More

    ಟ್ರಾನ್ಸ್ಫಾರ್ಮರ್ ಸುತ್ತ ಬೇಲಿ ನಿರ್ಮಿಸಿ

    ಸೊರಬ: ಪುರಸಭೆ ವ್ಯಾಪ್ತಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳ ಸುತ್ತ ಬೇಲಿ ನಿರ್ಮಿಸುವಂತೆ ಒತ್ತಾಯಿಸಿ ಸೋಮವಾರ ವಿಶ್ವ ಹಿಂದು ಪರಿಷತ್, ಬಜರಂಗದಳದಿAದ ಮೆಸ್ಕಾಂ ಎಇಇ ಎಸ್. ಸತ್ಯಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.

    ವಿಹಿಂಪ ತಾಲೂಕು ಅಧ್ಯಕ್ಷ ಎಂ.ಎಸ್.ಕಾಳಿAಗರಾಜ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳ ಸುತ್ತ ಬೇಲಿ ಇಲ್ಲದೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ. ಮರೂರು ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ಸ್ಪರ್ಶಿಸಿ ಸುಮಾರು ಒಂದು ಲಕ್ಷ ಮೌಲ್ಯದ ಸೀಮೆ ಹಸುವೊಂದು ಭಾನುವಾರ ಮೃತ ಪಟ್ಟಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷವೂ ಬಿಡಾಡಿ ದನವೊಂದು ಮೃತಪಟ್ಟಿತ್ತು. ಈ ಬಗ್ಗೆ ಮೌಖಿಕವಾಗಿ ಸಂಬAಽಸಿದ ಇಲಾಖೆಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅನೇಕ ಅನಾಹುತಗಳಿಗೆ ಕಾರಣವಾಗುತ್ತಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಸುತ್ತ ಬೇಲಿ ನಿರ್ಮಿಸುವ ತುರ್ತು ಅಗತ್ಯವಿದೆ ಎಂದರು.
    ಮರೂರು ರಸ್ತೆಯ ಟ್ರಾನ್ಸ್ಫಾರ್ಮರ್ ಬಳಿಯೇ ಶಾಲೆ ಇದೆ. ನಿತ್ಯ ಸಾವಿರಾರು ಜನ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಮಕ್ಕಳೂ ಇಲ್ಲೇ ಸುತ್ತಮುತ್ತ ಆಟವಾಡುತ್ತಾರೆ. ಆಟವಾಡುವ ವೇಳೆ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚು. ವಿದ್ಯುತ್ ಸ್ಪರ್ಶದಿಂದ ಮೃತ ಪಟ್ಟಿರುವ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
    ನಂತರ ತಹಸೀಲ್ದಾರ್ ಹಾಗೂ ಪಪಂ ಮುಖ್ಯಾಽಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು. ಬಜರಂಗ ದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ, ಪ್ರಮುಖರಾದ ರವಿ ಗುಡಿಗಾರ್, ನಾಗರಾಜ್ ಆಚಾರ್ ಅಂಬಾರಿ, ಹರೀಶ್, ನಾಗರಾಜ ಗೌಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts