ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​

ಭೋಪಾಲ್​: ದೇವರ ಮುಂದೆ ಪಾರ್ಥಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾವಿರಾರು ಮಂದಿ ವಿಡಿಯೋ ಶೇರ್ ಮಾಡಿದ್ದು, ಈ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿನ ದೇವಸ್ಥಾನವೊಂದರಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಏನಿದೆ? ವ್ಯಕ್ತಿಯೊಬ್ಬ ಸಾಯಿಬಾಬ ವಿಗ್ರಹದ ಮುಂದೆ ಕುಳಿತು ಪ್ರಾರ್ಥಿಸುತ್ತಿರುತ್ತಾನೆ. ಬಳಿಕ ತನ್ನ ತಲೆಯನ್ನು ದೇವರ ಪಾದ ಮೇಲೆ ಇಡುವ ವ್ಯಕ್ತಿ ನಂತರ ಸಾಕಷ್ಟು ಸಮಯದವರೆಗೆ ಮೇಲೆ ಏಳುವುದೇ ಇಲ್ಲ. ತುಂಬಾ ಗಾಢ ಭಕ್ತಿಯಲ್ಲಿ ಮುಳುಗಿರಬೇಕೆಂದು ಅಲ್ಲಿ … Continue reading ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​