More

    ಸಾವಿನ ಅಂಚಿನಲ್ಲಿದ್ದ ಯುವಕನ ರಕ್ಷಣೆ: ಕಾನ್​ಸ್ಟೆಬಲ್ ಸಮಯಪ್ರಜ್ಞೆಗೆ ಸಲ್ಯೂಟ್​ ಹೊಡೆಯಲೇಬೇಕು

    ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಇನ್ನೇನು ರೈಲಿನ ಗಾಲಿಗೆ ಬೀಳುತ್ತಿದ್ದ ಯುವಕನೊಬ್ಬನನ್ನು ರೈಲ್ವೆ ಪೊಲೀಸ್ ಕಾನ್​ಸ್ಟೆಬಲ್​ ಸಂತೋಷ್ ರಾಠೋಡ್ ಅವರು ಸರಿಯಾದ ಸಮಯಕ್ಕೆ ಗಮನಿಸಿ, ಜೀವ ಉಳಿಸುವ ಮೂಲಕ ನಿಜ ಜೀವನದ ಹೀರೋ ಎನಿಸಿಕೊಂಡಿದ್ದಾರೆ.

    ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ ವೇಳೆ, ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದಾರೆ. ಹಣ ಏಕೆ ಪಾವತಿಸಬೇಕೆಂದು ಪ್ರಶ್ನಿಸಿ, ಅದೇ ವೇಳೆಗೆ ಬಂದು ನಿಂತಿದ್ದ ಬೆಳಗಾವಿ-ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ.

    ಇದನ್ನೂ ಓದಿ: ನವ್ಯಾ ನಾಯರ್​ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

    ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸುತ್ತಿದ್ದು, ಅದರಿಂದ ಇಳಿಯಲು ಹೋಗಿ ಸ್ವಲ್ಪದರಲ್ಲೇ ಕಾಲು ಜಾರಿ ರೈಲಿನ ಅಡಿಗೆ ಸಿಲುಕುತ್ತಿದ್ದರು. ಇದೇ ವೇಳೆಗೆ ಅಲ್ಲೇ ಇದ್ದ ಪೊಲೀಸ್ ಪೇದೆ ಸಂತೋಷ್ ರಾಠೋಡ್ ಪ್ರಯಾಣಿಕ ಕೈ ಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೆ ಪೊಲೀಸ್ ಗುರುರಾಜ್ ಅವರು ಕೂಡ ಕೊನೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ರೈಲ್ವೆ ಇಲಾಖೆ ತನ್ನ ವೆಬ್​ಸೈಟ್​ನಲ್ಲಿ ಅಪ್ಲೋಡ್ ಮಾಡಿದೆ.

    ಗವರ್ನಮೆಂಟ್ ರೈಲ್ವೆ ಪೊಲೀಸ್​ ಕರ್ನಾಟಕ ಟ್ವಿಟರ್​ ಖಾತೆಯಲ್ಲಿ ಬರೆದಿರುವ ಪ್ರಕಾರ, ಈ ಘಟನೆ ಮಾರ್ಚ್​ 23ರಂದು ರಾತ್ರಿ 7.32ಕ್ಕೆ ನಡೆದಿದೆ. ಈ ಸಮಯದಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಸಂ-07335 ಬೆಳಗಾವಿ-ಸಿಕಂದ್ರಬಾದ್ ಎಕ್ಸ್‌ಪ್ರೆಸ್‌ ರೈಲುಗಾಡಿಯಿಂದ‌ ಬೀಳುತ್ತಿದ್ದ ವಿಜಯವಾಡ ಮೂಲದ 30 ವರ್ಷದ ನರಸಿಂಹರನ್ನು ರೈಲ್ವೆ ಪೊಲೀಸ್ ಸಹಾಯಕ ಸಬ್​​​ ಇನ್ಸ್​ಪೆಕ್ಟರ್​ ಗುರುರಾಜ್ ಮತ್ತು ಹೆಡ್​ ಕಾನ್​​ಸ್ಟೆಬಲ್​ ಸಂತೋಷ್ ರವರು ರಕ್ಷಿಸಿರುತ್ತಾರೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: 31ರೊಳಗೆ ಈ ಐದು ಕೆಲಸ ಮುಗಿಸಿ; ಬಾಕಿ ಇಟ್ಟರೆ ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ

    ಪೊಲೀಸ್​ ಕಾನ್​ಸ್ಟೆಬಲ್​ ಸಂತೋಷ್ ರಾಠೋಡ್ ಅವರ ಸಮಯಪ್ರಜ್ಞೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ವಿಜಯಾನಂದ ಅತ್ಯುತ್ತಮ ಬಯೋಪಿಕ್; ಐದು ಪ್ರಶಸ್ತಿಗಳ ಸಂಭ್ರಮ

    ಅಮೆರಿಕದಲ್ಲಿ ಸುಂಟರಗಾಳಿಗೆ 25 ಮಂದಿ ಬಲಿ: ತುರ್ತು ನೆರವು ಘೋಷಿಸಿದ ಅಧ್ಯಕ್ಷ ಜೋ ಬೈಡೆನ್

    ಸಹವಾಸ ದೋಷ ಸೆರೆಮನೆ ವಾಸ: ಆ ಕ್ಷಣ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts