More

    ಪೊಲೀಸರು ತೂಕ ಇಳಿಸಿಕೊಂಡು ಫಿಟ್ ಆದ್ರೆ ಮಾತ್ರ ಇವೆಲ್ಲ ಸಿಗುತ್ತವೆ, ಇಲ್ದಿದ್ರೆ ಇಲ್ಲ!

    ಕಲಬುರಗಿ: ಪೊಲೀಸರಲ್ಲಿ ಬೊಜ್ಜು, ಅತಿಯಾದ ತೂಕ ಸಹ ಅನಾರೋಗ್ಯ. ಬೊಜ್ಜು ಹೆಚ್ಚಾದವರನ್ನು ಗುರುತಿಸಿ ಆರೋಗ್ಯ ಸುಧಾರಿಸಿಕೊಳ್ಳಲು ಸೂಚನೆ ನೀಡಲಾಗಿದೆ ರಾಜ್ಯ ಎಡಿಜಿಪಿ ಅಲೋಕ್​ ಕುಮಾರ್ ಹೇಳಿದರು.

    ಫಿಟ್‌ನೆಸ್ ವಿಚಾರದಲ್ಲಿ ಎ, ಬಿ ಮತ್ತು ಸಿ ಹೀಗೆ ಮೂರು ವಿಭಾಗ ಮಾಡಲಾಗಿದೆ. ಫಿಟ್ ಆ್ಯಂಡ್ ಫೈನ್ ಇದ್ದವರು ಎ ವಿಭಾಗ, ಮದ್ಯಪಾನ, ಧೂಮಪಾನ, ಗುಟ್ಖಾ ಇತರ ಚಟಗಳಿಂದ ಆರೋಗ್ಯ ಕ್ಷೀಣಿಸಿದವರನ್ನು ಬಿ ಹಾಗೂ ಕ್ಯಾನ್ಸರ್, ಹೃದ್ರೋಗ, ಕೀಲು-ಮೂಳೆ ಮುರಿತದಂಥ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ಈಡಾದವರು ಸಿ ಕೆಟಗರಿಯಲ್ಲಿ ಬರುತ್ತಾರೆ. ರಾಜ್ಯದ ಎಲ್ಲ ಕೆಎಸ್‌ಆರ್‌ಪಿ ಬಟಾಲಿಯನ್‌ಗಳಲ್ಲಿ ಸಿ ವಿಭಾಗದಲ್ಲಿ 186, ಬಿ ಗುಂಪಿನಲ್ಲಿ 1020 ಹಾಗೂ ಎ ಗುಂಪಿನಲ್ಲಿ 7000ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 1015 ಸಿಬ್ಬಂದಿ ನಿಗದಿಗಿಂತ 10 ಕೆಜಿ ಹೆಚ್ಚಿನ ತೂಕ ಹೊಂದಿದ್ದಾರೆ. ಅವರಲ್ಲಿ 113ಕ್ಕೂ ಹೆಚ್ಚು ಪೇದೆಗಳು 5 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಿ ಕೆಟಗರಿಯಲ್ಲಿದ್ದ 15 ಮಂದಿ ಕೂಡ ಬಿ ಆರ್ಹತೆಗೆ ಬಂದಿದ್ದಾರೆ. ಬಿ ಗುಂಪಿನಲ್ಲಿದ್ದ 215 ಮಂದಿ ಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಪೇದೆಗಳ ಫಿಟ್‌ನೆಸ್ ಅನುಗುಣ ಕೆಲಸ ಮುಂದುವರಿಯಲಿದೆ ಎಂದು ಹೇಳಿದರು.

    ಕೆಎಸ್‌ಆರ್‌ಪಿ ಸಿಬ್ಬಂದಿ ಸದೃಢ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಡ್ತಿ, ವರ್ಗಾವಣೆ, ನಿಯೋಜನೆ, ಮೆಡಲ್‌ಗಳಿಗೆ ಹೆಸರು ಶಿಫಾರಸು ಹೀಗೆ ಎಲ್ಲವುಗಳಿಗೆ ಕಾರ್ಯವೈಖರಿ ಮತ್ತು ದೈಹಿಕ ಶಕ್ತಿ-ಸಾಮರ್ಥ್ಯ ಜತೆಗೆ ಫಿಟ್ ಆಗಿರುವುದು ಕಡ್ಡಾಯ. ಸೇವಾ ಹಿರಿತನ ಹಾಗೂ ನಿಯಮದಂತೆ ಬಡ್ತಿ, ವರ್ಗಾವಣೆ ನೀಡಿದರೂ ಫಿಟ್ ಆಗಿರಲೇಬೇಕು. ಅಸಮರ್ಥ, ಅನಾರೋಗ್ಯಕ್ಕೆ ಒಳಗಾದವರು ತಮ್ಮ ಕಾರ್ಯಕ್ಷಮತೆ ತೋರಿಸಿದ ಬಳಿಕವೇ ಮುಂಬಡ್ತಿ ಸಿಗಲಿದೆ. ಅಗತ್ಯವೆನಿಸಿದರೆ ವರ್ಗಾವಣೆ ಮಾಡಲಾಗುವುದು. ಅಲ್ಲಿವರೆಗೆ ಇರುವ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

    ‘ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ’ ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ

    ದೇವಸ್ಥಾನದ ಜಾಗವನ್ನು ಕಬಳಿಸಲು ಇವರು ದೇವರನ್ನೇ ‘ಸಾಯಿಸಿಬಿಟ್ಟರು’!

    Video | ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟಳು; ಅದಕ್ಕೆ ಗಂಡನ ಸಂಬಂಧಿಕರೆಲ್ಲ ಹೀಗೆ ಮಾಡೋದಾ? ನೋಡಿ.. ಇಲ್ಲಿದೆ ಆ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts