ಭುವನೇಶ್ವರ್: ಪೊಲೀಸರ ಮುಂದೆ ಶರಣಾದ ಇಬ್ಬರು ಮಹಿಳಾ ಮಾವೋವಾದಿಗಳು ಪೊಲೀಸರ ಬೆಂಬಲದೊಂದಿಗೆ ಮದುವೆಯಾಗಿರುವ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮಹಿಳಾ ಮಾವೋವಾದಿಗಳಾಗಿದ್ದ ಸಪ್ನಿತಾ ಪತಮಾಹಿ ಅಲಿಯಾಸ್ ನಂದಿನಿ ಮತ್ತು ಫುಲಬತಿ ಉಸೆಂದಿ ಅಲಿಯಾಸ್ ಕರುಣಾ, ತಾವೇ ಆರಿಸಿಕೊಂಡ ಜೀವನ ಸಂಗಾತಿಯ ಜತೆ ಪೊಲೀಸರ ಬೆಂಬಲದೊಂದಿಗೆ ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
2019ರಲ್ಲಿ ಕಂದಮಾಲ್ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗುವ ಮುನ್ನ ಸಪ್ನಿತಾ ಪತಮಾಹಿ ಸುಮಾರು ಒಂದೂವರೆ ವರ್ಷಗಳ ಕಾಲ ಮಾವೋವಾದಿ ಆಗಿದ್ದಳು. ಅದೇ ರೀತಿ ಸುಮಾರು 13 ವರ್ಷಗಳ ಕಾಲ ಮಾವೋವಾದಿಯಾಗಿದ್ದ ಫುಲಬತಿ ಉಸೆಂದಿ 2021ರಲ್ಲಿ ಡಿಜಿ ಪೊಲೀಸ್ ಮುಂದೆ ಶರಣಾಗಿದ್ದಳು.
ಸರ್ಕಾರಿ ಯೋಜನೆ ಅನುಸಾರ ನಂದಿನಿ ಮತ್ತು ಕರುಣಾಗೆ ಒಡಿಶಾ ರಾಜ್ಯದ ಪೊಲೀಸರು ಪುನರ್ವಸತಿ ಕಲ್ಪಿಸಿಕೊಟ್ಟಿದ್ದರು. ಇದೀಗ ಇಬ್ಬರಿಗೂ ಮದುವೆ ಮಾಡಿಸುವ ಮೂಲಕ ಮಾವೋವಾದಿಗಳಾಗಿದ್ದ ಮಹಿಳೆಯರಿಬ್ಬರ ಬದುಕಲ್ಲಿ ಹೊಸ ಜೀವನ ಆರಂಭವಾಗುವಂತೆ ಮಾಡಿದ್ದಾರೆ. (ಏಜೆನ್ಸಿಸ್)
ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್
ಒಂದೇ ಹುಡುಗನನ್ನು ಮದುವೆಯಾದ ಅವಳಿ ಸಹೋದರಿಯರು! ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ
ವರದಕ್ಷಿಣೆಯಾಗಿ ಬೈಕ್ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್!