More

    BJP ಕಾರ್ಯಕರ್ತರಿಗೆ ಪೊಲೀಸರ ಕುಮ್ಮಕ್ಕು: ರಾಹುಲ್​ಗೆ ಭದ್ರತೆ ಕೋರಿ ಅಮಿತ್​ ಷಾಗೆ ಪತ್ರ ಬರೆದ ಖರ್ಗೆ

    ನವದೆಹಲಿ: ಅಸ್ಸಾಂನಲ್ಲಿ ಭಾರತ್​ ಜೋಡೋ ನ್ಯಾಯ ಯಾತ್ರೆಯ ವೇಳೆ ನಡೆದ ಗಲಾಟೆಗಳನ್ನು ಉಲ್ಲೇಖಿಸಿ, ಸಂಸದ ರಾಹುಲ್​ ಗಾಂಧಿ ರಕ್ಷಣೆಯ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತೊಡಿಸಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್​ ಷಾರಿಗೆ ಪತ್ರ ಬರೆದಿರುವ ಖರ್ಗೆ ಕೆಳೆದ ಕೆಲವು ದಿನಗಳಿಂದ ಗಂಭೀರ ಸ್ವರೂಪದ ಭದ್ರತಾ ಲೋಪ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

    ನಿನ್ನೆ ಯಾತ್ರೆಯು ಮೇಘಾಲಯದಿಂದ ಮತ್ತೆ ಅಸ್ಸಾಂ ಎಂಟ್ರಿ ನೀಡುವ ಸಂದರ್ಭದಲ್ಲಿ ಗುವಾಹಟಿಯ ಹೊರವಲಯದಲ್ಲಿ ಅಸ್ಸಾಂ ಪೊಲೀಸರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಯಿತು. ಇದಾದ ಬಳಿಕ ರಾಹುಲ್​ ಗಾಂಧಿ ಮತ್ತು ಇತರೆ ಕಾಂಗ್ರೆಸ್​ ನಾಯಕರ ವಿರುದ್ಧ ಎಫ್​ಐಆರ್​ ಸಹ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಕ್ರಿಮಿನಲ್ ಪಿತೂರಿ, ಕಾನೂನುಬಾಹಿರ ಸಭೆ ಮತ್ತು ಶಾಂತಿ ಭಂಗದ ಆರೋಪವನ್ನು ಮಾಡಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಘಟನೆಯನ್ನು ಖಂಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ಕ್ರಮಗಳನ್ನು “ನಕ್ಸಲೈಟ್ ತಂತ್ರಗಳು” ಎಂದು ಉಲ್ಲೇಖಿಸಿ “ಅಸ್ಸಾಮಿ ಸಂಸ್ಕೃತಿಗೆ ಪರಕೀಯ”ರು ಎಂದು ವಾಗ್ದಾಳಿ ನಡೆಸಿದ್ದಾರೆ.

    ಖರ್ಗೆ ಅವರು ಅಮಿತ್​ ಷಾಗೆ ಬರೆದಿರುವ ಪತ್ರದ ಪ್ರತಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಅಸ್ಸಾಂ ಸರ್ಕಾರ ಭಯ ಮತ್ತು ಬೆದರಿಕೆಯ ವಾತಾವರಣ ಸೃಷ್ಟಿಸಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿದೆ. ಕೂಡಲೇ ಮಧ್ಯಸ್ಥಿಕೆ ವಹಿಸಿ, ರಾಹುಲ್​ ಗಾಂಧಿ ಮತ್ತೆ ಯಾತ್ರೆಯಲ್ಲಿ ಪಾಲ್ಗೊಂಡಿರುವ ಜನರ ಸುರಕ್ಷತೆಯನ್ನು ಖಚಿತಪಡಿಸುವಂತೆ ಖರ್ಗೆ ಆಗ್ರಹಿಸಿದ್ದಾರೆ. ಅಲ್ಲದೆ, ದೈಹಿಕ ಹಾನಿಗೆ ಕಾರಣವಾಗುವ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರನ್ನು ಖರ್ಗೆ ವಿನಂತಿಸಿದ್ದಾರೆ.

    Kharge 1

    ಕಳೆದ ವಾರ ಅಸ್ಸಾಂಗೆ ಎಂಟ್ರಿ ನೀಡಿದಾಗಿನಿಂದ ಬಿಜೆಪಿ ಕಾರ್ಯಕರ್ತರಿಂದ ಯಾತ್ರೆಯ ಮೇಲೆ ಅನೇಕ ದಾಳಿಗಳು ನಡೆದಿವೆ ಎಂದಿರುವ ಖರ್ಗೆ, ಅದಕ್ಕೆ ಸಂಬಂಧಿಸಿದ ಉದಾಹರಣೆಗಳನ್ನು ನೀಡಿ, Z+ ರಕ್ಷಣೆಯಲ್ಲಿ ಅಡಿಯಲ್ಲಿ ಬರುವ ರಾಹುಲ್ ಗಾಂಧಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ವಿನಂತಿಸಿದ್ದಾರೆ. ಅಲ್ಲದೆ, ಅಸ್ಸಾಂ ಪೊಲೀಸರು ದಾಳಿಗಳ ಹಿಂದೆ ವ್ಯವಸ್ಥಿತವಾಗಿ ನಿಂತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿಯವರ ಬೆಂಗಾವಲು ಪಡೆಯ ಹತ್ತಿರ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಅಂದಹಾಗೆ ಭಾರತ್ ಜೋಡೋ ನ್ಯಾಯ ಯಾತ್ರೆಯು ಜನವರಿ 14 ರಂದು ಮಣಿಪುರದ ಇಂಫಾಲ್‌ನಿಂದ ಪ್ರಾರಂಭವಾಯಿತು ಮತ್ತು ಮುಂಬೈನಲ್ಲಿ ಕೊನೆಗೊಳ್ಳಲಿದ್ದು, 6,700 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಸಮಾಜದ ದುರ್ಬಲ ವರ್ಗಗಳನ್ನು ಒಗ್ಗೂಡಿಸುವುದರೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಯಾತ್ರೆ ಹೊಂದಿದೆ. (ಏಜೆನ್ಸೀಸ್​)

    ಜ. 26 ಗಣರಾಜ್ಯೋತ್ಸವ ಸಂಭ್ರಮ: ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ ಕುರಿತ ಮಾಹಿತಿ ಇಲ್ಲಿದೆ…​

    ತಂಗಿ ಲವ್​​ ಮಾಡಿದ್ದಕ್ಕೆ ಆಕೆಯ ಜತೆ ತಾಯಿಯನ್ನು ಕೆರೆಗೆ ತಳ್ಳಿ ಕೊಂದ ಯುವಕ: ಮೈಸೂರಿನಲ್ಲಿ ದುರ್ಘಟನೆ

    ಬಾಲರಾಮನ ಮುಡಿ ಅಲಂಕರಿಸಿರುವ ವಜ್ರಖಚಿತ ಕಿರೀಟದ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts