More

    ವಿವಾದಗಳು ಮಿಸ್ಸಿಂಗ್!; ಪೊಗರು ಹುಡುಗಿಯ ಬೆರಗು ಮಾತು..

    ಎರಡು ವರ್ಷಗಳೇ ಆಗಿತ್ತು ರಶ್ಮಿಕಾ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ. ದರ್ಶನ್ ಅಭಿನಯದ ‘ಯಜಮಾನ’ ಚಿತ್ರವೇ ಕೊನೆ. ಅದಾಗಿ ಎರಡು ವರ್ಷಗಳ ನಂತರ ‘ಪೊಗರು’ ಬಿಡುಗಡೆಯಾಗುತ್ತಿದೆ. ಆ ಚಿತ್ರದ ಬಗ್ಗೆ ರಶ್ಮಿಕಾ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಪ್ರಶ್ನಿಸಿದವರಿಗೆ, ಉತ್ತರವಾಗಿ ರಶ್ಮಿಕಾ ಇದೀಗ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಬರೀ ಸಿನಿಮಾ ಬಗ್ಗೆ ಅಷ್ಟೇ ಅಲ್ಲ, ವಿಜಯವಾಣಿ ಜತೆಗೆ ತಮ್ಮ ವೃತ್ತಿಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    | ಮಂಜು ಕೊಟಗುಣಸಿ ಬೆಂಗಳೂರು

    ಏನು ‘ಪೊಗರು’ ಚಿತ್ರದ ಸ್ಪೆಷಾಲಿಟಿ?

    – ಈ ಚಿತ್ರದ ಸಲುವಾಗಿ ಧ್ರುವ ತಮ್ಮ ಗೆಟಪ್ ಬದಲಿಸಿಕೊಂಡಿದ್ದಾರೆ. ಮೊದಮೊದಲಿಗೆ ಅವರನ್ನು ನೋಡಿದಾಗ ಭಯ ಆಗಿತ್ತು. ಏಕೆಂದರೆ, ಅವರನ್ನು ಯಾವಾಗಲೂ ಕ್ಯೂಟ್ ಮತ್ತು ಲವರ್ ಬಾಯ್ ಆಗಿ ನೋಡಿದ್ದೇ ಹೆಚ್ಚು. ಈ ಚಿತ್ರಕ್ಕಾಗಿ ಅವರು ತಮ್ಮ ದೇಹ ಬೆಳೆಸಿದ್ದಾರೆ. ಅವರ ಡೆಡಿಕೇಷನ್ ನೋಡಿ ಖುಷಿಯಾಯ್ತು. ಇಡೀ ತಂಡದ ಶ್ರಮ ಇದೀಗ ಸಿನಿಮಾದಲ್ಲಿದೆ. ಈಗಾಗಲೇ ‘ಖರಾಬು …’ ಹಾಡು ದೊಡ್ಡ ಸಂಚಲನ ಸೃಷ್ಟಿಸಿದೆ. ಡೈಲಾಗ್ ಟೀಸರ್ ಸಹ ನೋಡಿ ಖುಷಿಪಟ್ಟಿದ್ದೇನೆ. ಇದೊಂದು ಮಾಸ್ ಸಿನಿಮಾ. ಪಕ್ಕಾ ಪೈಸಾ ವಸೂಲ್.

    ಹೇಗಿತ್ತು ಚಿತ್ರದ ಅನುಭವ?

    – ಮಾಸ್ ಎಂಟರ್​ಟೈನರ್ ಸಿನಿಮಾ ಇದು. ನಂದಕಿಶೋರ್ ಅವರ ಕೆಲಸ ತುಂಬ ಕೂಲ್ ಮತ್ತು ಅಷ್ಟೇ ಯೋಜನಾಬದ್ಧ. ಅವರ ಜತೆಗೆ ಮತ್ತೊಂದು ಸಿನಿಮಾ ಮಾಡೋಕೂ ನಾನು ರೆಡಿ. ಇನ್ನು ನಿರ್ದೇಶಕರ ಜತೆಗೆ ಹೀರೋ, ನಿರ್ವಪಕರು ಮತ್ತು ಕ್ಯಾಮರಾಮನ್ ಈ ಚಿತ್ರದ ನಾಲ್ಕು ಪಿಲ್ಲರ್​ಗಳು. ಪ್ರೇಕ್ಷಕ ಬಯಸುವ ಎಲ್ಲ ಅಂಶಗಳೂ ಇಲ್ಲಿವೆ. ಮಾಸ್​ಗೆ ಹೇಳಿ ಮಾಡಿಸಿದ ಚಿತ್ರವಿದು. ಇವರೆಲ್ಲರ ಜತೆಗೆ ನಾನೂ ಒಂದು ಪಾತ್ರ ಮಾಡಿದ್ದೇನೆ. ನೋಡುಗನಿಗೆ ಒಂದು ರೀತಿ ಅದು ಟಾಮ್ ಆಂಡ್ ಜೆರ್ರಿ ಕಾರ್ಟೂನ್ ನೋಡಿದ ಹಾಗನಿಸುತ್ತದೆ. ನಾನಿನ್ನೂ ಸಿನಿಮಾ ನೋಡಿಲ್ಲ. ಹಾಗಾಗಿ ಕುತೂಹಲ ಹೆಚ್ಚೇ ಇದೆ.

    ಅಮಿತಾಭ್ ಬಚ್ಚನ್ ಜತೆಗೆ ಸಿನಿಮಾ ಒಪ್ಪಿಕೊಂಡಿದ್ದೀರಂತೆ?

    – ಆ ಬಗ್ಗೆ ಸದ್ಯಕ್ಕೆ ನಾನು ಏನನ್ನೂ ಹೇಳುವುದಿಲ್ಲ. ಆ ಸಿನಿಮಾಕ್ಕೆ ಸಂಬಂಧಿಸಿದಂತೆ ನಿರ್ವಪಕರಿದ್ದಾರೆ. ನಿರ್ದೇಶಕರಿದ್ದಾರೆ. ಆ ಟೀಮ್ ಅದೆಲ್ಲವನ್ನು ಬಹಿರಂಗಗೊಳಿಸುವವರೆಗೂ ನಾನು ಅದರ ಬಗ್ಗೆ ಏನನ್ನೂ ಮಾತನಾಡಲಾರೆ.

    ಯಾಕೋ, ಯಾವ ಬಯೋಪಿಕ್​ನಲ್ಲಿ ರಶ್ಮಿಕಾ ಹೆಸರು ಕೇಳಿ ಬರಲಿಲ್ಲವಲ್ಲಾ?

    – ನನಗೆ ಬಯೋಪಿಕ್​ನಲ್ಲಿ ನಟಿಸುವ ಆಸೆ ಇದೆ. ಅದರಲ್ಲೂ ಸೌಂದರ್ಯ ಮತ್ತು ಶ್ರೀದೇವಿ ಪಾತ್ರ ಮಾಡುವಾಸೆ. ನೋಡೋಣ ಮುಂದಿನ ದಿನಗಳಲ್ಲಿ ಏನೆನಾಗುತ್ತೋ?

    ಮದುವೆ ಬಗ್ಗೆ ಮನೇಲೇನಾದರೂ?

    – ಹಹ್ಹಹ್ಹ… ನನಗೆ ವಯಸ್ಸಾಗುತ್ತಿದೆ ಅಂತ ಗೊತ್ತು. ಆದರೆ, ಪದೇಪದೆ ವಯಸ್ಸಾಯ್ತು, ವಯಸ್ಸಾಯ್ತು ಎಂದು ಹೇಳಬೇಡಿ. ನಾನಿನ್ನೂ ಚಿಕ್ಕವಳು. ಮದುವೆ ಆಗುವ ಸಮಯಕ್ಕೆ ಆಗುತ್ತದೆ. ನೋಡೋಣ …

    ಕನ್ನಡ, ತೆಲುಗು, ತಮಿಳು ಆಯ್ತು. ಬಾಲಿವುಡ್ ಎಂಟ್ರಿನೂ ಜೋರಾಗಿದೆಯಲ್ಲ?

    – ಸಿಕ್ಕ ಅವಕಾಶಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ, ಭಾಷೆಗೆ ಯಾವುದೇ ಸೀಮಿತ ಗಡಿ ಇಲ್ಲ. ಪ್ರತಿಯೊಂದು ಇಂಡಸ್ಟ್ರಿಯಲ್ಲೂ ಕಲಿಯುವುದು ಸಾಕಷ್ಟಿರುತ್ತದೆ. ಅದೇ ರೀತಿ, ಬಾಲಿವುಡ್​ನಲ್ಲಿ ಕಲಿಯುವುದು ಸಹ ಸಾಕಷ್ಟಿದೆ. ‘ಮಿಷನ್ ಮಜ್ನು’ ತುಂಬ ವಿಶೇಷವಾದ ಸ್ಕ್ರಿಪ್ಟ್. 80ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುವುದರಿಂದ ಅಷ್ಟೇ ನೀಟಾಗಿ ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಶೂಟಿಂಗ್​ನಲ್ಲಿ ಭಾಗವಹಿಸಿ ಬಂದಿದ್ದೇನೆ.

    ರಶ್ಮಿಕಾ ಒಂದು ಚಿತ್ರ ಸೆಲೆಕ್ಟ್ ಮಾಡೋದು ಹೇಗೆ?

    – ಮೊದಲಿಗೆ ಚಿತ್ರದ ನರೇಷನ್ ಕೇಳುತ್ತೇನೆ. ಅದು ಇಷ್ಟವಾದರೆ, ಮೀಟಿಂಗ್. ಕಥೆಯೇ ಮುಖ್ಯವಾಗಿ ರುವುದರಿಂದ ಆ ಕಡೆಯೇ ನನ್ನ ಗಮನ ಹೆಚ್ಚು. ಅದರ ಜತೆಗೆ ನನ್ನ ಅಮ್ಮ ಮತ್ತು ಮ್ಯಾನೇಜರ್ ನನ್ನ ಮೊದಲ ಆಡಿಯನ್ಸ್. ಅವರಿಂದ ಅನಿಸಿಕೆ ಪಡೆಯುತ್ತೇನೆ.

    ನಿಮ್ಮ ಸಂಭಾವನೆ ಎರಡು ಕೋಟಿನಾ?

    – ಈ ಸುದ್ದಿ ನನಗೂ ಬಂತು. ಆ ಸುದ್ದಿ ಬರುತ್ತಿದ್ದಂತೆ ನಮ್ಮನೆಗೆ ಐಟಿ ರೈಡೂ ಆಯ್ತು. ನಿಜಕ್ಕೂ ಆ ರೀತಿ ಆದರೆ, ಅಷ್ಟು ಸಿಗುತ್ತೆ ಅಂತ ಹೇಳಬೇಕು ಅಂತ ನನಗೂ ಆಸೆ ಇದೆ. ಆ ಥರ ಏನೂ ಇಲ್ಲ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ಆದರೂ ಅಷ್ಟೊಂದು ಸಂಭಾವನೆ ಪಡೆಯುತ್ತಿಲ್ಲ.

    ರಶ್ಮಿಕಾ ಅಂದರೆ ಕಾಂಟ್ರವರ್ಸಿಗಳೇ ಮುಂದೆ ಬಂದು ನಿಲ್ಲುತ್ತವೆ ಯಾಕೆ?

    – ಆರಂಭದಲ್ಲಿನ ವಿವಾದಗಳಿಗೆ ತುಂಬ ಬೇಸರಗೊಂಡಿದ್ದೆ. ಮೂರು ವರ್ಷ ಅಳುವುದರಲ್ಲೇ ಸಾಕಷ್ಟು ಸಮಯ ಕಳೆದೆ. ಆದರೆ, ಈಗ ಕಾಂಟ್ರವರ್ಸಿ ಇಲ್ಲದಿದ್ದರೆ ಏನೋ ಮಿಸ್ ಆಗುತ್ತಿದೆ ಅನಿಸುತ್ತದೆ. ಯಾಕೆ ಯಾರೂ ನನ್ನ ಬಗ್ಗೆ ಮಾತನಾಡುತ್ತಿಲ್ಲ? ಯಾಕೆ ಏನೂ ವಿವಾದ ಆಗುತ್ತಿಲ್ಲ ಎಂದು ನಾನೇ ಅಂದುಕೊಳ್ಳುತ್ತಿರುತ್ತೇನೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನನ್ನ ಫ್ಯಾನ್ಸ್ ಮತ್ತು ನಮ್ಮ ಕುಟುಂಬ ನೆಗೆಟಿವಿಟಿಯ ಸಣ್ಣ ಅಣುವನ್ನೂ ನನ್ನ ಹತ್ತಿರಕ್ಕೆ ಸುಳಿಯದಂತೆ ನೋಡಿಕೊಳ್ಳುತ್ತಾರೆ. ಹಾಗಾಗಿಯೇ ನಾನು ಹ್ಯಾಪಿಯಾಗಿದ್ದೇನೆ.

    VIDEO| ಪಿಟ್ಟ ಕಥಲು ಟ್ರೈಲರ್ ಬಿಡುಗಡೆ: ಮತ್ತೆ ವೈರಲ್​ ಆಯ್ತು ಶ್ರುತಿ ಹಾಸನ್​-ಸಂಜಿತ್ ಹೆಗ್ಡೆ ಬೋಲ್ಡ್​ ದೃಶ್ಯ!

    ವಿಕ್ರಮನ ಸಾಹಸಗಳು; ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ವಿಮರ್ಶೆ

    ಕಾಣದ ನೆರಳಲ್ಲಿ ಆತ್ಮದ ಆಟ; ಶ್ಯಾಡೊ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts