More

    ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು; ಗೃಹ ಸಚಿವರ ವಜಾ ಮಾಡಲು ಬಿಜೆಪಿ ಒತ್ತಾಯ

    ಬೆಂಗಳೂರು:
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಠಾಣೆಗಳನ್ನು ಮಾರ್ಪಾಡು ಮಾಡಿಕೊಂಡಿದ್ದು, ರಾಜಕೀಯ ದ್ವೇಷದ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಕುಸಿದಿದ್ದು, ಕೂಡಲೆ ಮುಖ್ಯಮಂತ್ರಿಗಳು ಕ್ರಮ ಕೈಗೊಂಡು, ಗೃಹ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
    ಶಾಸಕ ಹರೀಶ್ ಪೂಂಜ ಅವರ ವಿಷಯದಲ್ಲಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಕೇವಲ ರಾಜಕೀಯ ಕಾರಣಕ್ಕೆ ಅವರನ್ನು ಬಂಧಿಸುವ ಉದ್ದೇಶದಿಂದ 70 ಜನ ಪೊಲೀಸರನ್ನು ಈ ಸರ್ಕಾರ ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು.
    ಹಿಂದೆ ರಾಜ್ಯದಲ್ಲಿ ಒಂದು ಅಪರಾಧ ಪ್ರಕರಣ ನಡೆದರೂ, ಎಲ್ಲೋ ಒಂದು ದರೋಡೆ, ಅತ್ಯಾಚಾರ ನಡೆದರೆ ಕೂಡಲೆ, ಗಸ್ತನ್ನು ತೀವ್ರಗೊಳಿಸಿ, ಸಂಶಯಸ್ತರನ್ನು ತಪಾಸಣೆಗೆ ಒಳಪಡಿಸಿ, ರೌಡಿಗಳ ಪರೇಡ್ ಮಾಡಬೇಕು ಎಂದು ಸುತ್ತೋಲೆ ಕಳಿಸುತ್ತಿದ್ದರು. ಈಗ ಯಾವುದೇ ಸುತ್ತೋಲೆಗಳು ಇಲ್ಲವಾಗಿವೆ ಎಂದರು.
    ಆರೋಪಿಯನ್ನು ದಸ್ತಗಿರಿ ಮಾಡಲು 3 ಕಾರಣಗಳು ಇರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆರೋಪಿ ತಲೆ ಮರೆಸಿಕೊಳ್ಳುವ ವ್ಯಕ್ತಿ ಆಗಿದ್ದರೆ, ಆತ ಸಾಕ್ಷ್ಯ ನಾಶ ಮಾಡುವ ಅವಕಾಶಗಳಿದ್ದರೆ, ಇಲ್ಲವೇ ಫಿರ್ಯಾದಿದಾರ ಅಥವಾ ದೂರುದಾರನ ಮೇಲೆ ಪ್ರಭಾವ ಬೀರಿ ಆತನಿಗೆ ಅಪಾಯ ತಂದೊಡ್ಡುವ ಸ್ಥಿತಿ ಇದ್ದರೆ ಬಂಧಿಸಬೇಕು ಎಂದು ತಿಳಿಸಿದೆ. ಆದರೆ, ಸರ್ಕಾರ ಶಾಸಕ ಹರೀಶ್ ಪೂಂಜ ಪ್ರಕರಣದಲ್ಲಿ ತದ್ವಿರುದ್ದವಾಗಿ ನಡೆದುಕೊಂಡಿದೆ ಎಂದರು.
    ಸುಧಾಕರ್ ಅವರ ಮೇಲೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಾಗಿದ್ದರೂ ಬಂಧಿಸಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಮಾರಣಾಂತಿಕವಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಬೆಳಗಾವಿಯ ಪೃಥ್ವಿ ಎಂಬವರು ದೂರು ದಾಖಲಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ ಎಂದರು.
    ಪೆನ್ ಡ್ರೈವ್ ಹಂಚುವಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ಇದೆ ಎಂದರೂ ಕೂಡ ಈ ಪೊಲೀಸರು ಅವರನ್ನು ಕರೆದು ವಿಚಾರಣೆ ಮಾಡಿಲ್ಲ. ಬಿಜೆಪಿಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಮಾಡುವುದರಲ್ಲಿ ಈ ಸರ್ಕಾರ ಬ್ಯುಸಿಯಾಗಿದೆ ಎಂದರು.

    ರೈತರ ಬದುಕಿನ ಜೊತೆಗೆ ಚೆಲ್ಲಾಟ
    ಸಿದ್ದರಾಮಯ್ಯ ಸರ್ಕಾರ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ರೂ ಪರಿಹಾರ ಹಣವನ್ನು ಕೇವಲ 33 ಲಕ್ಷ ರೈತರಿಗೆ ಬಿಡುಗಡೆ ಮಾಡಿದೆಯೆ ಹೊರತು, ರಾಜ್ಯ ಸರ್ಕಾರದ ಖಜಾನೆಯಿಂದ ನಯಾ ಪೈಸೆ ಹಣವನ್ನು ನೀಡಿಲ್ಲ ಎಂದರು.
    ಮಾತೆತ್ತಿದರೆ, ಮುಖ್ಯಮಂತ್ರಿಗಳು ಸಂವಿಧಾನ ಮತ್ತು ರೈತರ ಬಗ್ಗೆ ಮಾತನಾಡುತ್ತಾರೆ. ಆದರೆ ಸರ್ಕಾರ ರೈತರ ತದ್ವರುದ್ದವಾದ ತೀರ್ಮಾನ ತೆಗೆದುಕೊಂಡು ನಡೆಯುತ್ತಿದೆ ಎಂದರು.
    ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎನ್‌ಡಿಆರ್‌ಎ್ಗೆ ಪೂರಕವಾಗಿ ತನ್ನ ಬೊಕ್ಕಸದಿಂದ ಹಣ ಬಿಡುಗಡೆ ಮಾಡಿತ್ತು. ಬೆಳೆ ನಷ್ಟಕ್ಕೆ ನಿಗದಿತ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತ ಕೊಟ್ಟಿದ್ದೆವು. ಪರಿಹಾರ ನೀಡಲು ನಿಮಗೇನು ಧಾಡಿ? ನಿಮಗೇನು ಗರ ಬಡಿದಿದೆ? ನಿಮ್ಮ ಕೈಯನ್ನು ಕಟ್ಟಿ ಹಾಕಿದ್ದು ಯಾರು? ಎಂದು ಪ್ರಶ್ನಿಸಿದರು.
    ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts