More

    ಪೋಸ್ಟ್ ಮಾಸ್ಟರ್‌ನಿಂದ ಲಕ್ಷಾಂತರ ರೂ. ವಂಚನೆ!

    ನರೇಗಲ್ಲ: ಸಮೀಪದ ಕೋಡಿಕೊಪ್ಪ ಗ್ರಾಮದ ಅಂಚೆ ಇಲಾಖೆಯ ಶಾಖಾ ಕಚೇರಿಯ ಪೋಸ್ಟ್ ಮಾಸ್ಟರ್ ತಿಪ್ಪಣ್ಣ ಬೇವಿನಕಟ್ಟಿ ಎಂಬುವವರು ಶಾಖೆಯಲ್ಲಿನ ಗ್ರಾಹಕರ ಹಣ ದುರ್ಬಳಕೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ರೋಣ ಉಪ ವಿಭಾಗ ಅಂಚೆ ನಿರೀಕ್ಷಕ ಶ್ರೀಕಾಂತ ನೀಲಕಂಠಿ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಹಿನ್ನೆಲೆ: ಮೂಲತಃ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ನಿವಾಸಿ ತಿಪ್ಪಣ್ಣ ಅಮರಪ್ಪ ಬೇವಿನಕಟ್ಟಿ ಕೋಡಿಕೊಪ್ಪ ಗ್ರಾಮದ ಎಸ್.ಎ. ಕಾಲೇಜ್ ಆವರಣದಲ್ಲಿರುವ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಗ್ರಾಹಕರ ಅಂಚೆ ಹಣವನ್ನು ದುರ್ಬಳಿಕೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಶಾಖೆಯ ಮೃತ ಗ್ರಾಹಕರಾದ ಯಲ್ಲವ್ವ ಹಳ್ಳದಮನಿಯವರ ಉಳಿತಾಯ ಖಾತೆಯಿಂದ 6 ಸಾವಿರ ರೂ, ಹುಸೇನಸಾಬ್ ಆರ್. ಖಾತೆಯಿಂದ 5,900, ಶರಣಯ್ಯ ಬಿ. ಓಲಿಮಠ ಖಾತೆಯಿಂದ 13 ಸಾವಿರ ರೂ. ಹಾಗೂ ಶಿವಮೂರ್ತಿ ಅಂದಾನಯ್ಯನವರ ಖಾತೆಯಿಂದ 20 ಸಾವಿರ ರೂ. ತೆಗೆದುಕೊಂಡಿದ್ದಾರೆ. ಕೆಲಸಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಯುತ್ತಿದ್ದು ಒಟ್ಟು 44,900 ರೂ. ಲಪಟಾಯಿಸಿ ಅಂಚೆ ಇಲಾಖೆಗೆ ವಂಚಿಸಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

    ಅಂಚೆ ಇಲಾಖೆಯನ್ನು ನಂಬಿಕೊಂಡು ಠೇವಣಿ ಮಾಡಲು ಬರುವ ಕೋಡಿಕೊಪ್ಪ, ನರೇಗಲ್ಲ, ಕೋಚಲಾಪೂರ, ತೋಟಗಂಟಿ ಸೇರಿದಂತೆ ಸುತ್ತಲಿನ ಸಾರ್ವಜನಿಕರಿಗೆ ವಂಚಿಸಲಾಗಿದೆ. ಹಿರಿಯ ನಾಗರಿಕರಿಗೆ ಇಲಾಖೆಯು ಕಡಿಮೆ ಬಡ್ಡಿ ಕೊಡುತ್ತದೆ ನಾನು ಹೆಚ್ಚಿನ ಬಡ್ಡಿ ಹಾಕಿಕೊಡುತ್ತೇನೆ ಎಂದು ನಂಬಿಸಿ ಜನರಿಂದ ಲಕ್ಷಾಂತರ ರೂಪಾಯಿ ಯಾಮಾರಿಸಿ ಹಣ ಪಡೆದಿದ್ದಾರೆ ಎನ್ನುವ ಆರೋಈಪ ಕೇಳಿ ಬಂದಿದೆ. ಇನ್ನು ಕೆಲವರಿಗೆ ಠೇವಣಿ ರಸೀದಿಯನ್ನು ನಂತರ ನೀಡುತ್ತೇನೆ ಎಂದು ಹೇಳಿ ಹಣ ಪಡೆದುಕೊಂಡು ರಸೀದಿಯೂ ನೀಡದೇ ಹಣ ಲಪಟಾಯಿಸಿದ್ದಾನೆ. ಹಣ ಕಳೆದುಕೊಂಡವರು ದೂರು ನೀಡಲು ಯಾವುದೇ ಪುರಾವೇ ಇಲ್ಲದೆ ಪರದಾಡುವಂತಾಗಿದೆ.

    ಕೋಡಿಕೊಪ್ಪ ಗ್ರಾಮದ ಅಂಚೆ ಶಾಖೆಯ ಪೋಸ್ಟ್ ಮಾಸ್ಟರ್ ನವೆಂಬರ್ 30 ರಿಂದ ಕರ್ತವ್ಯಕ್ಕೆ ಗೈರಾಗಿದ್ದಾರೆ. ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದ್ದು ಸಂಪೂರ್ಣ ಮಾಹಿತಿಯನ್ನು ಇಲಾಖೆಯ ವರದಿ ಅಂತಿಮವಾದ ಬಳಿಕ ನೀಡಲಾಗುತ್ತದೆ.
    ಶ್ರೀಕಾಂತ ನೀಲಕಂಠಿ, ಅಂಚೆ ನಿರೀಕ್ಷಕ, ರೋಣ ಉಪವಿಭಾಗ

    ಕೋಡಿಕೊಪ್ಪ ಗ್ರಾಮದ ಪೋಸ್ಟ್ ಮಾಸ್ಟರ್ ಗ್ರಾಹಕರ ಉಳಿತಾಯ ಖಾತೆಯಲ್ಲಿನ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಐಪಿಸಿ ಕಲಂ 409, 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಯ ಪತ್ತೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
    ಬಿ.ಟಿ. ರಿತ್ತಿ, ಪಿಎಸ್‌ಐ ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts