More

    VIDEO: ಮದುವೆಗೆ ಹೋಗಲು ವಿಮಾನವನ್ನೇ ಬುಕ್ ಮಾಡಿದ ಕುಟುಂಬ!

    ನವದೆಹಲಿ: ಬಸ್ಸು, ಕಾರು, ರೈಲಿನಲ್ಲೆಲ್ಲಾ ಸಂಬಂಧಿಕರು ಒಟ್ಟಾಗಿ ಮದುವೆ ದಿಬ್ಬಣ ಹೋಗುವುದನ್ನು ಕಂಡಿದ್ದೇವೆ. ಆದರೆ ಇದೀಗ ಇಲ್ಲೊಂದು ಕುಟುಂಬ ವಿಮಾನವೊಂದನ್ನು ಬುಕ್ ಮಾಡಿ, ಮದುವೆ ದಿಬ್ಬಣ ಹೊರಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ದಿಬ್ಬಣದಲ್ಲಿ ಸಂಭ್ರಮ, ಸಡಗರ ತುಂಬಿರುತ್ತದೆ. ಹಾಡುತ್ತಾ, ನಲಿಯುತ್ತಾ ಸಾಗುವುದೇ ಸೋಜಿಗ. ಕುಟುಂಬ ಸದಸ್ಯರೊಂದಿಗೆ ಮದುವೆ ದಿಬ್ಬಣ ಹೋಗುವುದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಸಂಭ್ರಮ.


    ಶ್ರೇಯಾ ಶಾ ಎಂಬ ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ವಿಮಾನದ ಮೂಲಕ ಮದುವೆ ದಿಬ್ಬಣ ಹೋಗಿರುವುದನ್ನು ಕಾಣಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಹೋದರಿಯ ಮದುವೆಗೆ ತೆರಳಲು ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದೇವೆ. ನಾವೆಲ್ಲರೂ ಸಂತಸದಿಂದ ಒಟ್ಟಾಗಿ ಮದುವೆಗೆ ತೆರಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇನ್ಸ್​​ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋವ್ನು ಒಂದು ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. (ಏಜೆನ್ಸೀಸ್)

    ಬಾಲಿವುಡ್ ಬ್ಯೂಟಿಯ ಬೋಲ್ಡ್​ ಅವತಾರ; ಹಾಟ್​ ಆಗಿ ಕಾಣಿಸಿಕೊಂಡ ದಿಶಾ ಪಟಾನಿ!

    VIDEO: ಕದ್ದಾಗ ಖುಷಿ…ನಂತರ ಪಶ್ಚಾತ್ತಾಪವಾಯ್ತು! ಕಳ್ಳನ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಪೊಲೀಸರು

    VIDEO: ಪೊಲೀಸರ ಅಮಾನವೀಯತೆಗೆ ತನ್ನ ಕಾಲುಗಳನ್ನೇ ಕಳೆದುಕೊಂಡ ಬೀದಿ ಬದಿ ವ್ಯಾಪಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts