More

    ವರದಕ್ಷಿಣೆಯಾಗಿ ಬೈಕ್​ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್​!

    ಲಖನೌ: ವರದಕ್ಷಿಣೆ ತೆಗೆದುಕೊಳ್ಳುವುದು ನಮ್ಮ ಕಾನೂನಿಗೆ ವಿರುದ್ಧವಾಗಿದ್ದರೂ ಕೂಡ ಇಂದಿಗೂ ಅನೇಕ ಯುವತಿಯರು ವರದಕ್ಷಿಣೆ ಎಂಬ ಶಾಪದಿಂದ ಬಳಲುತ್ತಿದ್ದಾರೆ. ಇದೇ ವರದಕ್ಷಿಣೆಯಿಂದ ಅನೇಕ ಜೀವನ ಹಾಳಾಗಿದೆ ಮತ್ತು ಬಲಿಯಾಗಿದೆ. ಕೆಲವೊಬ್ಬರು ವರದಕ್ಷಿಣೆ ಬೇಡ ಎಂದು ಉದಾರತೆ ತೋರಿದರೆ, ಇನ್ನು ಕೆಲವರು ವರದಕ್ಷಿಣೆ ನೀಡದ್ದಕ್ಕೆ ಮದುವೆಯನ್ನೇ ಮುರಿದುಕೊಂಡಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ವರದಕ್ಷಿಣೆಯಾಗಿ ಬೈಕ್​ ನೀಡದಿದ್ದಕ್ಕೆ ವರನೊಬ್ಬ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಮದುವೆ ಮಂಟಪದಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಮದುವೆ ರದ್ದಾಗಿದ್ದಕ್ಕೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ವಧುವಿನ ಕುಟುಂಬ ವರನ ಕುಟುಂಬದ ವಿರುದ್ಧ ದೂರು ದಾಖಲಿಸಿದೆ. ಈ ಮದುವೆ ನಡೆಯದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರ ಮುಂದೆಯೇ ಹೇಳಿದ್ದಾರೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವರನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

    ಅಂದಹಾಗೆ ಡಿ. 2ರಂದು ಮದುವೆ ನಿಗದಿಯಾಗಿತ್ತು. ಅಯೋಧ್ಯಯ ಮಾವೈ ಮೂಲದ ಯುವಕನ ಜೊತೆ ಬಾರಾಬಂಕಿ ಮೂಲದ ಯುವತಿ ಸಪ್ತಪದಿ ತುಳಿಯಬೇಕಿತ್ತು. ತಿಲಕ ಇಡುವ ಸಮಾರಂಭದಲ್ಲಿ ವರನ ಕಡೆಯವರಿಗೆ ಚಿನ್ನದ ಉಂಗುರ ಮತ್ತು 5 ಸಾವಿರ ಹಣವನ್ನು ಹಸ್ತಾಂತರ ಮಾಡಿದ್ದರು. ಆದರೆ, ವರ ಬೈಕ್​ಗೆ ಬೇಡಿಕೆ ಇಟ್ಟಿದ್ದ. ಆದರೆ, ವಧುವಿನ ಕುಟುಂಬ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬೈಕ್​ ಕೊಡಿಸಲು ನಿರಾಕರಿಸಿದರು. ಈ ವೇಳೆ ಮದುವೆ ಮಂಟಪದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿದೆ. ಕೊನೆಗೆ ವರ ಮಂಟಪದಿಂದಲೇ ಹೊರ ನಡೆದಿದ್ದಾನೆ.

    ಮದುವೆ ಸ್ಥಗಿತಗೊಂಡ ಬಳಿಕ ವಧುವಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ಸ್ವೀಕರಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ನವೆಂಬರ್​ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹರಿದುಬಂತು 127 ಕೋಟಿ ರೂ. ಕಾಣಿಕೆ!

    ನನ್ನ ಮಾತಿನಿಂದ ನನಗೇ ನಾಚಿಕೆಯಾಗುತ್ತಿದೆ; ಯಾರ ಭಾವನೆಗೂ ಧಕ್ಕೆ ತರುವ ಉದ್ಧೇಶವಿರಲಿಲ್ಲ ಎಂದು ಕ್ಷಮೆ ಕೇಳಿದ ಬದ್ರುದ್ದೀನ್ ಅಜ್ಮಲ್

    ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: 48 ಗಂಟೆ ಕಳೆದರೂ ಸಿಗದ ಸುಳಿವು, ಮಹಿಳಾ PSI ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts