More

    ಪೊಲೀಸರ ಕರ್ತವ್ಯನಿಷ್ಠೆಗೆ ಸಾಟಿಯಿಲ್ಲ : ಸತ್ರ ನ್ಯಾಯಾಧೀಶೆ ರಮಾ ಅಭಿಮತ

    ಚನ್ನಪಟ್ಟಣ :  ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳು. ಈ ಎರಡು ಇಲಾಖೆಗಳು ಹಗಲು, ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಅಭಿಪ್ರಾಯಪಟ್ಟರು.
    ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿ, ವೃತ್ತಿಯಲ್ಲಿ ಸದಾ ಮುಳುಗಿರುವ ಪೊಲೀಸರ ಕರ್ತವ್ಯನಿಷ್ಠೆಗೆ ಸಾಟಿ ಇಲ್ಲ. ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ನೆರವಾಗಲು ಇಲಾಖೆ ಆಯೋಜಿಸಿರುವ ಪೊಲೀಸ್ ಧ್ವಜ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದರು.

    ಪ್ರಾಣದ ಹಂಗು ತೊರೆದು, ಬಿಸಿಲು, ಮಳೆ, ಗಾಳಿ ಎನ್ನದೇ ಪ್ರತಿನಿತ್ಯ ಸಾರ್ವಜನಿಕರ ಸೇವೆಗೆ ಬದ್ಧರಾಗಿ ದುಡಿಯುವ ಪೊಲೀಸರ ಸೇವೆ ಅನನ್ಯ. ಪ್ರಸ್ತುತ ಸಮಾಜದಲ್ಲಿ ಶಾಂತಿ ಕಾಪಾಡಲು ಇಲಾಖೆ ಅತ್ಯಂತ ಚಾಣಾಕ್ಷತನದಿಂದ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕಷ್ಟಸುಖಗಳಿಗೆ ಪೊಲೀಸರು ಅನಿವಾರ್ಯವಾಗಿದ್ದು, ಅವರು ಇದ್ದರೇ ಮಾತ್ರ ಸಮಾಜ ನಿರ್ಭೀತಿಯಿಂದ ಇರಲು ಸಾಧ್ಯ ಎಂದರು.

    ಆರಕ್ಷಕರ ಕಾರ್ಯ ಅವಿಸ್ಮರಣೀಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಮಾತನಾಡಿ, ಸಾರ್ವಜನಿಕ ಅಸ್ತಿಪಾಸ್ತಿ ರಕ್ಷಣೆ ಸೇರಿದಂತೆ ಸಮಾಜದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳ ಸಂಧರ್ಭದಲ್ಲಿ ಪೊಲೀಸರ ಕರ್ತವ್ಯ ಅವಿಸ್ಮರಣೀಯ. ಪೊಲೀಸರ ಕುಟುಂಬದ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಮಕ್ಕಳ ಶಿಕ್ಷಣ ಸೇರಿದಂತೆ ಪ್ರತಿಯೊಂದಕ್ಕೂ ಬೆಂಗಾವಲಾಗಿರುತ್ತದೆ. ಇದುವರೆಗೆ 11.75 ಲಕ್ಷ ರೂ. ನಿಧಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಡಿವೈಎಸ್‌ಪಿ ಕೆ.ಎನ್ ರಮೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ಮಹೇಶ್ ಸೇರಿದಂತೆ ಜಿಲ್ಲೆಯ ಎಲ್ಲ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಹಾಗೂ ನಿವೃತ್ತ ಪೊಲೀಸರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts