತ್ತು ಪೂಜಾ!

    ಹೈದರಾಬಾದ್​: ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೇ ಶ್ಯಾಮ್​ ಚಿತ್ರದ ಚಿತ್ರೀಕರಣ ಸಾಕಷ್ಟು ವಿಳಂಬವಾಗಿ, ಕೊನೆಗೂ ಲಾಕ್​ಡೌನ್​ಗೂ ಮುನ್ನ ಮುಗಿದಿತ್ತು. ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಈಗ ನೋಡಿದರೆ, ಈ ಚಿತ್ರದ ಬಿಡುಗಡೆ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಏಕೆಂದರೆ, ಚಿತ್ರದ ಚಿತ್ರೀಕರಣವೇ ಇನ್ನು ಮುಗಿದಲ್ಲ.

    ಇದನ್ನೂ ಓದಿ: ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ

    ಹೌದು, ಒಂದು ಹಾಡನ್ನು ಹೊರತುಪಡಿಸಿ, ರಾಧೇ ಶ್ಯಾಮ್​ ಚಿತ್ರದ ಚಿತ್ರೀಕರಣ ಮುಗಿದಿತ್ತಂತೆ. ಸತತವಾಗಿ ಚಿತ್ರದಲ್ಲಿ ತೊಡಗಿಸಿಕೊಂಡು ಸುಸ್ತಾಗಿದ್ದ ಪ್ರಭಾಸ್​, ಆ ಹಾಡನ್ನು ಕೈಬಿಡುವುದಕ್ಕೆ ನಿರ್ದೇಶಕರಿಗೆ ಮನವಿ ಮಾಡಿದ್ದರಂತೆ. ಇದಕ್ಕೆ ನಿರ್ದೇಶಕರು ಮತ್ತು ಚಿತ್ರತಂಡದವರು ಸಹ ಒಪ್ಪಿಕೊಂಡಿದ್ದಾರೆ. ಚಿತ್ರೀಕರಣ ಮುಗಿಯಿತು ಎಂದು ಘೋಷಿಸಿದ್ದಾರೆ.

    ಈಗ ನೋಡಿದರೆ, ಚಿತ್ರದ ನಿರ್ಮಾಪಕರಾದ ಟಿ-ಸೀರೀಸ್​ನ ಭೂಷಣ್​ ಕುಮಾರ್​, ಆ ಹಾಡಿನ ಚಿತ್ರೀಕರಣವನ್ನು ಮುಗಿಸಿಕೊಡುವುದಕ್ಕೆ ಚಿತ್ರತಂಡದವರಿಗೆ ಹೇಳಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ಹಾಡು ಚೆನ್ನಾಗಿ ಬಂದಿದ್ದು, ಚಿತ್ರದ ಹೈಲೈಟ್​ಗಳಲ್ಲಿ ಒಂದಾಗಲಿದೆಯಂತೆ. ಹಾಗಾಗಿ, ಆ ಹಾಡನ್ನೂ ಶೂಟ್​ ಮಾಡಿಕೊಟ್ಟರೆ, ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಪ್ರಮೋಷನ್​ ಮಾಡಬಹುದು ಎಂಬುದು ಅವರ ಐಡಿಯಾ. ಹಾಗಾಗಿ, ಪ್ರಭಾಸ್​ ಮತ್ತು ಪೂಜಾ ಮತ್ತೊಮ್ಮೆ ಈ ಹಾಡಿಗೆ ಮತ್ತೊಮ್ಮೆ ಜತೆಯಾಗಬೇಕಿದೆ.

    ಇದನ್ನೂ ಓದಿ: ಆರ್​ಆರ್​ಆರ್​ನ ಡಿಜಿಟಲ್ ಮತ್ತು ಸ್ಯಾಟಿಲೈಟ್ ಹಕ್ಕುಗಳು 325 ಕೋಟಿಗೆ ಮಾರಾಟ?

    ಸದ್ಯಕ್ಕೆ ಎಲ್ಲೆಡೆ ಲಾಕ್​​ಡೌನ್​ ಇರುವುದರಿಂದ ಮತ್ತು ಚಿತ್ರೀಕರಣ ಮಾಡುವುದಕ್ಕೆ ಸಾಧ್ಯವಿಲ್ಲದಿರುವುದರಿಂದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮೊದಲು ಮುಗಿಸಿ, ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ  ಆ ಹಾಡನ್ನು ಶೂಟ್​ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಆದರೆ, ಚಿತ್ರೀಕರಣಕ್ಕೆ ಅನುಮತಿ ಸಿಗುವುದು ಯಾವಾಗ ಮತ್ತು ಚಿತ್ರ ಬಿಡುಗಡೆ ಯಾವಾಗ ಎಂಬುದು ಪ್ರಭಾಸ್​ ಅಭಿಮಾನಿಗಳಿಗೆ ಬಗೆಹರಿಯದ ವಿಷಯವಾಗಿದೆ.

    ಒಂದೇ ಬೀಡಿ ಹಂಚಿಕೊಂಡು ಸೇದುತ್ತಿದ್ದರಂತೆ ಶಾರೂಖ್-ಮನೋಜ್ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts