More

    ಪಾಂಪಿಯೋ ಇರುವೆ ಇದ್ದಂತೆ… ಆಳವಾಗಿ ಬೇರೂರಿರುವ ಮರವನ್ನು ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ…

    ಬೀಜಿಂಗ್​: ವಿಸ್ತರಣಾವಾದಿ ಚೀನಾದ ವಿರುದ್ಧ ವಿಶ್ವದ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ನೀಡಿರುವ ಕರೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಾಂಪಿಯೋ ಒಂದು ಇರುವೆ ಇದ್ದಂತೆ… ಅವರು ಆಳವಾಗಿ ಬೇರೂರಿರುವ ಮರವನ್ನು ಬುಡ ಸಮೇತ ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದೆ.

    ಕಮ್ಯುನಿಸ್ಟ್​ ಚೈನಾ ಆ್ಯಂಡ್​ ದ ಫ್ರೀ ವರ್ಲ್ಡ್ಸ್​ ಫ್ಯೂಚರ್​ ಎಂಬ ವಿಷಯವಾಗಿ ಅಮೆರಿಕದ ರಿಚರ್ಡ್​ ನಿಕ್ಸನ್​ ಪ್ರಸಿಡೆನ್ಶಿಯಲ್​ ಲೈಬ್ರರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ಮೈಕ್​ ಪಾಂಪಿಯೋ ಚೀನಾದ ವಿಸ್ತರಣಾವಾದವನ್ನು ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಮೈಕ್​ ಪಾಂಪಿಯೋ ತಮ್ಮನ್ನು ತಾವು 21ನೇ ಶತಮಾನದ ಜಾನ್​ ಫಾಸ್ಟರ್​ ಡ್ಯೂಲ್ಸ್​ ಎಂದು ಭಾವಿಸಿದಂತೆ ಇದೆ. ಅದಕ್ಕಾಗಿಯೇ ಅವರು ಜಾಗತಿಕರಣಗೊಂಡಿರುವ ವಿಶ್ವದಲ್ಲಿ ಚೀನಾ ವಿರುದ್ಧ ಗಟ್ಟಿಯಾದ ಧ್ವನಿಯಲ್ಲಿ ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ. ಒಂದು ಇರುವೆಯಾಗಿ ಆಳವಾಗಿ ಬೇರೂರಿರುವ ಮರವನ್ನು ಬುಡ ಸಮೇತ ಅಲ್ಲಾಡಿಸಲು ಅವರು ಮಾಡುತ್ತಿರುವ ಪ್ರಯತ್ನ ನಿಶ್ಫಲವಾಗಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮತ್ತು ವಾರ್ತಾ ವಿಭಾಗದ ಮಹಾಪ್ರಧಾನ ನಿರ್ದೇಶಕ ಹುವಾ ಚ್ಯುನ್​ಯಿಂಗ್​ ಹೇಳಿದ್ದಾರೆ.

    ಹಿಂದೆ ಮಾಡಿದ ತಪ್ಪನ್ನು ಮತ್ತೆ ಈಗ ಪುನರಾವರ್ತಿಸುವುದು ಬೇಡ. ಚೀನಾದ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದಾದರೆ ಯುರೋಪ್​, ಆಫ್ರಿಕಾ, ದಕ್ಷಿಣ ಆಫ್ರಿಕಾ ಮತ್ತು ವಿಶೇಷವಾಗಿ ಇಂಡೋ-ಪೆಸಿಫಿಕ್​ ಪ್ರದೇಶದಲ್ಲಿರುವ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲವೂ ಒಂದಾಗಬೇಕು. ಇದು ನಿರ್ಬಂಧಿಸುವ ವಿಷಯವಲ್ಲ. ಬದಲಿಗೆ ಹಿಂದೆಂದರೂ ನಾವು ಎದುರಿಸಿರದ ಜಟಿಲವಾದ ಸವಾಲಿಗೆ ಎದೆಯೊಡ್ಡಲು ಅಣಿಯಾಗಬೇಕಿದೆ. ಈಗಾಗಲೆ ಯುಎಸ್​ಎಸ್​ಆರ್​ ಮುಕ್ತ ವಿಶ್ವದಿಂದ ಇಲ್ಲದಾಗಿದೆ. ಇದೀಗ ಆ ಸ್ಥಾನದಲ್ಲಿ ಕಮ್ಯುನಿಸ್ಟ್​ ಚೀನಾ ನಮ್ಮ ಗಡಿಗಳನ್ನು ಪ್ರವೇಶಿಸಿದೆ ಎಂದು ಪಾಂಪಿಯೋ ಹೇಳಿದ್ದರು.

    ಇದನ್ನೂ ಓದಿ: ಅರುಂಧತಿ ಹಿಂದಿ ರಿಮೇಕ್​ನಲ್ಲಿ ದೀಪಿಕಾ ಪಡುಕೋಣೆ ನಾಯಕಿ!

    ಈಗ ನಾವೇನಾದರೂ ಚೀನಾದ ಮುಂದೆ ಮಂಡಿಯೂರಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳೆಲ್ಲರೂ ಚೀನಾ ಕಮ್ಯುನಿಸ್ಟ್​ ಪಾರ್ಟಿಯ (ಸಿಸಿಪಿ) ಅಡಿಯಾಳುಗಳಾಗಬೇಕಾಗಬಹುದು. ಸಿಸಿಪಿಯ ನೀತಿಗಳೆಲ್ಲವೂ ಮುಕ್ತವಾದ ವಿಶ್ವಕ್ಕೆ ಬಹುದೊಡ್ಡ ಆತಂಕವಾಗಿದೆ. ಚೀನಾದ ಒಳಗೆ ಮತ್ತು ಹೊರಗೆ ನಿರಂಕುಶವಾದವನ್ನು ಪ್ರತಿಪಾದಿಸಲು ಕ್ಸಿ ಜಿನ್​ಪಿಂಗ್​ಗೆ ಯಾವುದೇ ಅಧಿಕಾರ ಇಲ್ಲ ಎಂದು ಎಚ್ಚರಿಕೆ ನೀಡಿದ್ದರು.

    ಇದಕ್ಕೆ ಪ್ರತಿಯಾಗಿ ಚೀನಾದ ವಕ್ತಾರರು, ಶಾಂತಿಯನ್ನು ಬಯಸುವ ಜಾಗತಿಕ ಶಕ್ತಿಗಳೆಲ್ಲವೂ ಒಂದಾಗಿ ವಿಶ್ವಕ್ಕೆ ಮತ್ತಷ್ಟು ಹಾನಿ ಉಂಟು ಮಾಡುವ ಈ ವ್ಯಕ್ತಿಯ ಪ್ರಯತ್ನಕ್ಕೆ ಅಂಕುಶ ಹಾಕಬೇಕು ಎಂದು ಕರೆ ನೀಡಿದ್ದಾರೆ.

    ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts