More

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಶವ ಪತ್ತೆ ಪ್ರಕರಣ; ಹತ್ಯೆಗೀಡಾದ ಮಹಿಳೆ ಯಾರೆಂದು ಪತ್ತೆ ಮಾಡಿದ ಪೊಲೀಸರು

    ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​ನೊಳಗೆ ಮಹಿಳೆಯ ಶವ ಪತ್ತೆಯಾಗುತ್ತಿದ್ದಂತೆ, ರೈಲ್ವೇ ಪೊಲೀಸರು ವ್ಯಾಪಕ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದರು. ಇದೀಗ ಡ್ರಮ್​ನಲ್ಲಿದ್ದ ಶವ ಯಾರದ್ದೆಂದು ಪತ್ತೆ ಹಚ್ಚುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ತಮನ್ನಾ ಎಂಬಾಕೆ ಕೊಲೆಯಾಗಿರುವ ಮಹಿಳೆ ಎಂಬುದು ಇದೀಗ ಬಹಿರಂಗಗೊಂಡಿದೆ.

    ಇದನ್ನೂ ಓದಿ: ಮೊದಲ ಬಾರಿಗೆ ಪತ್ನಿಯ ಮುಖ ಬಹಿರಂಗ ಪಡಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್; ಫೋಟೋ ವೈರಲ್

    ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಮೇನ್ ಗೇಟ್ ಬಳಿಯೇ ಶವ ಇರಿಸಿ ಹೋಗಲಾಗಿತ್ತು. ಸತ್ತಿರುವ ಮಹಿಳೆಯ ವಯಸ್ಸು ಸುಮಾರು 30-35 ವರ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಶವ ಇದ್ದ ಡ್ರಮ್​ ಮೂವರು ಜೊತೆಯಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋದಲ್ಲಿ ತಂದಿಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿತ್ತು. ದುರ್ವಾಸನೆ ಬರುತ್ತಿರುವ ಬಗ್ಗೆ ರಾತ್ರಿ ಏಳೂವರೆ ಸುಮಾರಿಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಡ್ರಮ್​ನಲ್ಲಿ ಶವ ಪತ್ತೆಯಾಗಿದೆ ಎಂದು ರೈಲ್ವೆ ಎಸ್​ಪಿ ಸೌಮ್ಯಲತಾ ತಿಳಿಸಿದ್ದರು.

    ಪ್ರಾಥಮಿಕ ತನಿಖೆಯ ವೇಳೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಪತ್ತೆಕಾರ್ಯ ಆರಂಭಿಸಿದ ಪೊಲೀಸರು ಇದೀಗ, ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಎಂಟು ಜನರು ತಮನ್ನಾ ಕೊಲೆಯಲ್ಲಿ ಭಾಗಿಯಾಗಿದ್ದು, ಕಮಾಲ್, ತನ್ವೀರ್, ಶಾಕೀಬ್ ಸದ್ಯ ಬಂಧನವಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

    ಇದನ್ನೂ ಓದಿ: ಕಪ್ಪು ಆಲೂಗಡ್ಡೆ ಬಗ್ಗೆ ಗೊತ್ತಿದೆಯಾ? ಇದರ ಬೆಲೆ ಕೆ.ಜಿ.ಗೆ 500 ರೂ.! ಇಲ್ಲಿದೆ ಸಂಪೂರ್ಣ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts