More

    ಈ ಬಾರಿ ಜಿ-20 ಸಭೆ ಅಧ್ಯಕ್ಷತೆ ಭಾರತದ್ದು; ಲಾಂಛನ ಬಿಡುಗಡೆ ಮಾಡಿದ ಮೋದಿ

    ನವದೆಹಲಿ: ಮುಂದಿನ ವರ್ಷದ ಜಿ-20 ಸಭೆಯನ್ನು ಭಾರತ ಆಯೋಜಿಸಿದ್ದು ಅದಕ್ಕೆ ಸಂಬಂಧಿಸಿದ ಲಾಂಛನವನ್ನು ಪ್ರಧಾನಿ ಮೋದಿ ಇಂದು ಬೆಳಗ್ಗೆ ಬಿಡುಗಡೆ ಮಾಡಿದರು.

    ಭಾರತದ ಜಿ-20 ಅಧ್ಯಕ್ಷತೆಯನ್ನು ವಹಿಸಿದ ಐತಿಹಾಸಿಕ ಸಂದರ್ಭದಲ್ಲಿ ದೇಶದ ನಾಗರಿಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಭಾಷಣದಲ್ಲಿ ‘ಕಮಲ ಜಗತ್ತನ್ನು ಒಟ್ಟುಗೂಡಿಸುತ್ತಾ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ. ಭಾರತವು ಈಗ ಜಿ-20 ಗುಂಪಿನ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ಇದು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಭಾರತಕ್ಕೆ ಸಿಕ್ಕಿದ ಅದ್ಭುತ ಅವಕಾಶ’ ಎಂದು ಹೇಳಿದರು.

    ವಿದೇಶಾಂಗ ಸಚಿವಾಲಯ ಸೋಮವಾರ ‘ಜಿ-20 ಅಧ್ಯಕ್ಷ ಸ್ಥಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಾಮುಖ್ಯತೆ ಹೊಂದಿದ್ದು ಪ್ರಮುಖ ವಿಷಯಗಳ ಕುರಿತು ಕೆಲಸ ಮಾಡಲು ಭಾರತಕ್ಕೆ ಒಳ್ಳೆಯ ಅವಕಾಶವನ್ನು ನೀಡುತ್ತದೆ. ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಥೀಮ್ ಮತ್ತು ವೆಬ್‌ಸೈಟ್ ಜಗತ್ತಿಗೆ ಭಾರತದ ಸಂದೇಶ ಮತ್ತು ಆದ್ಯತೆಗಳನ್ನು ಮನವರಿಕೆ ಮಾಡುತ್ತದೆ’ ಎಂದು ಹೇಳಿತ್ತು.

    ಸದ್ಯಕ್ಕೆ ಇಂಡೋನೇಷ್ಯಾದಿಂದ ಜಿ-20ಯ ಅಧ್ಯಕ್ಷತೆಯನ್ನು ವಹಿಸಿದ್ದು, ಭಾರತ ಡಿಸೆಂಬರ್ 1ರಂದು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಜಿ-20 ಗುಂಪು ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವೇದಿಕೆಯಾಗಿದೆ.

    ಜಿ-20 ಗುಂಪು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್​, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts