More

    ಕಾಲು ತೋರಿಸಿ ಏನು ಹೇಳೋಕೆ ಹೊರಟಿದ್ದಾರೆ ಪೂಜಾ?

    ಪೂಜಾ ಹೆಗ್ಡೆ, ಲಾಕ್​ಡೌನ್​ ಸಮಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸ್ವಲ್ಪ ಸಕ್ರಿಯವಾಗಿಯೇ ಇದ್ದರು. ಇದರಿಂದ ಪೂಜಾ ಹೆಗ್ಡೆ ಅವರನ್ನು ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    ಈ ಸಂಖ್ಯೆ ಇದೀಗ 11 ಮಿಲಿಯನ್​ ಆಗಿದೆ. ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ಗೆ 11 ಲಕ್ಷ ಹಿಂಬಾಲಕರಿರುವ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ಪೂಜಾ ಹೆಗ್ಡೆ ಒಂದು ವಿಶೇಷ ಫೋಟೋ ಹಾಕಿದ್ದಾರೆ. ಇಷ್ಟಕ್ಕೂ ಏನದು ಸ್ಪೆಷಲ್​ ಫೋಟೋ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.

    ಇದನ್ನೂ ಓದಿ: ಸುಶಾಂತ್​ ಕೇಸ್​ ಸಿಬಿಐಗೆ ಒಪ್ಪಿಸಲು ಅಮಿತ್​ ಶಾಗೆ ರಿಯಾ ಮನವಿ

    ಎರಡೂ ಕಾಲುಗಳನ್ನು ಮೇಲಕ್ಕೆತ್ತಿ, ಅದರ ಪಕ್ಕ ಫಾಲೋವರ್ಸ್​ ಅಂದಷ್ಟೇ ಬರೆದುಕೊಂಡಿದ್ದಾರೆ. ಈ ಮೂಲಕ ತಮಗೆ 11 ಲಕ್ಷ ಹಿಂಬಾಲಕರಿದ್ದಾರೆ ಎಂಬ ವಿಷಯವನ್ನು ಪರೋಕ್ಷವಾಗಿ ಹೇಳುವ ಪ್ರಯತ್ನವನ್ನು ಅವರು ಈ ಫೋಟೋದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.

    ಇದನ್ನೂ ಓದಿ: ಸೂಪರ್​ ಹೀರೋ ಅವತಾರದಲ್ಲಿ ಕತ್ರಿನಾ; ಅಲಿ ಅಬ್ಬಾಸ್ ಜಾಫರ್ ಜತೆ ಹ್ಯಾಟ್ರಿಕ್​ ಸಿಡಿಸಲು ರೆಡಿ

    ಎಲ್ಲಾ ಸರಿ, ಪೂಜಾ ಕಾಲುಗಳನ್ನು ತೋರಿಸಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಅದಕ್ಕೆ ಕಾರಣ, ಇತ್ತೀಚಿನ ದಿನಗಳಲ್ಲಿ ಟಾಲಿವುಡ್​ನಲ್ಲಿ ಅವರ ಕಾಲುಗಳು ಬಹಳ ಫೇಮಸ್​ ಆಗಿರುವುದು. ‘ಅಲಾ ವೈಕುಂಠಪುರಂಲೋ’ ಚಿತ್ರದಲ್ಲಿ ಪೂಜಾ ತಮ್ಮ ಉದ್ದ ಕಾಲುಗಳನ್ನು ಹೆಚ್ಚುಹೆಚ್ಚು ಪ್ರದಶಿರ್ಸುವ ಮೂಲಕ ಇನ್ನಷ್ಟು ಜನಪ್ರಿಯರಾದರು. ಹಾಗಾಗಿ ಅದನ್ನು ಈ ಫೋಟೋದ ಮೂಲಕ ಸೂಚ್ಯವಾಗಿ ಹೇಳುವುದಕ್ಕೆ ಪ್ರಯತ್ನ ಮಾಡಿದ್ದಾರಂತೆ.

    ಈ ಕುರಿತು ಮಾತನಾಡಿರುವ ಅವರು, ‘ಈ ವರ್ಷದ ಆರಂಭದಿಂದಲೂ ನನ್ನ ಕಾಲುಗಳು ಬಹಳ ಸುದ್ದಿಯಲ್ಲಿವೆ. ಅದೇ ಕಾರಣಕ್ಕೆ, ಈ ತರಹ ಮಾಡಿದೆ’ ಎನ್ನುವುದರ ಜತೆಗೆ, ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

    ರವೀನಾ ಟಂಡನ್​ ಮನೆಯಲ್ಲಿಯೇ ನಡೆಯುತ್ತಿದೆ ಶೂಟಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts