More

    ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: ಇನ್ನೂ ಸಿಗದ ಸುಳಿವು, ಮಹಿಳಾ PSI ವಿರುದ್ಧ FIR​ ದಾಖಲು

    ರಾಯಚೂರು: ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರವಾರ ಪೊಲೀಸ್​ ಠಾಣೆಯ ಮಹಿಳಾ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ಧ ಅದೇ ಠಾಣೆಯಲ್ಲೇ ಎಫ್​ಐಆರ್​ ದಾಖಲಾಗಿದೆ.

    ಡೆತ್​ನೋಟ್​ ಬರೆದಿಟ್ಟು ಡಿ.3ರಂದು ಬೆಳಗ್ಗೆ ಕಾಣೆಯಾಗಿರುವ ಯುವಕ ಇದುವರೆಗೂ ಪತ್ತೆಯಾಗಿಲ್ಲ. ಆತನ ಬಗ್ಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ. ಯುವಕನ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪಿಎಸ್​ಐ ಗೀತಾಂಜಲಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ವಿವರಣೆಗೆ ಬರುವುದಾದರೆ, ಪಿಎಸ್​ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸಿರವಾರದ ತಾಯಣ್ಣ ಎಂಬ ಯುವಕ ಆರೋಪ ಮಾಡಿದ್ದು, ಡಿ.3ರಂದು ಡೆತ್​ನೋಟ್​ ಬರೆದು ನಾಪತ್ತೆಯಾಗಿದ್ದಾನೆ. ಎರಡು ದಿನಗಳು ಕಳೆದರೂ ಆತನ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಸಿಕ್ಕಿಲ್ಲ. ತಾಯಣ್ಣ ಪತ್ತೆಯಾಗದಿರುವುದು ಆತನ ಪಾಲಕರನ್ನು ಆತಂಕಕ್ಕೆ ದೂಡಿದೆ. ಮಗನನ್ನು ಹುಡುಕಿ ಕೊಡುವಂತೆ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮಗನಿಗೆ ಏನಾದ್ರೂ ಆದ್ರೆ ಅದಕ್ಕೆ ನೇರ ಹೊಣೆ ಪಿಎಸ್ಐ ಗೀತಾಂಜಲಿ ಶಿಂಧೆ ಎಂದು ತಾಯಣ್ಣನ ಪಾಲಕರು ಆರೋಪ ಮಾಡುತ್ತಿದ್ದಾರೆ ಮತ್ತು ಗೀತಾಂಜಲಿ ವಿರುದ್ಧ ದೂರು ದಾಖಲಿಸಿದ್ದಾರೆ.

    ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ಆತನ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಡಿ.02ರಂದು ತಾಯಣ್ಣನನ್ನು ಗೀತಾಂಜಲಿ ಠಾಣೆಗೆ ಕರೆಸಿದ್ದರು. ಬಹಳ ಹೊತ್ತು ಲಾಕಪ್​ನಲ್ಲಿ ಕೂರಿಸಿದ್ದರಿಂದ ಮನ‌ನೊಂದು ನಾಪತ್ತೆತಾಗಿರುವುದಾಗಿ ಯುವಕ ಡೆತ್​ನೋಟ್​ನಲ್ಲಿ ಉಲ್ಲೇಖಸಿದ್ದಾನೆ. ನಾಪತ್ತೆಯಾಗಿರುವ ತಾಯಣ್ಣನ ವಿರುದ್ಧ 4 ಕ್ರಿಮಿನಲ್ ಹಾಗೂ 5 ಸಿವಿಲ್ ಪ್ರಕರಣಗಳಿರುವ ಮಾಹಿತಿಯೂ ಇದೆ.

    ಡೆತ್​ನೋಟ್​ನಲ್ಲಿ ಏನಿದೆ?
    ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್​ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಹೊರಗಡೆ ಹೋದಾಗಲೆಲ್ಲ ಜೀಪ್​ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.

    ನಿನ್ನೆ ಸಾಯಂಕಾಲ ನನ್ನನ್ನು ಠಾಣೆಗೆ ಕರೆಸಿದರು. ನಾನು ಮಾವನ ಮನೆಯಿಂದ ನೇರವಾಗಿ ಪೊಲೀಸ್​ ಠಾಣೆಗೆ ಹೋದೆ. ಆದರೆ, ನನ್ನನ್ನು ವಿಚಾರಣೆ ಮಾಡದೇ ಲಾಕಪ್​ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಆದರೆ, ವಿಚಾರಣೆ ಮಾತ್ರ ಮಾಡಲಿಲ್ಲ. ಇದರಿಂದ ನಾನು ಬಹಳ ನೊಂದಿದ್ದೇನೆ. ನನ್ನನ್ನು ಏಕಾಏಕಿ ಲಾಕಪ್​ನಲ್ಲಿ ಹಾಕಿದ್ದಾರೆ. ಇದು ತುಂಬಾ ನೋವಾಗಿದೆ.

    ಗೀತಾಂಜಲಿ ಅವರು ನನಗೆ 3 ತಿಂಗಳಿಂದ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ. ಯಾವ ದಾರಿಯಲ್ಲೂ ಕಂಡರೂ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದನ್ನು ನಾನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ಕೊರಗುತ್ತಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎರಡು ಪುಟಗಳ ಸುದೀರ್ಘ ಡೆತ್​ ನೋಟ್​ ಬರೆದಿರುವ ತಾಯಣ್ಣ ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್​ ಯು ಅಮ್ಮ ಎಂದು ಬರೆದಿದ್ದಾನೆ. (ದಿಗ್ವಿಜಯ ನ್ಯೂಸ್​)

    ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​

    ಬೆಂಗ್ಳೂರಿನಲ್ಲಿ ಹಾಡಹಗಲೇ ಯುವಕನನ್ನು ಬೆದರಿಸಿ, ಮೊಬೈಲ್​ ಕಸಿದು ಮೂವರು ದುಷ್ಕರ್ಮಿಗಳು ಪರಾರಿ!

    ಪೊಲೀಸರ ಬೆಂಬಲದೊಂದಿಗೆ ಮದ್ವೆಯಾಗಿ ಹೊಸ ಜೀವನ ಆರಂಭಿಸಿದ ಇಬ್ಬರು ಮಹಿಳಾ ಮಾವೋವಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts