More

    ನನ್ನ್ಯಾಕೆ ಬಲವಂತಾಗಿ ತಾಯಿ ಮಾಡ್ತೀರಿ? ಪೂನಂ ಪಾಂಡೆ ಪ್ರಶ್ನೆ

    ಮುಂಬೈ: ಮಾಡಲ್​ ಕಂ ನಟಿ ಪೂನಂ ಪಾಂಡೆ ಕಳೆದ ಸೆಪ್ಟೆಂಬರ್​ನಲ್ಲಿ ಸ್ಯಾಮ್​ ಎಂಬಾತನನ್ನು ಮದುವೆಯಾಗಿದ್ದು, ಮೂರೇ ದಿನಗಳಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದು, ಈ ಪ್ರಕರಣ ಪೊಲೀಸ್​ ಸ್ಟೇಶನ್​ ಮೆಟ್ಟಿಲೇರಿದ್ದು, ಆ ನಂತರ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ಮಾಡಿದ್ದು … ಇವೆಲ್ಲವನ್ನೂ ಹೇಳುತ್ತಾ ಹೋದರೆ, ಸಾಕಷ್ಟು ಸಮಯ ಬೇಕಾದೀತು.

    ಇದನ್ನೂ ಓದಿ: ಅಡಕತ್ತರಿಯಲ್ಲಿ ಚಿರಂಜೀವಿ … ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​?

    ಜನರ ಮನಸ್ಸಿನಿಂದ ಈ ಘಟನೆಗಳು ಮರೆಯಾಗುವುಕ್ಕೆ ಮೊದಲೇ, ಪೂನಂ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಪೂನಂ ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಡಿದ್ದು, ಅದು ಆಕೆಯ ಕಿವಿಗೂ ಬಿದ್ದಿದೆ. ತಕ್ಷಣವೇ ಹೊರಬಂದ ಅವರು, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು …

    ಈ ಕುರಿತು ಮಾತನಾಡಿರುವ ಅವರು, ‘ನನ್ನ್ಯಾಕೆ ಬಲವಂತವಾಗಿ ತಾಯಿ ಮಾಡ್ತೀರಿ. ಬೇರೆಯವರಿಗೆ ಇದು ಸಿಹಿಸುದ್ದಿ ಇರಬಹುದು, ನನಗಲ್ಲ. ಏಕೆಂದರೆ, ನಾನು ಪ್ರಗ್ನೆಂಟ್​ ಅಲ್ಲ. ಇಷ್ಟೆಲ್ಲ ಸುದ್ದಿ ಮಾಡುವಾಗ, ಕೊನೆಯ ಪಕ್ಷ ಒಂದು ಮಾತು ಕೇಳುವುದಕ್ಕೇನು. ನನ್ನ ಜೀವನ ಒಂದು ತೆರೆದ ಪುಸ್ತಕ ಅಂತ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಈ ರೀತಿ ಫೇಕ್​ ನ್ಯೂಸ್​ ಮಾಡುವ ಬದಲು, ನನ್ನನ್ನೇ ನೇರವಾಗಿ ಕೇಳಬಹುದಿತ್ತಲ್ಲ. ಒಂದು ಪಕ್ಷ ನಾನು ಪ್ರಗ್ನೆಂಟ್​ ಆದರೆ, ಪೇಡಾ ಹಂಚುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ‘ದಿ ಫ್ಯಾಮಿಲಿ ಮ್ಯಾನ್​ 3’ನಲ್ಲಿ ವಿಜಯ್​ ಸೇತುಪತಿ? ಹೀಗೊಂದು ಸುದ್ದಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts