More

    ನಾನು ಕರ್ನಾಟಕದವಳೆ, ಮಂಗಳೂರಿನವಳು! ಟಾಲಿವುಡ್​ನ ಬುಟ್ಟಬೊಮ್ಮಾಳ ಮಾತಿಗೆ ಕನ್ನಡಿಗರು ಫಿದಾ!

    ಬೆಂಗಳೂರು: 66 ವರ್ಷದ ಬಳಿಕ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ನಡೆಯಲಿರುವ ವಿಷಯ ಬಹುತೇಕ ಎಲ್ಲಾ ಕನ್ನಡಿಗರಿಗೂ ಸಂತಸ ತಂದಿದೆ. ಫಿಲ್ಮ್ ಫೇರ್ ಅಂದರೆ ಬರೀ ಪ್ರಶಸ್ತಿ ಸ್ವೀಕರಿಸುವುದು ಅಥವಾ ಕೊಡುವುದು ಅಲ್ಲ. ಅಲ್ಲಿ ಬಹಳಷ್ಟು ಮನರಂಜನೆ ಕಾರ್ಯಕ್ರಮಗಳು ಇರುತ್ತವೆ. ವರ್ಷಕ್ಕೊಮ್ಮೆ ದಕ್ಷಿಣ ಭಾರತದ ಸಿನಿ ಸೆಲೆಬ್ರಿಟಿಗಳು ಒಟ್ಟಿಗೆ ಸೇರುವ ಅದ್ಧೂರಿ ವೇದಿಕೆ ಅದು. ಅಂತಹ ಕಾರ್ಯಕ್ರಮ ಈ ಭಾರಿ ಬೆಂಗಳೂರಿನಲ್ಲಿ ನಡೆಯಲಿದ್ದು ಇದರ ಸಂಬಂಧ, ಫಿಲ್ಮ್ ಫೇರ್ ಸಂಪಾದಕ ಜಿತೇಶ್ ಪಿಳ್ಳೈ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ್ದ ಸೌತ್​ನ ಬುಟ್ಟಬೊಮ್ಮ, ಕರಾವಳಿ ಸುಂದರಿ ನಟಿ ಪೂಜಾ ಹೆಗ್ಡೆ ಕನ್ನಡ ಪ್ರೇಮವನ್ನು ಮೆರೆದಿರುವ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

    2022 ಮಾರ್ಚ್ ತಿಂಗಳಲ್ಲಿ, ಬೆಂಗಳೂರಿನಲ್ಲಿ ನಡೆಯಲಿರುವ 66ನೇ ಫಿಲ್ಮ್ ಫೇರ್ ಬಗ್ಗೆ ನಟಿ ಪೂಜಾ ಹೆಗ್ಡೆ ತುಂಬಾನೆ ಮಾತಾಡಿದ್ದಾರೆ. ಪೂಜಾ ಹೆಗ್ಡೆ, ‘ಪ್ರತೀ ವರ್ಷದಂತೆ ಈ ವರ್ಷ ಕೂಡ ಫಿಲ್ಮ್ ಫೇರ್​​ನಲ್ಲಿ ಭರಪೂರ ಮನರಂಜನೆ ಇರಲಿದೆ. ಈ ವರ್ಷ ಫಿಲ್ಮ್ ಫೇರ್​​ನಲ್ಲಿ ದಕ್ಷಿಣ ತಾರೆಯರ ಮಹಾ ಸಂಗಮವೇ ಆಗಲಿದೆ. ಅದರಲ್ಲೂ, ಬೆಂಗಳೂರಿನಲ್ಲಿ 66ನೇ ಫಿಲ್ಮ್ ಫೇರ್ ನಡೆಯಲಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ’ ಎಂದು ಹೇಳಿದ್ದಾರೆ. ತಮ್ಮ ಮಾತು ಮುಗಿಸದೆ ನಟಿ ಪೂಜಾ ಹೆಗ್ಡೆ ತಾವು ಕನ್ನಡದವರೆ ಎಂದು ಹೇಳಿ ಅವರ ಕನ್ನಡ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ನಾನು ಕರ್ನಾಟಕದವಳೆ, ಮಂಗಳೂರಿನವಳು! ಟಾಲಿವುಡ್​ನ ಬುಟ್ಟಬೊಮ್ಮಾಳ ಮಾತಿಗೆ ಕನ್ನಡಿಗರು ಫಿದಾ!

    ‘ನನ್ನನ್ನು ಸಿನಿ ಪ್ರಿಯರು ಪ್ರೀತಿಯಿಂದ ಬುಟ್ಟಬೊಮ್ಮ ಎಂದು ಕರೆಯುತ್ತಿದ್ದಾರೆ. ಇನ್ನು ಈ 66ನೇ ಫಿಲ್ಮ್ ಫೇರ್​​ನಲ್ಲಿ ಭಾಗವಹಿಸಲು ಮತ್ತು ಬೆಂಗಳೂರಿಗೆ ಬರಲು ನನಗೆ ಖುಷಿಯಾಗಿದೆ. ಏಕೆಂದರೆ, ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು, ನಾನು ಕರ್ನಾಟಕದವಳೆ. ಅದರಲ್ಲೂ ಮಂಗಳೂರಿನವಳು ಎಂದು ಹೇಳಲು ಹೆಮ್ಮೆ ಇದೆ’, ಅಂತ ಹೇಳಿ ಖುಷಿ ಪಟ್ಟರು. ಸದ್ಯ, ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದು ಮತ್ತು ನಟಿ ಪೂಜಾ ಹೆಗ್ಡೆ ಕರ್ನಾಟಕದ ಬಗ್ಗೆ ಮಾತಾಡಿರುವ ಈ ಮಾತುಗಳು, ಸಣ್ಣ ಸಣ್ಣ ವಿಡಿಯೋಗಳ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕನ್ನಡಿಗರ ಮನಸ್ಸು ಕದ್ದಿವೆ.

    ಅಪ್ಪುವಿನ ‘ಗಂಧದ ಗುಡಿ’ ಟೀಸರ್ ನೋಡಿ ಶಾಕ್​ ಆಯ್ತು, ಬೇಜಾರೂ ಆಯ್ತು: ಶಿವಣ್ಣ ಭಾವುಕ

    ಭಾರತದಿಂದ ಹೊರಹೋಗುವ ಹಾಗಿಲ್ಲ ನಟಿ ಜಾಕ್ವೆಲಿನ್ ಫೆರ್ನಾಂಡಿಸ್; ವಿಮಾನ ನಿಲ್ದಾಣದಿಂದ ಮನೆಗೆ ವಾಪಸ್!

    ಬೆಂಗಳೂರಿಗೆ ಮರಳಿದ ಮೋಹಕ ತಾರೆ ರಮ್ಯಾ; ಕುತೂಹಲ ಸೃಷ್ಟಿಸಿದೆ ಅನಿರೀಕ್ಷಿತ ಆಗಮನ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts