More

    ಕರ್ನಾಟಕಕ್ಕೆ ಬರುವ ಮೊದಲೇ ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ; ನಾಳೆ ಇರಲಿದ್ಯಾ ಆ ಡೈಲಾಗ್?

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳಲ್ಲಿ ಪದೇಪದೆ ಕರ್ನಾಟಕಕ್ಕೆ ಬರುತ್ತಿದ್ದು, ನಾಳೆಯೂ ಮತ್ತೊಮ್ಮೆ ಆಗಮಿಸಲಿದ್ದಾರೆ. ಅದರಲ್ಲೂ ನಾಳೆ ಕರ್ನಾಟಕಕ್ಕೆ ಬರಲಿರುವ ಅವರು ಇಂದೇ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಈಗಾಗಲೇ ಕನ್ನಡಿಗರ ಗಮನ ಸೆಳೆದಿದ್ದಾರೆ.

    ನಾಳೆ ಪ್ರಧಾನಿ ಮೋದಿಯವರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಯಾಗಲಿರುವ ಕುರಿತು ಸಂಸದ ಪ್ರತಾಪ್ ಸಿಂಹ ಕನ್ನಡದಲ್ಲಿ ಮಾಡಿದ್ದ ಟ್ವೀಟ್, ಕೋಟ್​-ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅದಕ್ಕೆ ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ‘ನಮ್ಮ ಸರ್ಕಾರ ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವತ್ತ ಕೆಲಸ ಮಾಡುತ್ತಿದೆ. ಮೈಸೂರು ಮತ್ತು ಬೆಂಗಳೂರು ನಡುವಿನ ಹೆದ್ದಾರಿ ಮಾರ್ಗ ಆ ದಿಕ್ಕಿನತ್ತ ಹೆಜ್ಜೆಯಾಗಿದೆ..’ ಎಂದು ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಅರ್ಥಾತ್ ಮೋದಿ ಅಕೌಂಟ್​ನಿಂದ ಟ್ವೀಟ್​ ಆಗಿದ್ದು ಮೋಡಿ ಮಾಡಿದೆ.

    ಇದನ್ನೂ ಓದಿ: ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ

    ಇನ್ನು ನಿನ್ನೆಯಷ್ಟೇ ಸಂಸದೆ ಸುಮಲತಾ ಅವರು ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ಮಂಡ್ಯ ಮೂಲಕ ಹಾದು ಹೋಗುವ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ಉದ್ಘಾಟನೆ ಮಾಡಲಿರುವ ಮೋದಿ ನಾಳೆ ಕನ್ನಡದಲ್ಲಿ ಮಾತನಾಡುವ ಜೊತೆಗೆ ಅಂಬರೀಷ್​ ಸಿನಿಮಾದ ಡೈಲಾಗ್ ಕೂಡ ಹೇಳಬಹುದು ಎಂಬ ನಿರೀಕ್ಷೆ ಮೂಡಿದೆ. ಅದರಲ್ಲೂ ಅಂಬಿ ಸಿನಿಮಾ ಡೈಲಾಗ್ ಮೂಲಕವೇ ಅವರು ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡಲಿದ್ದಾರೆ ಎಂದೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಲಾರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts