More

    ನವೆಂಬರ್​ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹರಿದುಬಂತು 127 ಕೋಟಿ ರೂ. ಕಾಣಿಕೆ!

    ನವದೆಹಲಿ: ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ನವೆಂಬರ್​ ತಿಂಗಳಲ್ಲಿ ದಾಖಲೆಯ ಆದಾಯ ಹರಿದುಬಂದಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಕಾರಣದಿಂದ ದೇವಸ್ಥಾನಕ್ಕೆ ಬರುವ ಭಕ್ತರ ಭೇಟಿ ಕಡಿಮೆಯಾಗಿತ್ತು. ಇದರಿಂದ ಆದಾಯವು ಕುಂಠಿತವಾಗಿತ್ತು. ಇದೀಗ ಕರೊನಾ ಮುಕ್ತವಾಗಿ, ನಿರ್ಬಂಧಗಳು ಸಂಪೂರ್ಣ ಮರೆಯಾಗಿರುವುದರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆದಾಯದಲ್ಲೂ ಭಾರಿ ಏರಿಕೆ ಕಂಡಿದೆ.

    ಇಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಮಾಧ್ಯಮಗಳ ಮುಂದೆ ಮಾತನಾಡಿ, ನವೆಂಬರ್​ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ 22.77 ಲಕ್ಷ ಭಕ್ತರು ಭೇಟಿ ನೀಡಿರುವುದಾಗಿ ತಿಳಿಸಿದರು.

    ನವೆಂಬರ್​ ತಿಂಗಳಲ್ಲಿ ಭಾರಿ ಆದಾಯ ಹರಿದುಬಂದಿದ್ದು, ಶ್ರೀವಾರಿ ಹುಂಡಿಯಲ್ಲಿ 127.31 ಕೋಟಿ ರೂ. ಹಣ ಸಂಗ್ರಹವಾಗಿದೆ. ಲಾಡು ಪ್ರಸಾದದಿಂದ 1.03 ಕೋಟಿ ರೂ. ಗಳಿಕೆಯಾಗಿದೆ. ಅಲ್ಲದೆ, ನವೆಂಬರ್​ ತಿಂಗಳಲ್ಲಿ 43.13 ಲಕ್ಷ ಮಂದಿ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದರೆ, 8.91 ಲಕ್ಷ ಮಂದಿ ಮುಡಿಕೊಟ್ಟಿದ್ದಾರೆ ಎಂದು ಧರ್ಮಾ ರೆಡ್ಡಿ ಅವರು ಹೇಳಿದರು.

    ಕಳೆದ ಫೆಬ್ರವರಿಯಲ್ಲಿ 79.34 ಕೋಟಿ ರೂ. ಇದ್ದ ಆದಾಯ, ಮಾರ್ಚ್‌ನಲ್ಲಿ ಸುಮಾರು 50 ಕೋಟಿ ರೂ.ನಷ್ಟು ಏರಿಕೆಯಾಗಿ 128.60 ಕೋಟಿ ರೂ.ಗೆ ತಲುಪಿತ್ತು. ಆದರೆ, ಏಪ್ರಿಲ್‌ನಲ್ಲಿ ಆದಾಯವು ಕೊಂಚಮಟ್ಟಿಗೆ ಕುಸಿದು 127 ಕೋಟಿ ರೂ.ಗೆ ಇಳಿದಿತ್ತು. ಆದರೆ, ಮೇ ತಿಂಗಳಲ್ಲಿ 130.29 ಕೋಟಿ ರೂ. ಆದಾಯ ಸಂಗ್ರಹವಾಗುವ ಮೂಲಕ ಒಂದೇ ತಿಂಗಳಲ್ಲಿ ಮೊದಲ ಬಾರಿಗೆ ಭಾರಿ ಪ್ರಮಾಣದ ಆದಾಯ ಹರಿದುಬಂದಿತ್ತು. ಇದೀಗ ನವೆಂಬರ್​ ತಿಂಗಳಲ್ಲೂ ಉತ್ತಮ ಆದಾಯ ಗಳಿಕೆಯಾಗಿದೆ. (ಏಜೆನ್ಸೀಸ್)​

    ನನ್ನ ಮಾತಿನಿಂದ ನನಗೇ ನಾಚಿಕೆಯಾಗುತ್ತಿದೆ; ಯಾರ ಭಾವನೆಗೂ ಧಕ್ಕೆ ತರುವ ಉದ್ಧೇಶವಿರಲಿಲ್ಲ ಎಂದು ಕ್ಷಮೆ ಕೇಳಿದ ಬದ್ರುದ್ದೀನ್ ಅಜ್ಮಲ್

    ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: 48 ಗಂಟೆ ಕಳೆದರೂ ಸಿಗದ ಸುಳಿವು, ಮಹಿಳಾ PSI ವಿರುದ್ಧ ಆಕ್ರೋಶ

    VIDEO: ಮದುವೆಗೆ ಹೋಗಲು ವಿಮಾನವನ್ನೇ ಬುಕ್ ಮಾಡಿದ ಕುಟುಂಬ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts