More

    ಮುಸ್ಲಿಂ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಗೂಸಾ: ಇಬ್ಬರು ಪುಂಡರು ಪೊಲೀಸರ ವಶಕ್ಕೆ

    ಬೆಂಗಳೂರು: ಮುಸ್ಲಿಂ ಮಹಿಳೆಗೆ ಬೈಕ್​ನಲ್ಲಿ ಡ್ರಾಪ್​ ನೀಡುತ್ತಿದ್ದ ಎಂದು ಹಿಂದೂ ಪುರುಷನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ದುಷ್ಕರ್ಮಿಗಳನ್ನು ನಗರದ ಎಸ್​.ಜಿ.ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಹಿನ್ನೆಲೆಯಲ್ಲಿ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ನಗರದ ಡೈರಿ ಸರ್ಕಲ್​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಬ್ಯಾಂಕ್​ವೊಂದರ ನೌಕರರಾದ ಮಹೇಶ್​ ತಮ್ಮ ಸಹೋದ್ಯೋಗಿ ಮುಸ್ಲಿಂ ಮಹಿಳೆಯನ್ನು ಬೈಕ್​ನಲ್ಲಿ ಮನೆಗೆ ಡ್ರಾಪ್ ಮಾಡುತ್ತಿದ್ದ ವೇಳೆ ಹಿಂಬಾಲಿಸಿ ಬಂದಿದ್ದ ಆರೋಪಿಗಳು ಹಲ್ಲೆ ಮಾಡಿದ್ದರು. ಮಹೇಶ್​​ಗೆ ಹೊಡೆಯುತ್ತಾ, ಇನ್ನೊಂದು ಸಾರಿ ಬುರ್ಖಾ ಹಾಕಿಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ ಎಂದು ಬೆದರಿಕೆ ಹಾಕಿದ್ದ ದೃಶ್ಯವು ವೈರಲ್​ ವಿಡಿಯೋದಲ್ಲಿ ಕಂಡಿತ್ತು.

    ಇದನ್ನೂ ಓದಿ: ಡಿಸಿ​ ಆದ ಗುಜರಾತ್​ ಬಾಲಕಿ! ಬರ್ತ್​ಡೇ ವಿಶ್​ಗೆ ಜಿಲ್ಲಾಧಿಕಾರಿ ಮೊಹರು!

    ಇದೇ ವೇಳೆ ಮಹಿಳೆಗೂ ಅವಾಜ್​ ಹಾಕಿದ್ದ ಪುಂಡರು, ನಿನಗೆ ನಾಚಿಕೆಯಾಗಲ್ವಾ.. ಈ ಜಗತ್ತಲ್ಲಿ ಏನಾಗ್ತಿದೆ ಅಂತ ಗೊತ್ತಿಲ್ವಾ? ಅನ್ಯಕೋಮಿನವರೊಂದಿಗೆ ಹೀಗೆ ಕೂತು ಹೋಗ್ತಿದ್ದೀಯ ಅಂತ ಗದರಿಸಿ, ಬೈಕ್​ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಕಳುಹಿಸಿದ್ದರು. ಮಹಿಳೆಯು, ಏನ್ ಅಣ್ಣ ನಿನ್ ಸಮಸ್ಯೆ? ನಾನು ಇದೇ ದಾರಿಯಲ್ಲಿ ಮನೆಗೆ ಹೊರಟಿದ್ದೆ. ನನಗೆ ಮದುವೆ ಆಗಿದೆ ಎಂದು ಹೇಳಿದಾಗ, ಆಕೆಯ ಗಂಡನಿಗೂ ಫೋನ್​ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

    ಈ ಬಗ್ಗೆ ಬೊಮ್ಮಾಯಿ ಅವರು ಟ್ವೀಟ್​ ಮಾಡಿದ್ದು, “ಪ್ರಕರಣದಲ್ಲಿ ಪೊಲೀಸರು ಚುರುಕಾಗಿ ನಡೆದುಕೊಂಡು, ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸಿರುತ್ತಾರೆ. ಕೇಸು ದಾಖಲಿಸಿದ್ದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ನನ್ನ ಸರ್ಕಾರ ಇಂಥ ಪ್ರಸಂಗಗಳಲ್ಲಿ ಉಕ್ಕಿನ ಹಸ್ತದಿಂದ ಕ್ರಮ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.

    ಡ್ರೋನ್​ಗಳಲ್ಲಿ ಔಷಧಿ-ಲಸಿಕೆಗಳನ್ನು ‘ಡನ್ಜೋ’ ಮಾಡುವ ಪ್ರಯೋಗ!

    ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts