More

    ವಿಜಯಾನಂದ ಅತ್ಯುತ್ತಮ ಬಯೋಪಿಕ್; ಐದು ಪ್ರಶಸ್ತಿಗಳ ಸಂಭ್ರಮ

    ಬೆಂಗಳೂರು: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಸಿನಿಮಾ ‘ವಿಜಯಾನಂದ’, ಅತ್ಯುತ್ತಮ ಬಯೋಪಿಕ್ ಪ್ರಶಸ್ತಿ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ‘ಚಿತ್ರ ಸಂತೆ’ ನಿಯತಕಾಲಿಕೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ವಿಜಯಾನಂದ’ ಚಿತ್ರದ ನಿರ್ವಪಕರೂ ಆಗಿರುವ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ವಿಆರ್​ಎಲ್ ಫಿಲ್ಮ್ ಪೊ›ಡಕ್ಷನ್ಸ್ ಪರವಾಗಿ ಅತ್ಯುತ್ತಮ ಬಯೋಪಿಕ್ ಪ್ರಶಸ್ತಿ ಸ್ವೀಕರಿಸಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಆನಂದ ಸಂಕೇಶ್ವರ, ‘ಕಲಾವಿದರ ಶ್ರಮವನ್ನು ಗುರುತಿಸಿ ಪ್ರಶಸ್ತಿ ನೀಡುವುದು ಉತ್ತಮವಾದ ಕೆಲಸ. ಪ್ರಶಸ್ತಿಗಳು ಕಲಾವಿದರು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ನೆರವಾಗುತ್ತದೆ. ಈ ಕಾರಣಕ್ಕಾಗಿ ‘ಚಿತ್ರಸಂತೆ’ಯ ಪ್ರಧಾನ ಸಂಪಾದಕ ಗಿರೀಶ್ ಗೌಡ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಹೊಸ ಕಲಾವಿದರಿಗೆ ಪೋ›ತ್ಸಾಹ ನೀಡುವಂತಹ ಕೆಲಸವಾಗಲಿ’ ಎಂದು ಹೇಳಿದರು. ‘ನಮ್ಮ ತಂದೆ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಬಯೋಪಿಕ್ ಸಿನಿಮಾ ನಿರ್ವಿುಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇವೆ. ನಮ್ಮ ತಂದೆಯ ಹೆಸರು ವಿಜಯ, ನನ್ನ ಹೆಸರು ಆನಂದ ಎರಡು ಸೇರಿ ‘ವಿಜಯಾನಂದ’ ಎಂಬ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ. ತಂದೆಯವರು 1976ರಲ್ಲಿ ಕೇವಲ ಒಂದು ಟ್ರಕ್​ನಿಂದ ಉದ್ಯಮ ಆರಂಭಿಸಿದ್ದರು. 15 ತಿಂಗಳ ಹಿಂದೆ ಸಿನಿಮಾ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಐದು ಸಾವಿರಕ್ಕೂ ಅಧಿಕ ವಾಹನಗಳು ಇದ್ದವು. ಇಂದು ಆರು ಸಾವಿರಕ್ಕೂ ವಾಹನಗಳಿದ್ದು, ಭಾರತದ ನಂಬರ್ ಒನ್ ಲಾಜಿಸ್ಟಿಕ್ ಆಗಿದ್ದೇವೆ. ನಮ್ಮ ಸಂಸ್ಥೆಯಲ್ಲಿ 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ರಿಕೆ ಮತ್ತು ನ್ಯೂಸ್ ಚಾನಲ್ ಮತ್ತು ಟ್ರಾವೆಲ್ ವಿಭಾಗದ ಕೆಲವೊಂದು ಭಾಗಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಹಿಡಿದ ಕೆಲಸ ಬಿಡಬಾರದು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಸಾರಿದ್ದೇವೆ.ಸಿನಿಮಾದಲ್ಲಿ ಶೇ.99ರಷ್ಟು ನಿಜ ಜೀವನದಲ್ಲಿ ಹೋರಾಟ ಮಾಡುವುದರ ಬಗ್ಗೆ ತೋರಿಸಿದ್ದೇವೆ’ ಎಂದು ಹೇಳಿದರು.

    ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ವಿಜಯಾನಂದ’ ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ

    ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್, ಶಶಾಂಕ್, ನಟರಾದ ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ರಘು ಮುಖರ್ಜಿ, ವಿಕ್ರಮ್ ರವಿಚಂದ್ರನ್, ನಟಿಯರಾದ ಶೃತಿ, ರಾಗಿಣಿ, ಹರ್ಷಿಕಾ ಪೂಣಚ್ಚ ಸೇರಿ ಮತ್ತಿತರರು ಇದ್ದರು.

    ನಮ್ಮ ಸಂಸ್ಥೆ ವಿಆರ್​ಎಲ್ ಪ್ರೊಡಕ್ಷನ್ಸ್ ವತಿಯಿಂದ ವಿಜಯಾನಂದ ಬಯೋಪಿಕ್ ಸಿನಿಮಾ ನಿರ್ವಿುಸಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಮುಂದೆಯೂ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆ.

    | ಡಾ.ಆನಂದ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ

    ರವಿಚಂದ್ರನ್​ಗೆ ವಿಶೇಷ ಪ್ರಶಸ್ತಿ

    ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಅತ್ಯುತ್ತಮ ನಿರ್ದೇಶಕಿ, ಡಾ.ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದ ನಾಯಕ ನಟ ನಿಹಾಲ್ ಅತ್ಯುತ್ತಮ ನಟ, ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದ ರವಿಚಂದ್ರನ್ ವಿಶೇಷ ಪ್ರಶಸ್ತಿ, ವಸ್ತ್ರವಿನ್ಯಾಸಕಿ ಲಕ್ಷ್ಮೀಕೃಷ್ಣ ಅತ್ಯುತ್ತಮ ವಸ್ತ್ರವಿನ್ಯಾಸಕಿ ಪ್ರಶಸ್ತಿಗೆ ಪಾತ್ರರಾದರು. ಈ ಮೂಲಕ ವಿಆರ್​ಎಲ್ ಫಿಲ್ಮ್ ಪೊ›ಡಕ್ಷನ್ಸ್​ನ ಚೊಚ್ಚಲ ಸಿನಿಮಾ ‘ವಿಜಯಾನಂದ’ ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾದಂತಾಯಿತು.

    ವಿಜಯಾನಂದ ಅತ್ಯುತ್ತಮ ಬಯೋಪಿಕ್; ಐದು ಪ್ರಶಸ್ತಿಗಳ ಸಂಭ್ರಮ

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts