More

    ಅಮೆರಿಕದಲ್ಲಿ ಸುಂಟರಗಾಳಿಗೆ 25 ಮಂದಿ ಬಲಿ: ತುರ್ತು ನೆರವು ಘೋಷಿಸಿದ ಅಧ್ಯಕ್ಷ ಜೋ ಬೈಡೆನ್

    ಮಿಸಿಸಿಪ್ಪಿ: ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ ಶುಕ್ರವಾರ ಬೀಸಿದ ಪ್ರಬಲ ಸುಂಟರಗಾಳಿ ಹಾಗೂ ಚಂಡಮಾರುತಕ್ಕೆ ಕನಿಷ್ಠ 25 ಜನರು ಬಲಿಯಾಗಿ ಹಲವರು ಗಾಯಗೊಂಡಿದ್ದಾರೆ.

    ಸುಂಟರಗಾಳಿ ಸಂತ್ರಸ್ತರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತುರ್ತು ನೆರವು ಘೋಷಣೆ ಮಾಡಿದ್ದಾರೆ.​ ಮಿಸಿಸಿಪ್ಪಿಯ ಸುಂಟರಗಾಳಿಯ ಚಿತ್ರಣಗಳನ್ನು ನೋಡಿದರೆ ಹೃದಯವಿದ್ರಾವಕವಾಗಿದೆ. ಅಲ್ಲಿನ ಜನರಿಗಾಗಿ ನಾವು ಎಲ್ಲ ರೀತಿಯ ನೆರವು ನೀಡಲಿದ್ದೇವೆ. ನಾವು ಎಲ್ಲಿಯವರೆಗೆ ಬೇಕಾದರೂ ಮಿಸಿಸಿಪ್ಪಿಯಲ್ಲಿಯೇ ಇರುತ್ತೇವೆ ಎಂದು ಜೋ ಬೈಡೆನ್​ ತಿಳಿಸಿದ್ದಾರೆ.

    ಇದನ್ನೂ ಓದಿ: ನವ್ಯಾ ನಾಯರ್​ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

    ಚಂಡಮಾರುತದಿಂದ ಸುಮಾರು 160 ಕಿಲೋ ಮೀಟರ್ ಪ್ರದೇಶದಲ್ಲಿ ಭಾರಿ ಹಾನಿ ಸಂಭವಿಸಿದೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಾಲ್ಕು ಜನರು ನಾಪತ್ತೆಯಾಗಿದ್ದಾರೆ. ಪಶ್ಚಿಮ ಮಿಸಿಸಿಪ್ಪಿಯ ಸಿಲ್ವರ್ ಸಿಟಿಯಲ್ಲಿ ಚಂಡಮಾರುತ ರೌದ್ರಾವತಾರ ತಾಳಿತು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

    ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಬಿರುಗಾಳಿಯ ಪ್ರಕೋಪ ತೀವ್ರವಾಗಿದ್ದ ರೋಲಿಂಗ್ ಫೋರ್ಕ್ ನಗರದಲ್ಲಿ ಕೂಡ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಕನಿಷ್ಠ 24 ಸುಂಟರಗಾಳಿ ಬೀಸಬಹುದೆಂದು ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ಎಚ್ಚರಿಕೆ ನೀಡಿದೆ.

    ಸುಂಟರಗಾಳಿ ಹಾಗೂ ಚಂಡಮಾರುತದ ಪ್ರಕೋಪದಿಂದ ದೊಡ್ಡ ದೊಡ್ಡ ಕಟ್ಟಡಗಳು ಅವಶೇಷಗಳಡಿ ಹೂತುಹೋಗಿದ್ದು ಕಾರುಗಳು ಉರುಳಿದ ದೃಶ್ಯಗಳನ್ನು ಸುದ್ದಿವಾಹಿನಿಗಳು ಬಿತ್ತರಿಸಿವೆ. ಜನರು ಕಗ್ಗತ್ತಲಲ್ಲಿ ಅವಶೇಷಗಳ ಮೇಲೆ ಹತ್ತಿ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದ್ದರು.

    ಇದನ್ನೂ ಓದಿ: ಕ್ಷಮೆ ಕೇಳಲು ಸಾವರ್ಕರ್ ಅಲ್ಲ, ಹೋರಾಟ ನಿಲ್ಲಿಸುವುದಿಲ್ಲ; ಅನರ್ಹತೆ ಬಳಿಕ ರಾಹುಲ್ ಗಾಂಧಿ ಗುಡುಗು

    ರೋಲಿಂಗ್ ಫೋರ್ಕ್ ಮೇಯರ್ ಎಲ್ಡ್ರಿಡ್ಜ್ ವಾಕರ್ ಅವರು ಸಿಎನ್​ಎನ್​ ಮಾಧ್ಯಮದ ಜತೆ ಮಾತನಾಡುವಾಗ ನನ್ನ ನಗರವು ಹೋಯಿತು ಎಂದು ದುಃಖಿತರಾದರು. ನಾನು ಎಡದಿಂದ ಬಲಕ್ಕೆ ಎತ್ತ ನೋಡಿದರೂ ನಾನು ನೋಡಿದ್ದು ವಿನಾಶ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. (ಏಜೆನ್ಸೀಸ್​)

    ವಿಜಯಾನಂದ ಅತ್ಯುತ್ತಮ ಬಯೋಪಿಕ್; ಐದು ಪ್ರಶಸ್ತಿಗಳ ಸಂಭ್ರಮ

    31ರೊಳಗೆ ಈ ಐದು ಕೆಲಸ ಮುಗಿಸಿ; ಬಾಕಿ ಇಟ್ಟರೆ ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts