More

    ವಿದ್ಯುತ್ ವ್ಯತ್ಯಯ ತಡೆಯಲು ಟ್ರಾನ್ಸ್‌ಫಾರ್ಮ್‌ರ್ ವ್ಯವಸ್ಥೆಗೊಳಿಸಿದ್ದಗಿ ಹೇಳಿದ ಶಾಸಕ ಹಾಲಪ್ಪ ಆಚಾರ್

    ಯಲಬುರ್ಗಾ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವನ್ನು ತಡೆಯಲು ಹೆಚ್ಚುವರಿ ಟ್ರಾನ್ಸ್‌ಫಾರ್ಮ್‌ರ್‌ಗಳ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ತಾಲೂಕಿನ ಗಾಣಧಾಳ ಗ್ರಾಮದ ವಿದ್ಯುತ್ ವಿತರಣಾ ಘಟಕದಲ್ಲಿ ಜೆಸ್ಕಾಂ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಹೆಚ್ಚುವರಿ 110/11ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಚಟುವಟಿಕೆಗಳಿಗೆ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ರೈತರ ಹಿತದೃಷ್ಟಿಯಿಂದ ಈ ಕಾರ್ಯ ಮಾಡಲಾಗಿದೆ. ಸರ್ಕಾರಗಳು ರೈತಪರ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ಶ್ರಮಿಸುತ್ತಿವೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅನ್ನದಾತರ ಬದುಕು ಹಸನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ನೀರಾವರಿ ಮತ್ತು ರೈತಪರ ಕಾಳಜಿ ತೋರಲಿಲ್ಲ. ನಮ್ಮ ಕಾಲಾವಧಿಯಲ್ಲಿ ಕೆರೆಗಳಿಗೆ ನೀರು ಹರಿಸುವುದೇ ನಮ್ಮ ಉದ್ದೇಶ ಎಂದರು.

    ಗ್ರಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ಬಡಿಗೇರ್, ಜೆಸ್ಕಾಂ ಸಂಸ್ಥೆಯ ಎಸ್‌ಇಇ ಈ.ಪ್ರಹ್ಲಾದ, ಇಇ ಫಣಿ ರಾಜೇಶ್, ಇಇ ಮೌನೇಶ ಪತ್ತಾರ, ಎಇಇ ವೀರೇಶ ಹುಡೇದ್, ಕೆ.ಗೋಪಾಲ್, ಪ್ರಮುಖರಾದ ಮಲ್ಲಿಕಾರ್ಜುನ ಹರ್ಲಾಪುರ, ವೀರಣ್ಣ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ್, ರಾಚಪ್ಪ ಹುರಳಿ, ವಿಜಯಕುಮಾರ ತಾಳಕೇರಿ, ಆದೇಶ ರೊಟ್ಟಿ, ಹನುಮರಡ್ಡಿ ರಡ್ಡೇರ್, ಆನಂದ ಈಳಿಗೇರ್, ಶರಣಪ್ಪ ಹೊಸ್ಕೇರಿ, ನಾಗರಾಜ ನವಲಹಳ್ಳಿ, ಯಮನೂರಪ್ಪ ಬ್ಯಾಳಿ, ಈಶ್ವರ ಕಟಗಿಹಳ್ಳಿ ಹಾಗೂ ಜೆಸ್ಕಾಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts