More

    ಪೊಲೀಸ್ ಪೇದೆಗೆ ಸಂಕಷ್ಟ ತಂದ ಮೊಬೈಲ್ ನಂಬರ್!

    ಕಲಬುರಗಿ: ಕರೊನಾ ಇಲ್ಲದ ಪೇದೆಯೊಬ್ಬರನ್ನು ಸೋಂಕಿತರ ಮಧ್ಯೆ ನಾಲ್ಕು ದಿನ ಇರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ನರಕಯಾತನೆ ಅನುಭವಿಸಿರುವ ಪೇದೆ, ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸಂಬಂಧಿತರ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

    ಬೇರೊಬ್ಬನ ಹೆಸರಿನ ಮುಂದೆ ಈ ಪೇದೆ ಮೊಬೈಲ್ ನಂಬರ್ ಇದ್ದದ್ದೇ ಈ ಎಡವಟ್ಟಿಗೆ ಕಾರಣವಾಗಿದೆ. ಬೇರೆ ಹೆಸರಿನ ಮುಂದಿದ್ದ ಮೊಬೈಲ್ಗೆ ರಿಂಗ್ ಮಾಡಿದ ವೈದ್ಯರು, ನಿಮಗೆ ಕೋವಿಡ್ ಶಂಕೆ ಇದೆ. ನೀವು ಚಿಕಿತ್ಸೆ ಪಡೆಯಲೇಬೇಕು ಎಂದು ಹೇಳಿ ಪೇದೆಯನ್ನು 25ರಂದು ಕೋವಿಡ್ ಆಸ್ಪತ್ರೆಗೆ ಕರೆತಂದರು. ತಮಗೆ ಕರೊನಾ ಇಲ್ಲ ಎಂದು ಪೇದೆ ಅಂಗಲಾಚಿದರೂ ಬಿಡದೆ ಸೋಂಕಿತರ ಜತೆ ಇರಿಸಲಾಗಿದೆ. ತನಗಾದ ಅನ್ಯಾಯದ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದ್ದು, ಹಿರಿಯ ಅಧಿಕಾರಿಗಳು ಮತ್ತು ಠಾಣೆಯ ಸಿಬ್ಬಂದಿ ಇವರ ಬೆನ್ನಿಗೆ ನಿಂತಿದ್ದಾರೆ.

    ಇದನ್ನೂ ಓದಿ: ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

    26ರಂದು ಪೇದೆಯ ರಕ್ತ ಮತ್ತು ಗಂಟಲ ದ್ರವ ಪರೀಕ್ಷೆಗೆ ಕಳಿಸಿಕೊಟ್ಟಿದ್ದು, 29ರಂದು ನೆಗೆಟಿವ್ ವರದಿ ಬಂದ ಬಳಿಕ ಮನೆಗೆ ಕಳಿಸಿದ್ದಾರೆ. ಅನಗತ್ಯವಾಗಿ ನಾಲ್ಕು ದಿನ ಸೋಂಕಿತರ ಮಧ್ಯೆ ಇರಬೇಕಾಯಿತಲ್ಲ ಎಂಬ ಕೊರಗು ಅವರದ್ದಾಗಿದೆ. ಶಂಕಿತ ವ್ಯಕ್ತಿಗಳ ರಕ್ತ ಮತ್ತು ಗಂಟಲ ದ್ರವ ಪರೀಕ್ಷೆ ಮಾಡಲೇಬೇಕಾಗುತ್ತದೆ. ವರದಿ ನೆಗೆಟಿವ್ ಬಂದರೆ ಅವರನ್ನು ಕ್ಷಣವೂ ಕೋವಿಡ್ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಗುಲ್ಬರ್ಗ ವಿವಿ ಠಾಣೆ ಪೇದೆ, ನನಗೆ ಸೋಂಕು ಇರದಿದ್ದರೂ ನಾಲ್ಕು ದಿನ ಕೋವಿಡ್ ಆಸ್ಪತ್ರೆಯಲ್ಲಿ ಇಡುವ ಮೂಲಕ ಮಾನಸಿಕವಾಗಿ ಹಿಂಸೆ ನೀಡಲಾಗಿದೆ. ಹೀಗಾಗಿ ಮೇಲಧಿಕಾರಿಗಳ ಅನುಮತಿ ಪಡೆದು ಸಂಬಂಧಿತರ ವಿರುದ್ಧ ದೂರು ಸಲ್ಲಿಸುತ್ತೇನೆ. ಈ ಘಟನೆಯಿಂದಾಗಿ ಕುಟುಂಬ ಜರ್ಜರಿತವಾಗಿದೆ ಎಂದಿದ್ದಾರೆ.

    VIDEO| ಕರೊನಾ ಪಾಸಿಟಿವ್​ ಬೆನ್ನಲ್ಲೇ ಜನರನ್ನು ತರಾಟೆಗೆ ತೆಗೆದುಕೊಂಡ ನಟಿ ನವ್ಯಾ ಸ್ವಾಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts