More

    ಐಪಿಎಲ್‌ 2024 ಟೂರ್ನಿಯಲ್ಲೂ ರಿಷಭ್ ಪಂತ್‌ ಆಡುವುದು ಅನುಮಾನ? ಕಾರಣ ಹೀಗಿದೆ!

    ಮುಂಬೈ: 2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಒಳಗಾದ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿರುವ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್​ ಇದೀಗ ಐಪಿಎಲ್​ಗೆ 2024 ಮರಳಲು ಸಜ್ಜಾಗಿದ್ದಾರೆ. ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅವರು ಐಪಿಎಲ್​ ಆಡಬೇಕೆ ಬೇಡವೇ ಎನ್ನುವುದನ್ನು ಬಿಸಿಸಿಐ ನಿರ್ಧಾರ ಮಾಡಲಿದೆ.

    ಇದನ್ನೂ ಓದಿ: ಪತಿ ‘ಮೋದಿ’ ಜಪಿಸಿದರೆ ರಾತ್ರಿ ಊಟ ಬಡಿಸಬೇಡಿ: ಅರವಿಂದ್​ ಕ್ರೇಜಿವಾಲ್

    ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್​, ಐಪಿಎಲ್​ಗೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಹೊಡಿಬಡಿ ಆಟಗಾರ ರಿಷಭ್ ಪಂತ್ ಐಪಿಎಲ್​ನಲ್ಲಿ ಆಡಬೇಕಾದರೆ ಫಿಟ್​ನೆಸ್ ಪರೀಕ್ಷೆ ಪಾಸಾಗಲೇಬೇಕು. ಅಂದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪಂತ್ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಿದರೆ ಮಾತ್ರ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಅವಕಾಶ ದೊರೆಯಲಿದೆ.

    ಬಿಸಿಸಿಐ ಮಂಡಳಿಯಿಂದ ಫಿಟ್‌ನೆಸ್ ಕ್ಲಿಯರೆನ್ಸ್ ಅನ್ನು ಇನ್ನೂ ಸ್ವೀಕರಿಸಿಲ್ಲ. ಐಪಿಎಲ್‌ನಲ್ಲಿ ಆಡಲು ಪಂತ್ ಇನ್ನೂ ಸಿದ್ಧವಾಗಿಲ್ಲ, ಈ ಬಾರಿ ಐಪಿಎಲ್​ ಆವೃತ್ತಿಯಲ್ಲಿ ಆಡುವುದು ಅನುಮಾನ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದ್ದಾರೆ.

    ಮಾರ್ಚ್ 5 ರಂದು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರಿಷಭ್ ಪಂತ್ ಅವರ ಫಿಟ್​ನೆಸ್ ಟೆಸ್ಟ್ ಪರೀಕ್ಷೆ ನಡೆಸಿದ್ದರು, ಈ ವೇಳೆ ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಸಾಮರ್ಥ್ಯವನ್ನು ಟೆಸ್ಟ್ ಮಾಡಲಾಗುತ್ತದೆ. ಈಗಾಗಲೇ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿರುವ ಪಂತ್ ವಿಕೆಟ್ ಕೀಪಿಂಗ್ ಕೂಡ ಮಾಡಲು ಸಮರ್ಥರಾ ಎಂಬುದು ಮಂಗಳವಾರ ನಿರ್ಧಾರವಾಗಲಿದೆ.

    ಐಪಿಎಲ್‌ 2024 ಟೂರ್ನಿಯಲ್ಲೂ ರಿಷಭ್ ಪಂತ್‌ ಆಡುವುದು ಅನುಮಾನ? ಕಾರಣ ಹೀಗಿದೆ!

    ಆದಾಗ್ಯೂ, ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಸ್​ ಆಗಿ ಐಪಿಎಲ್ 2024ರ ಆವೃತ್ತಿಯಲ್ಲಿ ಆಡಿದರು ಪಂತ್ ಕೇವಲ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ರಿಷಭ್ ಪಂತ್ ಅವರ ಫಿಟ್​ನೆಸ್ ಟೆಸ್ಟ್ ರಿಸಲ್ಟ್​ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಫಿಟ್​ನೆಸ್​ ಪಾಸಾಗದಿದ್ದರೆ ಐಪಿಎಲ್2024ರ ಆವೃತ್ತಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

    ಇತ್ತ ಡೆಲ್ಲಿ ಫ್ರಾಂಚೈಸಿಯು ಈ ಬಾರಿ ರಿಷಭ್ ಪಂತ್ ಅವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯಲಿದೆ ಎಂದು ಘೋಷಿಸಿದೆ. ಇದಾಗ್ಯೂ ಅವರು ವಿಕೆಟ್ ಕೀಪಿಂಗ್ ಮಾಡಲಿದ್ದಾರಾ ಎಂಬುದನ್ನು ಖಚಿತಪಡಿಸಿಲ್ಲ. ಹೀಗಾಗಿ ಮಾರ್ಚ್ 5 ರಂದು ನಡೆದ ಫಿಟ್​ನೆಸ್ ಅಗ್ನಿಪರೀಕ್ಷೆಯಲ್ಲಿ ಪಂತ್ ತೇರ್ಗಡೆಯಾಗಿದ್ದರೆ ಮಾತ್ರ ಕಣಕ್ಕಿಳಿಯಲು ಅವಕಾಶ ಇರಲಿದೆ. ಇಲ್ಲದಿದ್ದರೆ ಕೇವಲ ಬ್ಯಾಟ್ಸ್​ಮನ್ ಆಗಿ ಆಡುವ ಸಾಧ್ಯತೆಯಿದೆ.

    ಮಾರ್ಚ್ 2 ರಂದು ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಮಾತನಾಡಿದ ಸೌರವ್ ಗಂಗೂಲಿ, ದೆಹಲಿ ತಂಡದ ನಾಯಕತ್ವದ ಕುರಿತು ಚರ್ಚಿಸುವ ಮೊದಲು ಪಂತ್ ಫಿಟ್​ನೆಸ್​ ಕ್ಲಿಯರೆನ್ಸ್ ಅಗತ್ಯವಿದೆ ಇದು ಬಂದ ನಂತರ ತೀರ್ಮಾನಿಸಲಾಗುವುದು ಎಂದಿದ್ದಾರೆ.

    ಬಹು ನಿರೀಕ್ಷಿತ ಈ ಚುಟುಕು ಸಮರದ ಮೊದಲ 17 ದಿನಗಳ ಅಂದರೆ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಮುಂದಿನ ತಿಂಗಳು ಅಂದರೆ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಸಿಎಸ್​ಕೆಯ ತವರು ನೆಲ ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.

    ಪ್ರದೀಪ್​ ಈಶ್ವರ್​ಗೆ ಅವಳಿ ಜವಳಿ ಮಕ್ಕಳ ಬಯಕೆ! ಭೋಗನಂದೀಶ್ವರನ ಮೊರೆ ಹೋಗಿದ್ದೇಕೆ ಶಾಸಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts