More

    ಗುಜರಾತ್​ ಚುನಾವಣೆ: ಇಂದು ಅಂತಿಮ ಹಂತದ ಮತದಾನ, ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಮೋದಿ

    ಅಹಮದಾಬಾದ್​: ಇಂದು (ಡಿ.5) ಗುಜರಾತ್​ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್​ನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

    ಜನರ ಗುಂಪಿನ ಜೈಕಾರಗಳ ನಡುವೆ ನಿಶಾನ್​ ಪಬ್ಲಿಕ್​ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿದ ಪ್ರಧಾನಿ ಮೋದಿ, ಕ್ಯೂನಲ್ಲಿ ನಿಂತು ಸಾಮಾನ್ಯರಂತೆ ಮತ ಚಲಾಯಿಸಿದರು. ಮತಗಟ್ಟೆ ಒಳಗೆ ಪ್ರವೇಶಿಸಿದಾಗ ಎದ್ದು ನಿಂತ ಚುನಾವಣಾ ಅಧಿಕಾರಿಗಳನ್ನು ಕುಳಿತುಕೊಳ್ಳುವಂತೆ ಪ್ರಧಾನಿ ಸನ್ನೆ ಮಾಡಿದ್ದು, ಗಮನ ಸೆಳೆಯಿತು.

    ಮತದಾನ ಮಾಡಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಹಬ್ಬವನ್ನು ಗುಜರಾತ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನರು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಹೀಗಾಗಿ ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಶಾಂತಿಯುತವಾಗಿ ಚುನಾವಣೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ರಾಣಿಪ್‌ನ ನಿಶಾನ್ ಪಬ್ಲಿಕ್ ಸ್ಕೂಲ್‌ನ ಮತಗಟ್ಟೆಗೆ ತೆರಳುವ ಮುನ್ನ ಹೊರಗಡೆ ನೆರೆದಿದ್ದ ಜನ ಸಮೂಹದತ್ತ ಪ್ರಧಾನಿ ನರೇಂದ್ರ ಮೋದಿ ಕೈ ಬೀಸಿದರು. ಇದಕ್ಕೂ ಮುನ್ನ ಅವರು ಗಾಂಧಿ ನಗರದ ರಾಜಭವನದಿಂದ ಮತ ಚಲಾಯಿಸಲು ಅಹಮದಾಬಾದ್​ಗೆ ಆಗಮಿಸಿದರು.

    ಇಂದು ಬೆಳಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

    ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಡಿಸೆಂಬರ್​ 1ರಂದು ಮೊದಲ ಹಂತ ಮತದಾನ ನಡೆದಿದ್ದು, ಇಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಡಿ.8ಕ್ಕೆ ಫಲಿತಾಂಶ ಹೊರ ಬೀಳಲಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೂಡ ಅಂದೇ ಹೊರಬೀಳಲಿದೆ. ಗುಜರಾತ್​ ವಿಧಾನಸಭೆಯು 182 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 92 ಸ್ಥಾನ ಅಗತ್ಯ. ಹಿಮಾಚಲಪ್ರದೇಶ ವಿಧಾನಸಭೆಯು 68 ಕ್ಷೇತ್ರಗಳನ್ನ ಹೊಂದಿದ್ದು, ಬಹುಮತ ಪಡೆಯಲು 35 ಸ್ಥಾನ ಅಗತ್ಯ. ಸದ್ಯ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. (ಏಜೆನ್ಸೀಸ್​)

    https://twitter.com/ANI/status/1599614358530576384?s=20&t=qZJLHFwmxUN3U8ihTv1LFQ

    https://twitter.com/ANI/status/1599612635309576192?s=20&t=qZJLHFwmxUN3U8ihTv1LFQ

    ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​

    ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: ಇನ್ನೂ ಸಿಗದ ಸುಳಿವು, ಮಹಿಳಾ PSI ವಿರುದ್ಧ FIR​ ದಾಖಲು

    ಬೆಂಗ್ಳೂರಿನಲ್ಲಿ ಹಾಡಹಗಲೇ ಯುವಕನನ್ನು ಬೆದರಿಸಿ, ಮೊಬೈಲ್​ ಕಸಿದು ಮೂವರು ದುಷ್ಕರ್ಮಿಗಳು ಪರಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts