More

    ಬಾಲರಾಮನ ಮುಡಿ ಅಲಂಕರಿಸಿರುವ ವಜ್ರಖಚಿತ ಕಿರೀಟದ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ!

    ಅಯೋಧ್ಯೆ: ಮುಡಿಯಲ್ಲಿರುವ ವಜ್ರಖಚಿತ ಕಿರೀಟವು ಬಾಲರಾಮನ ಅಂದವನ್ನೇ ದ್ವಿಗುಣಗೊಳಿಸಿದೆ. ಈ ದುಬಾರಿ ಕಿರೀಟವನ್ನು ಗುಜರಾತಿನ ಸೂರತ್​ ಮೂಲದ ವಜ್ರದ ವ್ಯಾಪಾರಿ ದೇಣಿಗೆಯಾಗಿ ನೀಡಿದ್ದು, ಸೋಮವಾರ (ಜ.22) ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ವೇಳೆ ಕಿರೀಟವನ್ನು ಬಾಲರಾಮನಿಗೆ ಧರಿಸಲಾಯಿತು.

    ದೇಣಿಗೆ ನೀಡಿದ ವಜ್ರದ ವ್ಯಾಪಾರಿ ಹೆಸರು ಮುಕೇಶ್​ ಪಟೇಲ್​. ಇವರು ಸೂರತ್​ನಲ್ಲಿ ಗ್ರೀನ್​ ಲ್ಯಾಬ್​ ಡೈಮಂಡ್​ ಕಂಪನಿ ನಡೆಸುತ್ತಿದ್ದಾರೆ. ಸೋಮವಾರ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿ ವಜ್ರದ ಕಿರೀಟವನ್ನು ಬಾಲರಾಮನಿಗೆ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು. ನಾಲ್ಕೂವರೆ ಕೆಜಿ ತೂಕವಿರುವ ಕಿರೀಟವನ್ನು ಡೈಮಂಡ್​, ಚಿನ್ನ ಮತ್ತು ಇತರೆ ಹರಳುಗಳಿಂದ ತಯಾರು ಮಾಡಲಾಗಿದೆ.

    ದೇವಾಲಯದ ಪ್ರಧಾನ ಅರ್ಚಕರು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಪಟೇಲ್ ಅವರು ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಕಿರೀಟವನ್ನು ಹಸ್ತಾಂತರಿಸಿದರು. ರಾಮಲಲ್ಲಾ ವಿಗ್ರಹದ ತಲೆಯನ್ನು ಅಳತೆ ಮಾಡಲು ಸೂರತ್ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಜನವರಿ 5 ರಂದು ವಿಮಾನದ ಮೂಲಕ ಅಯೋಧ್ಯೆಗೆ ಕಳುಹಿಸಲಾಗಿತ್ತು. ಅದರ ಪ್ರಕಾರ ಕಿರೀಟವನ್ನು ತಯಾರಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರೀಯ ಖಜಾಂಚಿ ದಿನೇಶ್ ನವಾಡಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಪ್ರಾಣ ಪ್ರತಿಷ್ಠಾ ಸಮಯದಲ್ಲಿ ರಾಮ ಮಂದಿರದ ಎರಡು ಬೆಳ್ಳಿಯ ಪ್ರತಿಕೃತಿಗಳು ಗಮನ ಸೆಳೆದವು. ಇವು ಕೂಡ ಸೂರತ್‌ನಿಂದ ಸಿಕ್ಕಂತಹ ಉಡುಗೊರೆಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಉಡುಗೊರೆಯಾಗಿ ನೀಡಿದ 3 ಕೆಜಿ ತೂಕದ ದೇವಾಲಯದ ಬೆಳ್ಳಿಯ ಪ್ರತಿಕೃತಿಗಳನ್ನು ಸೂರತ್ ಮೂಲದ ಆಭರಣ ವ್ಯಾಪಾರಿ ತಯಾರಿಸಿದ್ದಾರೆ.

    ನಾಲ್ಕು ತಿಂಗಳ ಹಿಂದೆ ರಾಮ ಮಂದಿರದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸುವ ದಿನಾಂಕವನ್ನು ಘೋಷಣೆ ಮಾಡಿದಾಗ ದೇವಾಲಯದ ಬೆಳ್ಳಿಯ ಪ್ರತಿಕೃತಿಗಳನ್ನು ತಯಾರಿಸಲು ಆರಂಭಿಸಲಾಯಿತು. ಸೂರತ್​ನ ಡಿ ಖುಶಾಲ್ದಾಸ್ ಜ್ಯುವೆಲರ್ಸ್ ಇದನ್ನು ನಿರ್ಮಿಸಿದೆ. ಈ ಕಂಪನಿಯ ಮಾಲೀಕರ ಹೆಸರು ದೀಪಕ್ ಚೋಕ್ಷಿ. (ಏಜೆನ್ಸೀಸ್​)

    ಸಾನಿಯಾ ಪಡೆದ ಜೀವನಾಂಶವೆಷ್ಟು? ಭಾರತೀಯ ಮಹಿಳೆಯ ತಾಕತ್ತು ಅಂದ್ರೆ ಇದು! ಮಲಿಕ್​ಗೆ ಮುಖಭಂಗ

    ಬಾಲರಾಮ ಪ್ರಾಣ ಪ್ರತಿಷ್ಠೆ ವೇಳೆ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಮ್ಮ ಮುಖ ಮುಚ್ಚಿಕೊಂಡಿದ್ದು ಯಾಕೆ ಗೊತ್ತಾ?

    ಶ್ರೀದೇವಿಯ ಆ ಫೋಟೋ ನೋಡಿ ಗಳಗಳನೆ ಅತ್ತ ಸೆನ್ಸೇಷನಲ್ ಡೈರೆಕ್ಟರ್; ಅಂತದ್ದೇನಿದೆ ಎಂದ್ರು ನೆಟ್ಟಿಗರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts